Date: 08-11-2024
Location: ಬೆಂಗಳೂರು
ಬೆಂಗಳೂರು: ಸಾಹಿತ್ಯ ಭಂಡಾರ ವತಿಯಿಂದ ಸಹನಾ ವಿಜಯಕುಮಾರರ ‘ಮಾಗಧ’ ಅಶೋಕನನ್ನು ಕುರಿತ ಐತಿಹಾಸಿಕ ಕಾದಂಬರಿಯ ಲೋಕಾರ್ಪಣಾ ಸಮಾರಂಭವು 2024 ನಂ. 08 ಶುಕ್ರವಾರದಂದು ನಗರದ ಎಚ್.ಎನ್. ಮಲ್ಟಿಮೀಡಿಯಾ ಹಾಲ್ ನಲ್ಲಿ ನಡೆಯಿತು.
ಕೃತಿ ಕುರಿತು ಶತಾವಧಾನಿ ಡಾ. ಆರ್. ಗಣೇಶ್, "ಮಾರ್ಮಿಕವಾದ ಲೌಕಿಕ ಸತ್ಯಗಳು ಹಾಗೂ ಶಾಶ್ವತ ಸತ್ಯಗಳನ್ನು ಕಾದಂಬರಿಯಲ್ಲಿ ಕಾಣಬಹುದಾಗಿದ್ದು, ಅದೇ ಇಲ್ಲಿನ ಧ್ವನಿಯಾಗಿದೆ. ಇತಿಹಾಸದ ಐತಿಹಾಸಿಕ ಪಾವಿತ್ರ್ಯಕ್ಕೆ ಧಕ್ಕೆ ಬರದಂತೆ, ಸೃಷ್ಟಿಶೀಲವಾಗಿ ರಚಿಸಲು ಸಾಧ್ಯವಾಗುವುದು, ಇತಿಹಾಸದ ವ್ಯಕ್ತಿಗಳನ್ನು ನಮ್ಮ ಭಾವದ ಜೊತೆಗೆ ಸಮೀಕರಿಸಿದಾಗ. ಆಗ ಮಾತ್ರ ಕಾದಂಬರಿ ನೈಜ್ಯವಾಗಿ ಮೂಡಿಬರುತ್ತದೆ," ಎಂದು ಹೇಳಿದರು.
ಹಿರಿಯ ಲೇಖಕ ಡಾ. ಗಜಾನನ ಶರ್ಮ ಮಾತನಾಡಿ, "ಸಹನಾ ಅವರು ಅಶೋಕನ ನಿಜರೂಪವನ್ನು ಕೃತಿಯ ಮೂಲಕ ತೆರೆದಿಟ್ಟಿದ್ದಾರೆ. ಅಶೋಕನು ಮಾಗಧ ರಾಜ್ಯವನ್ನು ಆಳುತ್ತಾ ಆಳುತ್ತಾ ಚಕ್ರವರ್ತಿ ಸ್ಥಾನದಲ್ಲಿ ನಿಂತುಕೊಂಡು ಅದನ್ನು ಜೊತೆಯಲ್ಲಿಟ್ಟುಕೊಂಡೇ, ಇಡೀ ದೇಶದಲ್ಲಿ ಒಂದು ರಾಷ್ಟ್ರೀಯ ಪ್ರಜ್ಞೆ ಬರುವ ಹಾಗೆ ಮಾಡಿದ್ದ. ಇಡೀ ಕೃತಿಯಲ್ಲಿ ಅವರು ಅಶೋಕ ತಾನೇನಾದರೂ ಅಕಸ್ಮತಾಗಿ ಕಾಳಿಂಗ ಯುದ್ಧವನ್ನು ಮಾಡಲು ಸಾಧ್ಯವಿಲ್ಲವೆಂದು ಅಂದುಕೊಂಡಿದ್ದರೆ ಏನು ಆಗಲು ಸಾಧ್ಯವಿರಲಿಲ್ಲವೇನೋ ಎನ್ನುವುದನ್ನು ಇಲ್ಲಿ ನಿರೂಪಿಸುತ್ತಾ ನಮ್ಮ ಮನಸ್ಸಿಗೆ ಯಾವ ವಿಚಾರ ಹೋಗಬೇಕು ಎಂಬವುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಆ ಕಾಲದಲ್ಲಿದ್ದ ನಾಲ್ಕು ಧರ್ಮಗಳನ್ನು ಬಳಸಿ, ಸೂಕ್ಷ್ಮವನ್ನು ತಿಳಿಸಿ, ಧರ್ಮಗಳು ತಮ್ಮ ಭಾರಕ್ಕೆ ತಾವೇ ಹೇಗೆ ಕುಸಿದು ಬಿತ್ತು ಎಂಬುದನ್ನು ಕೂಡ ಇಲ್ಲಿ ತಿಳಿಸಿದ್ದಾರೆ," ಎಂದರು.
ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ, "ಅಶೋಕನ ಜೀವನದ ಹಲವು ಕಥನಗಳು ಇಲ್ಲಿ ಭಿನ್ನ ರೂಪವನ್ನು ಪಡೆದುಕೊಂಡಿದೆ. ಅಶೋಕವನ ಚಿತ್ರಣವನ್ನು ಅಥವಾ ಇತಿಹಾಸವನ್ನು ಇಲ್ಲಿ ಕಟ್ಟಿಕೊಡುವಾಗ ಈಗ ಏನು ಅಶೋಕನ ಬಗ್ಗೆ ನಮ್ಮಲ್ಲೆಲ್ಲಾ ನಂಬಿಕೆ ಇದೆಯೋ, ಆ ನಂಬಿಕೆಯಿಂದ ಹೊರಗೆ ಬಂದು ತಮಗೆ ಅಶೋಕನ ಶಾಸನ ಹಾಗೂ ಆ ಕಾಲದ ಗ್ರಂಥಗಳ ಮೂಲಕ ಅಧ್ಯಯನ ಮಾಡಿ, ವಿಚಾರಗಳನ್ನು ಸಂಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಇದೊಂದು ಅತ್ಯಮೂಲ್ಯ ಕೃತಿಯಾಗಿ ಮೂಡಿಬಂದಿದೆ," ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪ್ರಧಾನ ಗುರುದತ್ತ ಅವರು ವಹಿಸಿದ್ದರು.
ಸಮಾರಂಭದಲ್ಲಿ ಹಲವಾರು ಗಣ್ಯರು, ಸಾಹಿತ್ಯಾಸಕ್ತರು ನೆರೆದಿದ್ದರು.
ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
©2024 Book Brahma Private Limited.