ಹುಚ್ಚು ಮನಸ್ಸಿನ ಒಳಹೊರಗನ್ನು ಬಿಚ್ಚಿಡುವ ಪ್ರಯತ್ನ ಇಲ್ಲಿದೆ


""ಕನಸೇ ಕಾಡುಮಲ್ಲಿಗೆ" ಆರಂಭವಾಗುವುದು ಹೀಗೆ. ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಓದುವ ಹಾರ್ಮೋನ್ ಏರುಪೇರಾಗುವ ವಯಸ್ಸಿನ ಹುಡುಗ-ಹುಡುಗಿಯರನ್ನು ಕೇಂದ್ರವಾಗಿರಿಸಿಕೊಂಡ ಕಥೆ ಇದು. ಹುಚ್ಚು ಮನಸ್ಸಿನ ಒಳಹೊರಗನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ," ಎ‌ನ್ನುತ್ತಾರೆ ಚಂದನ್‌ಎಸ್.ವಿ. ಅವರು ಮಧು ವೈ.ಎನ್ ಅವರ ‘ಕನಸೇ ಕಾಡುಮಲ್ಲಿಗೆ’ ಕೃತಿ ಕುರಿತು ಬರೆದಿರುವ ಅನಿಸಿಕೆ.

ಗಟ್ಟಿ ಕಥೆಯೊಂದಿಗೆ ಶಿರಾ ಸೀಮೆಯ ದೇಸಿ ಭಾಷೆಯ ಸೊಗಡನ್ನು ಹಿಡಿದಿಡುವ ಕಾದಂಬರಿ 'ಕನಸೇ ಕಾಡುಮಲ್ಲಿಗೆ'. ಹರೆಯದ ಮನಸ್ಸುಗಳ ಒಳಮಾತುಗಳಿಗೆ ಕನ್ನಡಿ ಹಿಡಿಯುತ್ತಲೇ ಓದುವಾಗ ಜೀವ ತಳೆದ ಪಾತ್ರಗಳು ಕಣ್ಮರೆಯಾದಾಗ ತಡವರಿಸುವಂತಾಗುತ್ತದೆ. ಅದು ಮಧು ಅವರ ಕಥನ ಕಲೆಯ ಶಕ್ತಿ. ಲೇಖನದ ಆರಂಭದಲ್ಲಿರುವ, ಈ ಕಾದಂಬರಿಯಲ್ಲಿರುವ ಇಂದಿರಾ ಗಾಂಧಿ ಮತ್ತು ಮಹಾತ್ಮಾ ಗಾಂಧಿ ಯಾರು ಅಂತ ಗೊತ್ತಾದ್ರೆ ಹೊಟ್ಟೆಹುಣ್ಣಾಗುವಷ್ಟು ನಗ್ತೀರಿ ಮತ್ತೆ.

"ಕನಸೇ ಕಾಡುಮಲ್ಲಿಗೆ" ಆರಂಭವಾಗುವುದು ಹೀಗೆ. ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಓದುವ ಹಾರ್ಮೋನ್ ಏರುಪೇರಾಗುವ ವಯಸ್ಸಿನ ಹುಡುಗ-ಹುಡುಗಿಯರನ್ನು ಕೇಂದ್ರವಾಗಿರಿಸಿಕೊಂಡ ಕಥೆ ಇದು. ಹುಚ್ಚು ಮನಸ್ಸಿನ ಒಳಹೊರಗನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ.

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗ್ರಾಮೀಣ ಭಾಷೆ ಈ ಕಾದಂಬರಿಯಲ್ಲಿ ಕಾಣಬಹುದು ಗಟ್ಟಿ ಕಥೆಯ ಜೊತೆಗೆ ಭಾಷೆಯ ಸೊಗಸಿನ ಕಾರಣಕ್ಕೂ ಓದುಗರಿಗೆ ಮೆಚ್ಚುಗೆಯಾಗುತ್ತೆ “ಮಾರ್‌ ಮಾರ್ನಿಂಗ್ ಬೇಗನೇ ಎಚ್ರ ಆಯ್ತು. ಆದ್ರೆ ಬೆಳ್‌ ಬೆಳಿಗೆ ಬೀಳೋ ಕಜ್ಜಾಯ ಸುಡ್ತಿರ್ತವೆ ಅಂತೇಳಿ ಚೂರು ತಣ್ಗಾಗ್ಲಿ ಅಂತ ಅಂಗೇ ಗುಬ್ರಾಕ್ಕೊಂಡು ಮಲ್ಕಂಡಿದ್ದೆ.” ಈ ಥರದ ಎಷ್ಟೋ ಸಾಲುಗಳು ಇಲ್ಲಿವೆ.

