ಬದುಕಿನ ಭಾಷೆಯಾದಾಗ ಮಾತ್ರ ಕನ್ನಡ ಜೀವಂತ: ದಯಾನಂದ ಅಗಸರ

Date: 21-01-2022

Location: ಕಲಬುರಗಿ


ಕನ್ನಡವು ಬದುಕಿನ ಭಾಷೆ ಆಗಬೇಕು. ಅಂದಾಗ ಮಾತ್ರ, ಆ ಭಾಷೆಯು ಜೀವಂತವಾಗಿ ಉಳಿಯಲು ಸಾಧ್ಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ ದಯಾನಂದ ಅಗಸರ ಅವರು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ವತಿಯಿಂದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (13 ವಿಭಾಗಗಳಲ್ಲಿ) ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಭಾಷೆ ತಾನೇ ತಾನಾಗಿ ಬೆಳೆಯದು. ಅದನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆ ಭಾಷೆಯು ಜನರಿಗೆ ಅನ್ನ ನೀಡುವಂತಿರಬೇಕು. ಆಗಲೇ, ಕನ್ನಡವು ಬೆಳೆಯುತ್ತದೆ ಎಂದು ಹೇಳಿದರು.

ವಿಶ್ವಜ್ಞಾನಕ್ಕೆ ಕನ್ನಡವು ಬೆಳಕಿಂಡಿ ಆಗಲಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ ಆರ್ ಸಿ. ಹಿರೇಮಠ ಅಧ್ಯಯನ ಪೀಠದ ಕನ್ನಡ ಸಹ ಪ್ರಾಧ್ಯಾಪಕ ಡಾ ಮುದೇನೂರು ನಿಂಗಪ್ಪ ಮಾತನಾಡಿ,, ಗುಲಬರ್ಗಾ ವಿಶ್ವವಿದ್ಯಾಲಯವು ಸಾಹಿತ್ಯ, ಕಲೆ, ಸಂಸ್ಕೃತಿ, ಭಾಷೆ ವಿಚಾರದಲ್ಲಿಅಪಾರ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಸಂಪ್ರದಾಯ ಅನುಕರಣೀಯ. ಇದರಿಂದ ಪುರಸ್ಕೃತರಿಗೆ ತಮ್ಮ ಕ್ಷೇತ್ರದಲ್ಲಿ ಸಾಧನೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಮತ್ತು ಕ್ರಿಯಾಶೀಲರನ್ನಾಗಿಸುತ್ತದೆ. ಕನ್ನಡವೂ ಸೇರಿದಂತೆ ಕನ್ನಡ ಭಾಷೆಯೊಂದಿಗೆ ಇತರ ಭಾಷೆಗಳಲ್ಲಿನ ಸಾಧಕರನ್ನು ಗುರುತಿಸುವ ಕಾರ್ಯ ಮಾದರಿಯಾಗಿದೆ. ಕನ್ನಡದಲ್ಲಿ ವಿಶ್ವಜ್ಞಾನ ಲಭಿಸುವಂತಾದಾಗ ಕನ್ನಡವೂ ಉಳಿಯುತ್ತದೆ. ವಿಶ್ವ ಜ್ಞಾನಕ್ಕೆ ಕನ್ನಡ ಬೆಳಕಿಂಡಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಚಿಂತನೆ: ಬಾಗಲಕೋಟ ಜಿಲ್ಲೆಯ ಕ್ರಷ್ಣಾಮೇಲ್ದಂಡೆ ಯೋಜನೆ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾನು ಆಂಗ್ಲ ವಿಷಯದ ವಿದ್ಯಾರ್ಥಿಯಾಗಿದ್ದರೂ ಅಧಿಕಾರಿಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇನೆ. ಬದುಕಿನಲ್ಲಿ ಬರುವ ಸಮಸ್ಯೆ ಸವಾಲುಗಳನ್ನು ಎದುರಿಸಲು ವಿದ್ಯೆಯೇ ಪ್ರಬಲ ಅಸ್ತ್ರ.ಅದನ್ನು ನಾನು ಅಂಬೇಡ್ಕರ್ ಅವರ ಚಿಂತನೆಯಿಂದ ಅಳವಡಿಸಿಕೊಂಡೆ ಎಂದರು.

