Date: 10-12-2024
Location: ಬೆಂಗಳೂರು
ಬೆಂಗಳೂರು: `ಜಾನಪದ ಕಲೆ ನಮ್ಮ ಸಂಸ್ಕೃತಿಯ ಮೂಲ ತಾಯಿ ಬೇರು,' ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಹಿ. ಚಿ. ಬೋರಲಿಂಗಯ್ಯ ಅವರು ಭಾರತೀಯ ವಿದ್ಯಾಭವನ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಜತೆಗೂಡಿ ಆಯೋಜಿಸಿದ ಕಲಾಯಾತ್ರೆಯ ವಿಚಾರ ಸಂಕಿರ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
`ಹಿಂದೆ ವಿದ್ಯೆ ಆರೋಗ್ಯ ರಾಜಕಾರಣದಂಥ ಸೇವಾ ವಲಯಗಳಾಗಿದ್ದವು ಈಗ ಅವೆಲ್ಲವೂ ಉದ್ಯಮಗಳಾಗಿವೆ ಜಾನಪದ ಕೂಡ ಉದ್ಯಮವಾಗಿ ಜಾನಪದಕಲಾವಿದರ ಬದುಕು ಕೂಡ ಸುಧಾರಿಸಿಕೊಳ್ಳಬೇಕಾಗಿದೆ,' ಎಂದರು.
ಹಿರಿಯ ಇತಿಹಾಸಕಾರರಾದ ಚೂಡಾಮಣಿ ನಂದಗೋಪಾಲ್ ಮಾತನಾಡಿ, `ಸಂವೃದ್ಧವಾದ ಜಾನಪದ ಪರಂಪರೆಯಕಡೆಗೆ ಆಕರ್ಷೊಸುವ ಕೆಲಸ ಮಾಡಬೇಕಿದೆ,' ಎಂದರು.
ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಮಾತನಾಡಿ, `ನಮ್ಮ ಪರಂಪರೆಯ ಕರುಳಬಳ್ಳಿಯ ಸಂಬಂಧ ಪ್ರಕೃತಿ ಜತೆಗಿತ್ತು, ಈಗ ನಮ್ಮಜನಸಂಖ್ಯೆಗಿಂತ ಹೆಚ್ಚು ಮೊಬೈಲ್ ಗಳಿವೆ. ನಮ್ಮ ಮುಂದಿರುವ ಜಾನಪದ ಕಲಾಕಾರರ ಬದುಕು ಇಷ್ಟು ವರ್ಷವಾದರೂ ದುಸ್ಥಿತಿಯಲ್ಲಿದೆ,' ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಎಚ್.ಎನ್. ಸುರೇಶ್ ಮಾತನಾಡಿ, `ಜನವರಿ 22ರಿಂದ ಮೂರು ದಿನಗಳು ಚಿತ್ರಕಲಾ ಪ್ರದರ್ಶನ ನಡೆಯಲಿದೆ. ನೂರು ಕಲಾಪ್ರಕಾರಗಳ ಒಂದು ಸಾವಿರ ಕಲಾವಿದರು ಕರ್ನಾಟಕ ಪಶ್ಚಿಮ ಬಂಗಾಳ ಜಾಬಿನ ಜಾನಪದ ಕಲಾವಿದರು ಅತ್ಯುತ್ತಮ ಜಾನಪದ ಕಲಾ ಮತ್ತು ಆದಿವಾಸಿ ಕಲಾಪ್ರದರ್ಶನಗಳನ್ನು ನೀಡಲಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಅನುಪಮ ಸೇವೆಸಲ್ಲಿಸಿದ ಕಲಾವಿದರಿಗೆ ಒಂದು ಲಕ್ಷರೂಪಾಯಿಗಳ ನಗದು ಬಹುಮಾನ ನೀಡಲಾಗುತ್ತಿದೆ. ಯುವ ಜನರು ಜಾನಪದಕಲಾ ಪ್ರಕಾರಗಳ ಕಡೆಗೆ ಆಕರ್ಷಿತರಾಗಲು ವಿದ್ಯಾರ್ಥಿಗಳಿಗೆ 1 ಲಕ್ಷ 75ಸಾವಿರ ಮತ್ತು 50 ಸಾವಿರ ರೂಪಾಯಿಗಳ ಬಹುಮಾನ ನೀಡಲಾಗುವುದು ಎಂದರು.
ಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀಕೆ.ರಾವ್ ನಾಟಕಅಕಾಡಮಿಯ ಸದಸ್ಯರವೀಂದ್ರನಾಥ ಸಿರಿವರ ವಿಧುಷಿ ಟಿಎಸ್‌ಸತ್ಯವತಿ ಕ್ರಾಪ್ಟ್ ಕೌನ್ಸಿಲ್‌ನ ಮಂಗಳಾ ಅಭಿನವ ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.