“ಒಟ್ಟಾರೆಯಾಗಿ ನನಗೆ ಎರಡನೇ ಶತಮಾನದ ಏಷ್ಯಾದ ಐತಿಹಾಸಿಕ ವರದಿಯನ್ನು ಓದಿದ ಅನುಭವ ನೀಡಿತು,” ಎನ್ನುತ್ತಾರೆ ಸೋಮನಾಥ ಪ್ರಭು ಗುರಪ್ಪನವರ. ಅವರು ವಸುಧೇಂದ್ರ ಅವರ “ರೇಷ್ಮೆ ಬಟ್ಟೆ” ಕಾದಂಬರಿ ಕುರಿತು ಬರೆದ ವಿಮರ್ಶೆ.
ತೇಜೋ ತುಂಗಭದ್ರ ಕಾದಂಬರಿ ಮೂಲಕ ಕನ್ನಡದಲ್ಲಿ ಹೆಸರುವಾಸಿಯಾದ ವಸುದೇಂದ್ರ ಅವರು ಮತ್ತೊಂದು ಬೃಹತ್ ಕಾದಂಬರಿ ರೇಷ್ಮೆ ಬಟ್ಟೆಯನ್ನು ಕನ್ನಡಿಗರಿಗೆ ನೀಡಿದ್ದಾರೆ. ಕಾದಂಬರಿಯ ಎರಡನೇ ಶತಮಾನದ ಏಷ್ಯಾದಲ್ಲಿ ರೇಷ್ಮೆ ವ್ಯಾಪಾರದ ಉದ್ದೇಶದಿಂದ ತೆರೆದುಕೊಂಡ ದಾರಿ ಏಷ್ಯಾದಲ್ಲಿ ಯಾವ ರೀತಿ ಧಾರ್ಮಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ವ್ಯವಹಾರತ್ಮಕವಾಗಿ ಬದಲಾವಣೆಗಳನ್ನು ಸೃಷ್ಟಿಸಿತು. ಕಾಡಿನಲ್ಲಿ ಬದುಕುತ್ತಿದ್ದ ಜನರ ಬದುಕು, ಬವಣೆ, ಆಹಾರ ಪದ್ಧತಿ, ಸಂಪ್ರದಾಯ, ಮದುವೆ, ಮಕ್ಕಳು ಸಂಸಾರ ಹೀಗೆ ಹಲವಾರು ವಿಷಯಗಳತ್ತ ಬೆಳಕು ಚೆಲ್ಲುತ್ತಾ ಕಾದಂಬರಿ ಸಾಗುತ್ತದೆ. ಬೌದ್ಧ ಧರ್ಮದ ಪ್ರಭಾವ ಹಾಗೂ ಅದರ ನೀತಿ ತತ್ವಗಳು ಅದರ ಪ್ರಚಾರ ಹಾಗೂ ಬೌದ್ಧ ಬಿಕ್ಕುಗಳ ಬದುಕು ಸೊಗಸಾಗಿ ವಿವರಿಸಲಾಗಿದೆ.
ಧರ್ಮವನ್ನು ಹೇಗೆ ರಾಜಕೀಯವಾಗಿ ಹಾಗೂ ವ್ಯಾಪಾರಿನ ಸರಕಾಗಿ ಬಳಸಿಕೊಂಡು ಸಾಮ್ರಾಜ್ಯದ ಬೊಕ್ಕಸವನ್ನು ತುಂಬಿಸಿಕೊಂಡ ರಾಜರ ದುರಾಸೆ ನೋಡಬಹುದು. ಯಾವುದೇ ಬದಲಾವಣೆಯಾಗಲಿ ಅದರಿಂದ ಆಗುವ ನೇರ ಸಂಕಷ್ಟ ಸಾಮಾನ್ಯರಿಗೆ ಎಂಬುದನ್ನು ಹಲವಾರು ಕಡೆ ನಾವು ತಿಳಿಯಬಹುದಾಗಿದೆ. ಹಾಗೂ ಆಗಿನ ಚೀನಾ ದೇಶದ ಸಮೃದ್ಧ ಬದುಕನ್ನು ಈ ಕಾದಂಬರಿಯಲ್ಲಿ ಕಾಣಬಹುದು. ನನಗೆ ಈ ಪುಸ್ತಕ ತೇಜೋದಷ್ಟು ರುಚಿಸಲಿಲ್ಲ. ಪಾತ್ರಗಳು ಹೆಸರು ಹೊಸತು ಎಂಬ ಕಾರಣದಿಂದ ಅಷ್ಟೊಂದು ನೆನಪಿನಲ್ಲಿ ಉಳಿಯಲು ಕಷ್ಟವಾಯಿತು ಕೆಲವು ಕಡೆ ನನಗೆ ಕಾದಂಬರಿ ತುಂಬಾ ನಿಧಾನವೆನಿಸಿತು .
ಒಟ್ಟಾರೆಯಾಗಿ ನನಗೆ ಎರಡನೇ ಶತಮಾನದ ಏಷ್ಯಾದ ಐತಿಹಾಸಿಕ ವರದಿಯನ್ನು ಓದಿದ ಅನುಭವ ನೀಡಿತು.
“ನಜೀಬ್ ಅಡುಗಳು ಜೊತೆಗೆ ಹೇಗೆ ಬದುಕುತ್ತಾನೆ ಅವುಗಳ ಜೊತೆಗೆ ಹೇಗೆ ಹೊಂದಿಕೊಳ್ಳುತ್ತಾನೆ ಆಡುಗಳ ಮತ್ತು ಅವನ ನಡುವ...
"ಖಾಲಿ ಹಾಳೆಯ ಮೇಲೆ ಹರದಿತ್ತು ನದಿ ಎಂಥಾ ನದಿ ತಿಳಿ ನೀರು ತಳ ಕಾಣುವ ಹಾಗೆ ನಾನು ಮುಳುಗಿದರೆ ಮಾತ್ರ ನದಿ ಇಲ್ಲದಿದ...
“ಓದಿದಾಗ ಕಾವ್ಯಾನುಭವದ ಸುಖ ನೀಡುತ್ತದೆ. ಕನ್ನಡ ಕಾವ್ಯ ಪರಂಪರೆಯ ವಿವಿಧ ಲಯಗಳನ್ನು ಇವರು ತಮ್ಮ ಕಾವ್ಯ ರಚನೆಯಲ್ಲ...
©2025 Book Brahma Private Limited.