ಪ್ರಶಸ್ತಿ ಪುರಸ್ಕೃತರು: ಕನ್ನಡ ಸೃಜನ ವಿಭಾಗದಲ್ಲಿ ಸಿ.ಎಸ್. ಆನಂದ ಅವರ ‘ಸಂಪ್ರೀತಿ’, ಪ್ರಭುಲಿಂಗ ನೀಲೂರೆ ಅವರ ‘ಮನಸೇ ಬದುಕು ನಿನಗಾಗಿ (ಗಜಲ್), ಮಲ್ಲಿನಾಥ ಎಸ್. ತಳವಾರ ಅವರ ‘ಗಾಲಿಬ್ ಸ್ಮೃತಿ (ಗಜಲ್), ಪದ್ಮಾಕರ್ ಅಶೋಕಕುಮಾರ ಮಟ್ಟಿ ಅವರ ‘ದೃಷ್ಟಿಬೊಟ್ಟು’, ಈರಣ್ಣ ಬೆಂಗಾಲಿ ಅವರ ‘ಅರಿವಿನ ಅಂಬರ ಅಂಬೇಡ್ಕರ್’ ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ.

ಸೃಜನೇತರ ಲೇಖಕರ ವಿಭಾಗದಲ್ಲಿ ಬಸವರಾಜ ಸಬರದ ಅವರ ‘ಹೈಕ ಆಧುನಿಕ ಸಾಹಿತ್ಯ ಮೀಮಾಂಸೆ’, ಶ್ರೀನಿವಾಸ ಸಿರನೂರಕರ್ ಅವರ ‘ದಾಸಾಯಣ’, ಸುರೇಶ ಎಲ್. ಜಾಧವ ಅವರ ‘ಹರಿದಾಸ ಸಿರಿದೀಪ್ತಿ’, ಚನ್ನಬಸವಯ್ಯ ಹಿರೇಮಠ ಅವರ ‘ಕಲ್ಯಾಣ ಕರ್ನಾಟಕದ ಸಂಸ್ಕೃತಿ’ ಕೃತಿಗಳಿಗೆ ಪುರಸ್ಕಾರಗಳು ಲಭಿಸಿವೆ..

ವಚನಸಾಹಿತ್ಯ ಪ್ರಕಾರಕ್ಕೆ ಪ್ರೇಮಾ ಅಪಚಂದ ಅವರ ‘ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ’, ಜಾನಪದ ಪ್ರಕಾರದಲ್ಲಿ ‘ಜನಪದ ಸಾಹಿತ್ಯದಲ್ಲಿ ಮೌಲ್ಯ ಪ್ರತಿಪಾದನ’, ಎಂ. ನಾಗರಾಜು ಅವರ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಬೆಳಗು’, ಸಮಾಜ ವಿಜ್ಞಾನ ವಿಭಾಗದಲ್ಲಿ ಶಕೀಲ್ ಐ. ಎಸ್ ಅವರ ‘ಬೀದರ ಜಿಲ್ಲೆಯ ಇತಿಹಾಸಗಳು ಸಂ-1’, ಅನುವಾದ ವಿಭಾಗದಲ್ಲಿ ಗಿರೀಶ ಜಕಾಪುರ ಅವರ ‘ಗೀತಾಂಜಲಿ’, ಉರ್ದು ಭಾಷಾ ವಿಭಾಗದಲ್ಲಿ ಅನೀಸ್ ಸಿದ್ದಿಖ ಅವರ ‘Isharaat-e-Sahafat’, ಗಡಿನಾಡ ಸಾಹಿತ್ಯ ವಿಭಾಗದಲ್ಲಿ ಗುರುಲಿಂಗಪ್ಪ ಧಬಾಲೆ ಅವರ ‘ಗಡಿನೆಲದ ವಿಧಾನ’, ಕನ್ನಡ ಪುಸ್ತಕ ಪ್ರಕಾಶಕರ ವಿಭಾಗದಲ್ಲಿ ಶರಣಬಸಪ್ಪ ವಡ್ಡನಕೇರಿ ಅವರಿಗೆ, ಚಿತ್ರ ಕಲಾಕೃತಿ ವಿಭಾಗದಲ್ಲಿ ಪಾರ್ವತಿ ಡಿ. ಬಿರಾದಾರ ಅವರ ‘ಫೆಸ್ಟಿವಲ್’, ಗಿರೀಶ ಬಿ. ಕುಲಕರ್ಣಿ ಅವರ ‘ಅನ್ ಟೈಟಲ್’, ಗೌತಮ್ ಈರಣ್ಣ ಅವರ ‘ಭಿಕ್ಷುಕ’, ಶಿಲ್ಪ ಕಲಾಕೃತಿ ವಿಭಾಗದಲ್ಲಿ ಹಣಮಂತ ಡಿ. ಬಾಡದ್ ಅವರ ‘ಆನ್ ಲೈನ್ ಕ್ಲಾಸ್’, ಜೀವನ ಮಲ್ಲಪ್ಪಕೇರಿ ಅವರ ‘ಹೃದಯ ಪರಿಸರ’ ಪ್ರಶಸ್ತಿಗೆ ಭಾಜನವಾಗಿವೆ.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ ಬಿ. ಕೆ. ತುಳಸಿಮಾಲಾ ಅವರು ಪ್ರಶಸ್ತಿ ಪ್ರದಾನ ಮಾಡಿ, ಪ್ರಶಸ್ತಿ ಪುರಸ್ಕೃತರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಂಗಮೇಶ ಪೂಜಾರಿ ಮತ್ತು ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ ಶಿವಾಜಿ ವಾಘಮೋರೆ ಅವರು ಮುಖ್ಯ ಅತಿಥಿಗಳಾಗಿದ್ದರು.

