‘ಚಂದ್ರಕಾಂತ ಕರದಳ್ಳಿ ಸದ್ಭಾವನಾ ಪುರಸ್ಕಾರ 2024’ಕ್ಕೆ ಸಮಾಜವಾದಿ ಚಿಂತಕ ಸಿ. ಚನ್ನಬಸವಣ್ಣ ಆಯ್ಕೆ

Date: 16-12-2024

Location: ಬೆಂಗಳೂರು


ಶಹಾಪುರ: ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನ ಶಹಾಪುರ ನೀಡುವ ರಾಜ್ಯಮಟ್ಟದ ‘ಕರದಳ್ಳಿ ಸದ್ಭಾವನಾ ಪುರಸ್ಕಾರ 2024’ಕ್ಕೆ ನಾಡಿನ ಪ್ರಸಿದ್ಧ ಸಮಾಜವಾದಿ ಚಿಂತಕ, ಲೇಖಕ, ಹೋರಾಟಗಾರ, ಲೋಹಿಯಾ ಪ್ರಕಾಶನ ಸಂಸ್ಥೆಯ ಸ್ಥಾಪಕ ಸಿ. ಚನ್ನಬಸವಣ್ಣ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಕರದಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ 5 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಡಿಸೆಂಬರ್ 19 ರಂದು ಸಂಜೆ 6.00 ಗಂಟೆಗೆ ಶಹಾಪುರದಲ್ಲಿ ಜರುಗುವ ಚಂದ್ರಕಾಂತ ಕರದಳ್ಳಿಯವರ ಐದನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸಿ. ಚನ್ನಬಸವಣ್ಣ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ನಾಗರಾಜ ಕರದಳ್ಳಿ ಹೇಳಿದ್ದಾರೆ. ಆಯ್ಕೆ ಸಮಿತಿಯಲ್ಲಿ ವಿಮರ್ಶಕ ಸಿ. ಎಸ್. ಭೀಮರಾಯ, ಲೇಖಕ ರಾಘವೇಂದ್ರ ಹಾರಣಗೇರಾ ಹಾಗೂ ಪತ್ರಕರ್ತ ರವಿ ಹಿರೇಮಠರು ಇದ್ದರು ಎಂದು ಶಹಾಪುರದ ಶ್ರೀ ಚಂದ್ರಕಾಂತ ಕರದಳ್ಳಿ ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷರಾದ ನಾಗರಾಜ ಕರದಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


MORE NEWS

ಒಂದು ಭಾಷೆಯನ್ನು ನಿರ್ಣಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ; ಕಂನಾಡಿಗಾ ನಾರಾಯಣ

16-12-2024 ಬೆಂಗಳೂರು

ಬೆಂಗಳೂರು: ಮಾತಿನ ಮನೆ ಆಶ್ರಯದಲ್ಲಿ ಮಧುರಾ ಮೂರ್ತಿ ಅವರ ಸಂಪಾದಕತ್ವದ ‘ನೀರ ಮೇಲಣ ನೆರಳು’ ಕವನ ಸಂಕಲನ ಲೋ...

`ಚಂದನವನದ ಚಿಲುಮೆಗಳು' ದ್ವಿಭಾಷಾ ಪುಸ್ತಕ ಬಿಡುಗಡೆ

16-12-2024 ಬೆಂಗಳೂರು

ಬೆಂಗಳೂರು: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ...

BLRLITFEST: ಎರಡು ದಿನಗಳ ಬೆಂಗಳೂರು ಸಾಹಿತ್ಯ ಉತ್ಸವ ಸಂಪನ್ನ

15-12-2024 ಬೆಂಗಳೂರು

ಬೆಂಗಳೂರು: ದೇಶದ ಬೇರೆ ಬೇರೆ ಮೂಲೆಯಲ್ಲಿ ಇದ್ದು ತಮ್ಮ ಯೋಚನಾ ಲಹರಿಗಳನ್ನು ಪುಸ್ತಕದ ಮೂಲಕ ಹರಿಬಿಟ್ಟು ಜನತೆಯನ್ನು ವಿಚಾ...