ಎಂದಿಗೂ ಹೆಣ್ಣು ಉರಿಯಲ್ಲಿ ಅರಳುವ ಹೂವು..


"ಸುಮಾರು 200 ಪುಟಗಳ ಈ ಕಾದಂಬರಿಯಲ್ಲಿ ಅಕ್ಕ ಟಿಲ್ಡಾಳ ಕಥೆಯೊಂದಿಗೆ ಅವಳ ಪುಟ್ಟ ತಂಗಿಯ ಕಥೆಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಲಾಗಿದೆ. ಓದುತ್ತಾ ಹೋಗುತ್ತದ್ದಂತೆ, ನನಗೆ ನಮ್ಮಲ್ಲಿನ ಮನೆಮನೆ ಕಥೆಯಂತೆಯೇ ಭಾಸವಾಗಿ, ಯಾವುದೋ ಭಾಷೆಯ ಅನುವಾದ ಎನ್ನುವ ಭಾವ ಮರೆಯಾಗಿ ಹೋಯಿತು," ಎನ್ನುತ್ತಾರೆ ಸಂಧ್ಯಾ ಯಶಸ್ವಿ. ಅವರು ಹರ್ಷ ರಘುರಾಮ್ ಅವರ ಅನುವಾದಿತ 'ನನ್ನ ತಂಗಿ ಈಡಾ' ಕೃತಿ ಕುರಿತು ಬರೆದ ವಿಮರ್ಶೆ.

ಇತ್ತೀಚೆಗೆ ಛಂದ ಪುಸ್ತಕ ಪ್ರಕಟಿಸಿದ, ಜರ್ಮನ್ ಭಾಷೆಯಿಂದ ಹರ್ಷ ರಘುರಾಮ್ ಅನುವಾದಿಸಿದ 'ನನ್ನ ತಂಗಿ ಈಡಾ' ಒಂದೊಳ್ಳೆ ಪುಸ್ತಕ ಓದಿದ ಅನುಭವ. ಕನ್ನಡಿಗರು ಕೊಂಡು ಓದಬೇಕಾದ ಪುಸ್ತಕಗಳ ಪಟ್ಟಿಗೆ ಒಂದು ಸೇರ್ಪಡೆ. ಮೂಲ ಲೇಖಕಿ ಕಾರೊಲೀನ ವಾಲ್ ಗೂ, ಅನುವಾದಕ ಹರ್ಷ ರಘುರಾಮ್ ಗೂ ಪ್ರೀತಿಯ ಅಭಿನಂದನೆಗಳು.

ಸುಮಾರು 200 ಪುಟಗಳ ಈ ಕಾದಂಬರಿಯಲ್ಲಿ ಅಕ್ಕ ಟಿಲ್ಡಾಳ ಕಥೆಯೊಂದಿಗೆ ಅವಳ ಪುಟ್ಟ ತಂಗಿಯ ಕಥೆಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಲಾಗಿದೆ. ಓದುತ್ತಾ ಹೋಗುತ್ತದ್ದಂತೆ, ನನಗೆ ನಮ್ಮಲ್ಲಿನ ಮನೆಮನೆ ಕಥೆಯಂತೆಯೇ ಭಾಸವಾಗಿ, ಯಾವುದೋ ಭಾಷೆಯ ಅನುವಾದ ಎನ್ನುವ ಭಾವ ಮರೆಯಾಗಿ ಹೋಯಿತು.

ಕಾದಂಬರಿಯ ಮೂಲವು ಜರ್ಮನ್ ಭಾಷೆಯಾದರೂ, ಅಲ್ಲಿನ ಸಮಾಜದ ವಸ್ತುಸ್ಥಿತಿಯನ್ನು represent ಮಾಡಿದರೂ, ಅಲ್ಲಿನ ಹಾಗೂ ಭಾರತದ ಮಧ್ಯಮ ಮತ್ತು ಕೆಳಮಧ್ಯಮದ ಯುವ ಜನಾಂಗದ ತಲ್ಲಣ ತುಡಿತಗಳು ಬಹುತೇಕ ಒಂದೆ ತೆರನಾಗಿದ್ದು, ಆದರೆ ಅದಕ್ಕೆ ಪರಸ್ಪರ ಸಮಾಜಗಳು ಸ್ಪಂದಿಸುವ ರೀತಿ ವಿಭಿನ್ನವಾಗಿದೆ. ಸಾಮಾನ್ಯವಾಗಿ ಮನೆಯ ಹಿರಿಯ ಮಕ್ಕಳು ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ನಮ್ಮ ಸಮಾಜದ ಅಲಿಖಿತ ಅಪೇಕ್ಷೆ. ಟಿಲ್ಡಾಳೂ ಸಹ ತನ್ನ ಪಾಲಕರ ಅನುಪಸ್ಥಿತಿಯಲ್ಲಿ ಸಂಸಾರದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾಳೆ. ತನ್ನ ತಂಗಿಗೆ ತನಗೊದಗಿದಂತಹ ಯಾವ ಬವಣೆಗಳ ತಾಪ ತಾಗದಂತೆ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸುತ್ತಾಳೆ. ಇನ್ನು ಪುಟ್ಟ ಈಡಾಳೊ, ವಯಸ್ಸಿಗೆ ಮೀರಿದ ಪ್ರಬುದ್ಧೆ ! ಅಕ್ಕನ ನೋವುಗಳಿಗೆ ಸ್ಪಂದಿಸುತ್ತಾ ತಾನು ವಿಕಸನಗೊಳ್ಳುವ ಪರಿ ವಿಸ್ಮಯಕಾರಿ.

