ನಾಲಿಗೆ ಸಪ್ಪೆ ಸಪ್ಪೆ ಅನಿಸಿದಾಗೆಲ್ಲ ಓದೋಕೆ ಇಷ್ಟ ಪಡೋ ಲೇಖಕರ ಕಾದಂಬರಿಯಿದು


“ಚಿದಂಬರ ರಹಸ್ಯ ಮುಖ್ಯವಾಗಿ ರಹಸ್ಯಗಳ ಸುತ್ತ ನಡೆಯೋ ಕಾದಂಬರಿಯಾದರೂ ಕೊನೆಗೆ ಇದರ ಕೊನೆ ಹೆಚ್ಚು ನೆನಪಲ್ಲಿ ಉಳಿಯುವಂತದ್ದು. ಊರಿಗೆ ಊರೆ, ಜನಕ್ಕೆ ಜನವೇ, ಸಮುದಾಯವೇ ಒಂದು ಕಿಡಿಗೆ ಹೊತ್ತಿ, ಎಲ್ಲಾ ಪಾತ್ರಗಳು ಅವರವರಿಗೆ ಅನುಗಣವಾಗಿ ಉರಿಯೋ ಕಾದಂಬರಿಯಿದು” ಎನ್ನುತ್ತಾರೆ ಪ್ರಸಾದ್. ಅವರು ಪೂರ್ಣಚಂದ್ರ ತೇಜಸ್ವಿ ಅವರ ‘ಚಿದಂಬರ ರಹಸ್ಯ’ ಕಾದಂಬರಿ ಕುರಿತು ಬರೆದ ವಿಮರ್ಶೆ.

ಪುಸ್ತಕ: ಚಿದಂಬರ ರಹಸ್ಯ
ಲೇಖಕ: ಪೂರ್ಣಚಂದ್ರ ತೇಜಸ್ವಿ
ಪ್ರಕಾಶನ: ಪುಸ್ತಕ ಪ್ರಕಾಶನ

ಸಾಕಾದಾಗಲೆಲ್ಲ ಏನಾದ್ರೂ ಒಂತರ ಹೊಸದು ತರಹದ್ದು ಓದಬೇಕು ಅಂತ ನಾಲಿಗೆ ಸಪ್ಪೆ ಸಪ್ಪೆ ಅನಿಸಿದಾಗೆಲ್ಲ ಓದೋಕೆ ಇಷ್ಟ ಪಡೋ ಲೇಖಕರ ಕಾದಂಬರಿಯಿದು.

ಚಿದಂಬರ ರಹಸ್ಯದ ಬಗ್ಗೆ ಸಾಧಾರಣ ನಿಮಗೆ ಗೊತ್ತಿರೋದೆ ಎಲ್ಲ. ಆದ್ರೂ ಚಿದಂಬರ ರಹಸ್ಯ ಯಾವ್ದು ಅಂತ ಪೂರ್ತಿ ಕಾದಂಬರಿಯಲ್ಲಿ ಗೊತ್ತಾಗಲ್ಲ. ಯಾಕಂದ್ರೆ ಇಲ್ಲಿ ಬರೋ ಬಹುತೇಕ ಎಲ್ಲ ರಹಸ್ಯಗಳು ಒಂತರಹ ಬಗೆಹರಿಯದೇ ಉಳಿಯುತ್ತೆ. ವಿಜ್ಞಾನಿ ಜೋಗಿಹಾಳ್‌ರ ಸಾವು, ಏಲಕ್ಕಿ ಬೆಲೆ ಕುಸಿತ, ಕೃಷ್ಣೇಗೌಡರ ಮನೆ ಮೇಲೆ ಬೀಳುತ್ತಿದ್ದ ಕಲ್ಲು, ಗೋಸಾಯಿಗಳು, ಸಾಬರು ಎಲ್ರೂ ಒಂತರ ರಹಸ್ಯರಾಗೇ ಪೂರ್ತಿ ಕಾದಂಬರಿಯಲ್ಲಿ ಮುಳುಗಿರುತ್ತಾರೆ. ಇನ್ನೊಂದು ಈ ಕಾದಂಬರಿಯಲ್ಲಿ ತೇಜಸ್ವಿ ಇರಲ್ಲ. ಸಾಧಾರಣ ಒಂದು ಪುಸ್ತಕ ಅಂದ್ರೆ ಲೇಖಕ ತನ್ನ ಅನುಭವಗಳಾನೇ ಸೇರ್ಸಿ ಬರೆಯೋದರಿಂದ ಒಂದಲ್ಲಾ ಒಂದು ರೀತಿಯಲ್ಲಿ ಅವನು ಪಾತ್ರನಾಗೇ ಉಳಿತಾರೆ. ಕೊನೆಪಕ್ಷ ಓದುಗನಿಗೆ ಗೊತ್ತಾಗದಿದ್ದರು ನಾನಿಲ್ಲಿ ಇದೀನಿ ಅಂತ ಅವರಿಗೆ ಗೊತ್ತಿರುತ್ತೆ. ತೇಜಸ್ವಿ ಇಲ್ಲಿ ಎಲ್ಲಿ ರಹಸ್ಯವಾಗಿ ಇದಾರೋ ಗೊತ್ತಿಲ್ಲ .