ಒಂದೊಳ್ಳೆ ಲವ್‌ಸ್ಟೋರಿ, ರೈತರ ಬದುಕು, ಎಪಿಎಂಸಿ ಅವ್ಯವಹಾರಗಳು... ಹೀಗೆ ಕಣ್ಣರಳಿಸಿ ಜಗತ್ತು ನೋಡುತ್ತಾ, ಬದುಕು ಸಾಕಷ್ಟು ಇದೆ ಎಂದು ಒಲಿದ ಜೀವಗಳು ಖುಷಿಪಡುವಾಗಲೇ ಏನೋ ಘಟಿಸಿ ಥಿಯೇಟರ್‌ನಲ್ಲಿ ಲೈಟ್ ಆನ್ ಆದಂತೆ ಆಗಿಬಿಡುತ್ತೆ. ಇನ್ನೂ ಸಿನಿಮಾ ಇದೆ ಅಂದ್ಕೊಳ್ತಾ ಇದ್ದ ಪ್ರೇಕ್ಷಕ ಸಾವರಿಸಿಕೊಳ್ಳುವ ಮೊದಲೇ ಸಿನಿಮಾ ಮುಗಿದುಹೋಗಿರುತ್ತೆ. ಯಾಕೆ ಅಂತ ತಿಳಿಬೇಕು ಅಂದ್ರೆ ಪುಸ್ತಕ ಓದಿ, ಒಂದಿಷ್ಟು ಪ್ರೇಮಿಗಳ ಭಾವನೆಗಳಿಗೆ ಅಕ್ಷರವಾಗುವ ಉದ್ದೇಶಕ್ಕಷ್ಟೇ ಸೀಮಿತವಾಗಿರದೆ . ಜೊತೆಗೆ ಶಿರಾ ಸೀಮೆಯ ರೈತರ ಕಷ್ಟದ ಕಣ್ಣೀರಿಗೆ, ಹರಿದ ರಕ್ತಕ್ಕೂ ಇದರಲ್ಲಿನ ಅಕ್ಷರಗಳು ಜೀವ ಕೊಟ್ಟಿವೆ. ಆದ್ದರಿಂದಲೇ "ಕನಸೇ ಕಾಡುಮಲ್ಲಿಗೆ" ಇನ್ನೂ ಜಾಸ್ತಿನೇ ಇಷ್ಟವಾಗುತ್ತೆ.

- ಚಂದನ್‌ಎಸ್.ವಿ

MORE FEATURES

ಆತ್ಮಾನುಸಂಧಾನಕ್ಕೆ ಮುನ್ನುಡಿಯೆಂಬ ಭಾವಾನುಸಂಧಾನ

21-09-2024 ಬೆಂಗಳೂರು

“ಇಲ್ಲಿಯ ಕವಿತೆಗಳಿಗೆ ಬಹು ನಿಶ್ಚಿತವಾದ ನಡೆ ಮತ್ತು ಗುರಿಯಿದೆ. ಇದು ಹಲವು ಕವಿತೆಗಳಲ್ಲಿ ಅಮೂರ್ತದೆಡೆಗಿನ ಹುಡುಕ...

ನಾಲಿಗೆ ಸಪ್ಪೆ ಸಪ್ಪೆ ಅನಿಸಿದಾಗೆಲ್ಲ ಓದೋಕೆ ಇಷ್ಟ ಪಡೋ ಲೇಖಕರ ಕಾದಂಬರಿಯಿದು

21-09-2024 ಬೆಂಗಳೂರು

“ಚಿದಂಬರ ರಹಸ್ಯ ಮುಖ್ಯವಾಗಿ ರಹಸ್ಯಗಳ ಸುತ್ತ ನಡೆಯೋ ಕಾದಂಬರಿಯಾದರೂ ಕೊನೆಗೆ ಇದರ ಕೊನೆ ಹೆಚ್ಚು ನೆನಪಲ್ಲಿ ಉಳಿಯು...

ಯುವ ಜನಾಂಗ ಹೇಗಿರಬಾರದು ಎಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕೃತಿ ‘ಬೇವಾಚ್’

21-09-2024 ಬೆಂಗಳೂರು

"ಕತ್ತಲಾಗುತ್ತಿದ್ದಂತೆ ನಗರದ ಚಿತ್ರಣ ಬದಲಾಗುವುದು ಸಹಜ, ಯಾವ್ಯಾವುದೊ ಉದ್ದೇಶಗಳಿಗೆ ಲೈವ್ ಬ್ಯಾಂಡಿಗೆ ಜನರು ಭೇಟಿ...