ನಮ್ಮ ಎಷ್ಟು ಸಂಸಾರಗಳಲ್ಲಿ ಮದ್ಯವ್ಯಸನಿ ತಂದೆ, ಅಸಹಾಯಕ ಅನಕ್ಷರಸ್ಥ ತಾಯಿ, ಇಬ್ಬರ ನಡುವೆ ಬಳಲುವ ಮಕ್ಕಳನ್ನು ಕಾಣುವುದಿಲ್ಲ? ತಾಯಿಯಾಗಿಯೋ ಮಗಳಾಗಿಯೋ, ಹೆಚ್ಚಿನ ಪಾಲು ತಾಪದ ಬೇಗೆ ಅನುಭವಿಸುವುದು ಹೆಣ್ಣೇ ಇರಬಹುದೇನೊ!! ಪುಸ್ತಕ ಓದಿ ಮುಗಿಸಿದಾಗ ಅನ್ನಿಸಿದ್ದು - ಟಿಲ್ಡಾ-ಈಡಾರಂತೆ ಮಾನಸಿಕವಾಗಿ ತೊಳಲಾಡುತ್ತಾ, ಆ ಯಾವ ಪ್ರಭಾವಕ್ಕೂ ಒಳಗಾಗದಂತೆ ತಮ್ಮನ್ನು ತಾವು ಜೋಪಾನ ಮಾಡಿಕೊಳ್ಳುತ್ತಾ, ಸ್ವತಂತ್ರ ಅಸ್ತಿತ್ವಕ್ಕಾಗಿ ಹೋರಾಡುತ್ತಾ ಬದುಕುತ್ತಿರುವ ಹೆಣ್ಣು ಮಕ್ಕಳನ್ನು ಎಲ್ಲ ತಲೆಮಾರುಗಳಲ್ಲಿ, ಎಲ್ಲ ಸಂಸ್ಕೃತಿಗಳಲ್ಲಿ ಕಾಣುತ್ತಲೇ ಇದ್ದೇವೆ ಎನ್ನುವ ಕಹಿ ಸತ್ಯ.

ಹೆಣ್ಣಿನ ಹೃದಯದ ಸಂಸ್ಕಾರವು, ದೇಶ ಕಾಲಗಳ ಪರಿಮಿತಿಗೆ ಒಳಪಡುವುದಲ್ಲ. ಹೋರಾಟ ಅವಳ ಹುಟ್ಟುಗುಣ. ಎಂದಿಗೂ ಹೆಣ್ಣು ಉರಿಯಲ್ಲಿ ಅರಳುವ ಹೂವು.

MORE FEATURES

ನಾವು ಬದುಕುತ್ತಿರುವ ಪರಿಸರವೇ ಕುಂ.ವೀ ಅವರ ಬರವಣಿಗೆಯ ಶಕ್ತಿಯಾಗಿದೆ

16-09-2024 ಬೆಂಗಳೂರು

“ಕುಂ.ವೀರಭದ್ರಪ್ಪ ಅವರ ಸೃಷ್ಟಿ ಪ್ರತಿಭಟನಾತ್ಮಕ ಸಾಹಿತ್ಯವಾಗಿ ಸಹಜ ಬಂಡಾಯದ ಧ್ವನಿಯಾಗಿದೆ. ಎಪ್ಪತ್ತೊಂದು ವರ್ಷದ...

ಮೊಸಳೆ ಸೆರೆ ಹಿಡಿದ ಪ್ರಸಂಗ

16-09-2024 ಬೆಂಗಳೂರು

"ನನ್ನ ಗಸ್ತಿಗೆ ಬಂದ ಹೊಸತರಲ್ಲಿ ವಾಚರುಗಳಿಬ್ಬರು ನನ್ಮುಂದೆ "ಈ ಗಸ್ತಿನ ವ್ಯಾಪ್ತಿಯಲ್ಲಿ ಮೊಸಳೆ ಕಾಟ ಜಾಸ್ತ...

ಕನ್ನಡ ಕಾದಂಬರಿ ಲೋಕದ ಅಗ್ರಮಾನ್ಯ ಪ್ರಯತ್ನಗಳಲ್ಲೊಂದು `ಚೆನ್ನಭೈರಾದೇವಿ'

16-09-2024 ಬೆಂಗಳೂರು

"ಈ ಕಾದಂಬರಿಯಲ್ಲಿ ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಸಾಲು "ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಧ...