ಜಯಪ್ರಕಾಶಗೌಡ, ಸಂಗೀತಾ ಕಟ್ಟಿಗೆ 'ಕೆ.ಎಸ್.ನ ಪ್ರಶಸ್ತಿ' 

Date: 20-03-2025

Location: ಮಂಡ್ಯ


ಮಂಡ್ಯ: ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್‌ನ 5ನೇ ವರ್ಷದ ‘ಕೆ.ಎಸ್.ನ ಸಾಹಿತ್ಯ ಪ್ರಶಸ್ತಿ’ಗೆ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಮತ್ತು ದಕ್ಷಿಣ ಕನ್ನಡದ ಸಾಹಿತಿ ನಾ. ದಾಮೋದರ ಶೆಟ್ಟಿ ಆಯ್ಕೆಗೊಂಡಿದ್ದಾರೆ.

ಇದೇ ವೇಳೆ ‘ಕೆ.ಎಸ್.ನ ಕಾವ್ಯ ಗಾಯನ ಪ್ರಶಸ್ತಿ’ಗೆ ಧಾರವಾಡದ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಹಾಗೂ ಕಾಸರಗೋಡಿನ ರಮೇಶ್ ಚಂದ್ರ ಭಾಜನರಾಗಿದ್ದಾರೆ.

ಪ್ರಶಸ್ತಿಯು ತಲಾ ₹25 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಾರ್ಚ್ 23ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಈ ಕುರಿತು ಮಾಹಿತಿ ನೀಡಿದ್ದಾರೆ.

MORE NEWS

ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಕೃತಿಯ ಲೋಕಾರ್ಪಣಾ ಸಮಾರಂಭ

14-04-2025 ಬೆಂಗಳೂರು

ಬೆಂಗಳೂರು: ಪ್ರಗತಿ ಪ್ರಕಾಶನದಿಂದ ಪ್ರಕಟವಾದ ಲೇಖಕಿ ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಕೃತಿಯ ಲೋಕಾರ್ಪಣ...

ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಕೃತಿ ‘ಪಾಂಗಾಳ ಡಾಕ್ಟ್ರು’ ಲೋಕಾರ್ಪಣೆ ಸಮಾರಂಭ

14-04-2025 ಬೆಂಗಳೂರು

ಬೆಂಗಳೂರು: ಸಾಹಿತಿ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಷ...

ಅನುವಾದದಿಂದ ಕನ್ನಡದ ಜ್ಞಾನ ಪರಂಪರೆಗೆ ಜಾಗತಿಕ ಮಹತ್ವ: ಪ್ರೊ. ವಿಕ್ರಮ ವಿಸಾಜಿ 

13-04-2025 ಬೆಂಗಳೂರು

ಬಸವಕಲ್ಯಾಣ: "ಯೂರೋಪ್ ನಮಗೆ ಅರ್ಥವಾದಷ್ಟು ಯೂರೋಪಿಗೆ ನಾವು ಅರ್ಥವಾಗಿಲ್ಲ. ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ...