Date: 16-12-2024
Location: ಬೆಂಗಳೂರು
ಬೆಂಗಳೂರು: ಮಾತಿನ ಮನೆ ಆಶ್ರಯದಲ್ಲಿ ಮಧುರಾ ಮೂರ್ತಿ ಅವರ ಸಂಪಾದಕತ್ವದ ‘ನೀರ ಮೇಲಣ ನೆರಳು’ ಕವನ ಸಂಕಲನ ಲೋಕಾರ್ಪಣಾ ಸಮಾರಂಭವು 2024 ಡಿ. 15 ಭಾನುವಾರದಂದು ಚಾಮರಾಜಪೇಟೆಯಲ್ಲಿ ನೆಡೆಯಿತು.
ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಕವಿ, ಚಿಂತಕ, ಪ್ರಮುಖ ವಾಗ್ಮಿ ಹಾಗೂ ಮ್ಯಾನೇಜ್ಮೆಂಟ್ ಗುರು ಸತ್ಯೇಶ್ ಎನ್ ಬೆಳ್ಳೂರ್ ಅವರು, "ಯಾವುದೇ ಒಂದು ಸಾಹಿತ್ಯ ಪ್ರಕಾರವಾಗಿ ಎಲ್ಲಾ ಕಾಲದಲ್ಲೂ ಕೂಡ ನಿಲ್ಲಬೇಕು ಅಂದರೆ ಆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಪ್ರಬುದ್ಧವಾಗಿ ನೆಲೆ ನಿಲ್ಲಬೇಕಾದದ್ದು ಕಾವ್ಯ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಲ್ಲಿ ಕವಿತೆಗಳನ್ನು ಓದಿ ಆರ್ಥೈಸಿಕೊಂಡು ಆಸ್ವಾಧನೆ ಮಾಡಬೇಕು ಎನ್ನೋ ಒಂದು ತುಡಿತ ಕಡಿಮೆಯಾಗಿದೆ,’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಪರಿಸರ ವಿಜ್ಞಾನ ಲೇಖಕರು, ಪ್ರಾಧ್ಯಾಪಕರು ಆದ ಗುರುರಾಜ್ ಎಸ್ ದಾವಣಗೆರೆ ಅವರು ಮಾತನಾಡಿ ಕೃತಿ ಪರಿಚಯವನ್ನು ಮಾಡಿಕೊಟ್ಟರು.
ನನ್ನ ವೈಯಕ್ತಿಕ ಬದುಕಿಗು ಕವಿತೆಗು ಸಂಬಂಧವೇ ಇಲ್ಲಾ, ಯಾವುದೇ ಕವಿತೆ ರಚಿಸುವಾಗ ಆ ಸಂದರ್ಭದ ಒಳಹೊಕ್ಕು, ಆ ಸಂದರ್ಭದಲ್ಲಿ ನಾನಿದ್ದೇನೆ ಎಂದು ಕಲ್ಪಿಸಿಕೊಂಡು ಬರೆಯುತ್ತೇನೆ ಎಂದು ’ನೀರ ಮೇಲಣ ನೆರಳು’ ಕವನ ಸಂಕಲನದ ಸಂಪಾದಕಿ ಮಧುರಾ ಮೂರ್ತಿ ಅವರು ಸಭೆಯಲ್ಲಿ ಹೇಳಿದರು. ಹಾಗೂ ನುಡಿ ತೋರಣದ ವತಿಯಿಂದ ಮಧುರ ಮೂರ್ತಿಯವರಿಗೆ ಗೌರವ ಸಮರ್ಪಣೆ ನೆಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ಕಥೆ ಕಾದಂಬರಿಕಾರರಾದ ಕಂನಾಡಿಗಾ ನಾರಾಯಣ, ಅವರು ಯುವ ಜನರಲ್ಲಿ ಸಾಹಿತ್ಯ ಆಸಕ್ತಿಯ ಕೊರತೆಯ ಕುರಿತು ತಮ್ಮ ಅಭಿಪ್ರಾಯ ತಿಳಿಸಿ, ಒಂದು ಭಾಷೆಯನ್ನು ನಿರ್ಣಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾ ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಸು ವೇಂಕಟೇಶ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು , ಕಾರ್ಯಕ್ರಮದ ನಿರೂಪಣೆಯನ್ನು ರಂಜಿತಾ ಅವರು ನೆರವೇರಿಸಿ ಕೊಟ್ಟರು.
ಶಹಾಪುರ: ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನ ಶಹಾಪುರ ನೀಡುವ ರಾಜ್ಯಮಟ್ಟದ ‘ಕರದಳ್ಳಿ ಸದ್ಭಾವನಾ ಪುರಸ್ಕಾರ 2...
ಬೆಂಗಳೂರು: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ...
ಬೆಂಗಳೂರು: ದೇಶದ ಬೇರೆ ಬೇರೆ ಮೂಲೆಯಲ್ಲಿ ಇದ್ದು ತಮ್ಮ ಯೋಚನಾ ಲಹರಿಗಳನ್ನು ಪುಸ್ತಕದ ಮೂಲಕ ಹರಿಬಿಟ್ಟು ಜನತೆಯನ್ನು ವಿಚಾ...
©2024 Book Brahma Private Limited.