ಈ ಕಾದಂಬರಿಗೆ ಜುಗಾರಿ ಕ್ರಾಸ್, ಮಾಯಾಲೋಕದ ಹಾಗೆಲ್ಲ ಇವ್ರು ಇಲ್ಲಿ ಜಾಸ್ತಿ ಪಾತ್ರ ವಹಿಸ್ತಾರೆ ಅಂತೆಲ್ಲ ಹೇಳೋಕಾಗಲ್ಲ. ಕತೆ ಇದೆ, ರಹಸ್ಯ ಇದೆ, ಕುತೂಹಲ ಹೆಚ್ಚಾಗುತ್ತೆ, ಕೊನೆಗೊಂದು ಸಾಧಾರಣ ಕಾದಂಬರಿಗಳಲ್ಲಿ ಬರೆದೇ ಇರೋ ಅಂತ್ಯ ಬರುತ್ತೆ, ಅದು ಅಂದಿನಿಂದ ಇಂದಿನವರೆಯೆವರಿಗೂ ಇಷ್ಟ ಆಗುತ್ತೆ.

ಚಿದಂಬರ ರಹಸ್ಯ ಮುಖ್ಯವಾಗಿ ರಹಸ್ಯಗಳ ಸುತ್ತ ನಡೆಯೋ ಕಾದಂಬರಿಯಾದರೂ ಕೊನೆಗೆ ಇದರ ಕೊನೆ ಹೆಚ್ಚು ನೆನಪಲ್ಲಿ ಉಳಿಯುವಂತದ್ದು. ಊರಿಗೆ ಊರೆ, ಜನಕ್ಕೆ ಜನವೇ, ಸಮುದಾಯವೇ ಒಂದು ಕಿಡಿಗೆ ಹೊತ್ತಿ, ಎಲ್ಲಾ ಪಾತ್ರಗಳು ಅವರವರಿಗೆ ಅನುಗಣವಾಗಿ ಉರಿಯೋ ಕಾದಂಬರಿಯಿದು.

- ಪ್ರಸಾದ್

MORE FEATURES

ಹುಚ್ಚು ಮನಸ್ಸಿನ ಒಳಹೊರಗನ್ನು ಬಿಚ್ಚಿಡುವ ಪ್ರಯತ್ನ ಇಲ್ಲಿದೆ

21-09-2024 ಬೆಂಗಳೂರು

""ಕನಸೇ ಕಾಡುಮಲ್ಲಿಗೆ" ಆರಂಭವಾಗುವುದು ಹೀಗೆ. ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಓದುವ ಹಾರ್ಮೋನ್ ಏರುಪ...

ಯುವ ಜನಾಂಗ ಹೇಗಿರಬಾರದು ಎಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕೃತಿ ‘ಬೇವಾಚ್’

21-09-2024 ಬೆಂಗಳೂರು

"ಕತ್ತಲಾಗುತ್ತಿದ್ದಂತೆ ನಗರದ ಚಿತ್ರಣ ಬದಲಾಗುವುದು ಸಹಜ, ಯಾವ್ಯಾವುದೊ ಉದ್ದೇಶಗಳಿಗೆ ಲೈವ್ ಬ್ಯಾಂಡಿಗೆ ಜನರು ಭೇಟಿ...

ಸ್ವಾಮಿರಾವ್ ಕುಲಕರ್ಣಿ ಅವರು ಬಹುಮುಖ ಪ್ರತಿಭಾವಂತರು

21-09-2024 ಬೆಂಗಳೂರು

“ಸ್ವಾಮಿರಾವ್ ಕುಲಕರ್ಣಿ ಅವರು ಕನ್ನಡ ಭಾಷೆ ಸಾಹಿತ್ಯ ನುಡಿಗಾಗಿ ತಮ್ಮದೇ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ....