`ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ 2024’ ಪ್ರಶಸ್ತಿ ಪ್ರದಾನ ಸಮಾರಂಭ

Date: 13-12-2024

Location: ಬೆಂಗಳೂರು


ಬೆಂಗಳೂರು: ಆಚಾರ್ಯರ ಪುಣ್ಯರಾಧನೆ-4ರ ಅಂಗವಾಗಿ ಹಮ್ಮಿಕೊಂಡಿದ್ದ ‘ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ 2024’ ಪ್ರಶಸ್ತಿ ಪ್ರದಾನ ಸಮಾರಂಭವು 2024 ಡಿ.13 ಶುಕ್ರವಾರದಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಿತು.

2024ನೇ ಸಾಲಿನ ‘ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ’ವನ್ನು ಕೆನಡಾ ಮ್ಯಾನಿಟೋಬಾ ವಿಶ್ವವಿದ್ಯಾಲಯದ ಪ್ರೊಫೆಸರ್ ಬಿ.ಎಂ ರಮೇಶ್ ಅವರಿಗೆ ಗುರುರಾಜ ಕರ್ಜಗಿ, ವಿಜಯಸಿಂಹ ಆಚಾರ್ಯ ಹಾಗೂ ಪ್ರೊ. ಮಲ್ಲೇಪುರಂ ವೆಂಕಟೇಶ್ ಅವರು ಪ್ರದಾನಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ವೇದಾಂತಿಗಳಾದ ಶ್ರೀ ವಿಜಯ್ ಸಿಂಹ ಆಚಾರ್ಯರು ಮಾತನಾಡಿ, "ವ್ಯಾಖ್ಯಾನಕ್ಕೆ ಅನುಗುಣವಾಗಿ ಅವರು ಶ್ಲೋಕಗಳನ್ನು ಹೇಳಿದಾಗ, ಶ್ಲೋಕಬದ್ಧ ಪಠ್ಯವಾಗಿ ರೂಪುಗೊಳ್ಳುತ್ತಿತ್ತು. ಒಬ್ಬ ವ್ಯಾಖ್ಯಾನಕಾರನನ್ನ ಎದುರುಗಡೆ ನೋಡುವಂತಹ ಭಾಗ್ಯ ನನ್ನದಾಗಿತ್ತು. ಇದರಿಂದ ಅವನು ಹೇಗೆ ಕೆಲಸಮಾಡುತ್ತಾರೆ, ವಿಚಾರಗಳನ್ನು ಹೇಗೆ ಗ್ರಹಿಸುತ್ತಾರೆ, ಎನ್ನುವುದನ್ನು ಹತ್ತಿರದಿಂದ ನೋಡುವ ಅವಕಾಶವನ್ನು ನಾನು ಕಂಡುಕೊಂಡಿದ್ದೆ. ಅವರಿಗೆ ಬಹಳ ಗ್ರಂಥಗಳನ್ನು ಬರೆಯುವ ಕನಸ್ಸಿತ್ತು. ಆದರೆ ಸಮಯದ ಮಿತಿ ಕೂಡ ಅವರಿಗೆ ತಿಳಿದಿತ್ತು," ಎಂದರು.

ಪ್ರಶಸ್ತಿ ಪುರಸ್ಕೃತ ಬಿ.ಎಂ ರಮೇಶ್ ಮಾತನಾಡಿ, "ಎಲೆಮರೆಯ ಕಾಯಿಯಂತೆ ಇದ್ದ ನನ್ನನ್ನು ಇಂದು ಗುರುತಿಸಿ,ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದ ಬನ್ನಂಜೆ ಪ್ರತಿಷ್ಠಾನಕ್ಕೆ ನನ್ನ ಧನ್ಯವಾದಗಳು. ಸನಾತನ ಧರ್ಮ, ವೇದ ಉಪನಿಷತ್ ಗಳ ಸಾರವನ್ನೇ ತುಂಬಿಕೊಂಡಿರುವ ಮಹಾಭಾರತ ಮಹಾನ್ ಗ್ರಂಥ. ಮಹಾಭಾರತ, ರಾಮಾಯಣ, ಪುರಾಣಗಳನ್ನು ನಾನು ಬಾಲ್ಯದಿಂದಲೇ ಓದುತ್ತಾ ಬಂದಿದ್ದೇನೆ. ಕನ್ನಡ ಮಾತ್ರವಲ್ಲದೇ ಪ್ರತಿಯೊಂದು ಭಾಷೆಯಲ್ಲಿ ಅನುವಾದಿಸಲ್ಪಟ್ಟ ಕೃತಿಗಳನ್ನು ಓದುತ್ತಾ, ಅಧ್ಯಯನ ಮಾಡಿದ್ದು, ಪತ್ರೀ ಕೃತಿಯು ಕೂಡ ಸೊಗಸಾಗಿ ಮೂಡಿದೆ,’ ಎಂದು ತಿಳಿಸಿದರು.

ಸಮಾರಂಭದಲ್ಲಿ ‘ನನ್ನ ಪಿತಾಮಹ’ ನಾಟಕ ಪ್ರದರ್ಶನವನ್ನ ಮಾಡಲಾಯಿತು.

 

 

MORE NEWS

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಡೆಯಲಿ:  ಅಮರನಾಥ ಗೌಡ  

22-12-2024 ಮಂಡ್ಯ

ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...

ಗಣಿನಾಡು ಬಳ್ಳಾರಿಯಲ್ಲಿ ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

22-12-2024 ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...

ಸರ್ಕಾರಿ ಶಾಲೆಗಳ ಜಮೀನು ಒತ್ತುವರಿಗೆ ನಾವೇ ದನಿಯಾಗಬೇಕು: ಪುರುಷೋತ್ತಮ ಬಿಳಿಮಲೆ 

22-12-2024 ಮಂಡ್ಯ

ಮಂಡ್ಯ:  100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...