ಕಾದಂಬರಿಯಲ್ಲಿ ಮೂರು ತಲೆಮಾರುಗಳ ಕತೆಯಿದೆ..


“ಕಾಲ ಕಾಲದಲ್ಲಿ ಆಗುತ್ತ ಬರೋ ಬದುಕು, ಶೈಲಿ, ನಡವಳಿಕೆ, ಹವ್ಯಾಸ, ವಾತಾವರಣಗಳ ಬದಲಾವಣೆ ಈ ಕಾದಂಬರಿಯ ಮೂರು ತಲೆಮಾರಿನಲ್ಲಿ ಕಾಣಿಸಿಕೊಳ್ಳುತ್ತೆ” ಎನ್ನುತ್ತಾರೆ ಪ್ರಸಾದ್. ಅವರು ಡಾ.ಕೆ. ಶಿವರಾಮ ಕಾರಂತ ಅವರ ‘ಮರಳಿ ಮಣ್ಣಿಗೆ’ ಕೃತಿ ಕುರಿತು ಬರೆದ ವಿಮರ್ಶೆ.

ಕೃತಿ: ಮರಳಿ ಮಣ್ಣಿಗೆ
ಲೇಖಕ: ಡಾ ಕೆ ಶಿವರಾಮ ಕಾರಂತ

ಈ ಕಾದಂಬರಿ ಓದಿದಾಗ ಬಾರೀ ಉದ್ದ ಅನಿಸುತ್ತೆ. ಸಿಕ್ಕಾಪಟ್ಟೆ ಎಳೆದಂಗು ಅನಿಸುತ್ತೆ. ಮತ್ತೆಮತ್ತೆ ಬೋರೂ ಅನಿಸುತ್ತೆ. ಆದ್ರೂ ಇದು ಇಷ್ಟು ವರ್ಷ ಆದ್ರೂ ಕನ್ನಡದ ಕ್ಲಾಸಿಕ್ ಪಟ್ಟಿಯಲ್ಲಿ ಸೇರಿದೆ ಅನ್ನೋದಕ್ಕೆ ಬೇಕಾದಷ್ಟು ಕಾರಣಗಳಿವೆ. ಮೂರು ತಲೆಮಾರುಗಳ ಕತೆಯನ್ನ ಈ ಕಾದಂಬರಿ ಹೇಳೋದರಿಂದ ಹಾಗೆಲ್ಲ ಅನಿಸೋದು ಸಾಮಾನ್ಯ. ಸ್ವಲ್ಪ ತಾಳ್ಮೆ, ಸಂಯಮ, ಮುಂತಾದವನೆಲ್ಲ ಕೇಳೋದು ಹೌದು. ನಾನೇ ಇದನ್ನ ನಾಲ್ಕನೇ ಸಲ ಓದ್ತಾ ಇರೋದು.

ಕಾಲ ಕಾಲದಲ್ಲಿ ಆಗುತ್ತ ಬರೋ ಬದುಕು, ಶೈಲಿ, ನಡವಳಿಕೆ, ಹವ್ಯಾಸ, ವಾತಾವರಣಗಳ ಬದಲಾವಣೆ ಈ ಕಾದಂಬರಿಯ ಮೂರು ತಲೆಮಾರಿನಲ್ಲಿ ಕಾಣಿಸಿಕೊಳ್ಳುತ್ತೆ. ಕೊನೆಯ ತಲೆಮಾರಿನ ಹೋರಾಟ, ಚಳುವಳಿಗಳು ಸಹ ಮುಖ್ಯವಾಗಿ ಕಾಣುತ್ತೆ. ಆ ಕಾಲದ ಪರಿಸ್ಥಿತಿ, ಸ್ಥಿತಿಗತಿ, ಏರಿಳಿತ, ಕುಟುಂಬ ವ್ಯವಸ್ಥೆ, ಪದ್ಧತಿ, ಬದುಕುಗಳನ್ನೆಲ್ಲ ಕೊಟ್ಟಿರೋದು ಈ ಕಾದಂಬರಿಯನ್ನ ಕೆಲವೊಮ್ಮೆ ಕಣ್ಣಿಗೆ ಕಟ್ಟುವಂತೆ ಮಾಡುತ್ತೆ.

ರಾಮ ಸತ್ಯಾಗ್ರಹಕ್ಕೆ ಸೇರವುದು, ಮತ್ತೆ ಮನೆಗೆ ಬರೋದು, ಐತಾಳರ ಎರಡೆರಡು ಮದುವೆ ಮುಂತಾದವುಗಳೆಲ್ಲ ನಡೆಯೋದರಿಂದ ಕಾದಂಬರಿ ಸಿಕ್ಕಾಪಟ್ಟೆ ಉದ್ದ ಆಯ್ತು ಅನಿಸಬಹುದು. ಆದ್ರೆ ನಿಮಗೆ ಆಕಾಲದ ಬದುಕು ಹೇಗಿತ್ತು ಅನ್ನೋ ಕೆಟ್ಟ ಕುತೂಹಲ ಇದ್ದರೆ ಈ ಕಾದಂಬರಿ ನಿಮಗೊಂದು ತೃಪ್ತಿ ನೀಡೋದು ಖಂಡಿತ. ಕರಾವಳಿಯ ಕೋಡಿಯ ಸುತ್ತಮುತ್ತ ಕಾದಂಬರಿ ನಡೆಯೋದರಿಂದ ಕೆಲವೊಂದು ಮಾತು, ಪದಗಳೆಲ್ಲ ಅರ್ಥ ಆಗದೆ ಇರಬಹುದು. ಆದರೂ ಓದಬಹುದು.

- ಪ್ರಸಾದ್

MORE FEATURES

ರೇಷ್ಮೆಯೆನ್ನುವುದು ಖಂಡದಾದ್ಯಂತ ಹೇಗೆ ಹರಿದಾಡಿತು ಎನ್ನುವುದರ ವಿವರವಿಲ್ಲಿದೆ..

31-10-2024 ಬೆಂಗಳೂರು

“ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳ ರಚನೆಯ ಮುಖ್ಯ ಸಮಸ್ಯೆಯೆಂದರೆ ಅದರ ಓಘ. ಓದುಗನ ಓದುಗ ಸಾಮರ್ಥ್ಯವನ್ನು, ಅವನ...

ಲೇಖಕನಿಗೆ ಈ ಪ್ರಜ್ಞೆ ಬಂದಾಗ ಉಂಟಾಗುವ ಕಸಿವಿಸಿ ಅಷ್ಟಿಷ್ಟಲ್ಲ

31-10-2024 ಬೆಂಗಳೂರು

“ಇದು ಚಳುವಳಿಯದ್ದಲ್ಲ, ಹೋರಾಟದ್ದಲ್ಲ, ಸ್ಲೋಗನ್ನಿದಲ್ಲ. ಇದು ಮೂಲತಃ ಒಂದು ಹಟ್ಟಿಯ, ಅಣ್ಣತಮ್ಮಂದಿರ ಬದುಕಿನ ಕತೆ...

ಆಸ್ಟ್ರೇಲಿಯನ್ನರು ಬಹಳ ಸ್ನೇಹಪರರು...

30-10-2024 ಬೆಂಗಳೂರು

"ಪರಮೇಶ್ವರ ಗುರುಸ್ವಾಮಿಯವರ ಈ ಕೃತಿ, ಆಸ್ಟ್ರೇಲಿಯಾದ ಚರಿತ್ರೆಯನ್ನು ಅವರ ಪ್ರವಾಸದ ಆಧಾರದಲ್ಲಿ ಸರಳವಾಗಿ ಮತ್ತು ಸ...