ಡಾ ಅಂಬೇಡ್ಕರ್ ವಾಚಿಕೆ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಪ್ರಸಾರಾಂಗದ ನಿರ್ದೇಶಕ ಪ್ರೊ ಎಚ್ ಟಿ ಪೋತೆ ಸ್ವಾಗತಿಸಿ, ರಾಜ್ಯೋತ್ಸವ ಪ್ರಶಸ್ತಿ, ಡಾ ಅಂಬೇಡ್ಕರ್ ಇಂಗ್ಲಿಷ್ -ಹಿಂದಿ ಆವೃತ್ತಿಗಳ ಬಿಡುಗಡೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾಲಯದ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ ವಿತ್ತಾಧಿಕಾರಿ, ಪ್ರೊ ನಡುವಿನಮನಿ ವೇದಿಕೆ ಮೇಲಿದ್ದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿದ್ದಾರ್ಥ ಚಿಮ್ಮಾ ಇದಲಾಯಿ ನಾಡಗೀತೆ ಹಾಡಿದರು. ಜಾನಪದ ಕಲಾವಿದ ಇಮಾಮ್ ಸಾಬ್ ಜಾನಪದ ಗೀತೆ ಹಾಡಿದರು

MORE NEWS

ತಂದೆ-ಮಗನಾದ ವಿಜಯ್ ರಾಘವೇಂದ್ರ; ‘ರುದ್ರಾಭಿಷೇಕಂ’ನಲ್ಲಿ ವೀರಗಾಸೆ ಕಲಾವಿದ

07-01-2025 ಬೆಂಗಳೂರು

ವಿಜಯ್‍ ರಾಘವೇಂದ್ರ ತಮ್ಮ 20 ಪ್ಲಸ್ ವರ್ಷಗಳ ಚಿತ್ರಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ...

ನಾಯಕ ವಿಷ್ಣು, ನಾಯಕಿ ಪ್ರಿಯಾ; ಫೆ. 21ಕ್ಕೆ ‘ವಿಷ್ಣು ಪ್ರಿಯ’

07-01-2025 ಬೆಂಗಳೂರು

ಬಹಳ ಸಮಯದಿಂದ ಬಿಡುಗಡೆಗೆ ಕಾದಿದ್ದ ಕೆ. ಮಂಜು ಮಗ ಶ್ರೇಯಸ್‍ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಚಿತ್ರಕ...

ಅನಿತಾ ಪಿ. ತಾಕೊಡೆ ಅವರ ಸುವರ್ಣಯುಗ ಕೃತಿಗೆ ‘ವಿಕಾಸ ಪುಸ್ತಕ ಬಹುಮಾನ’ 

06-01-2025 ಬೆಂಗಳೂರು

ಮುಂಬಯಿ: ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದಿಂದ ಕೊಡಮಾಡುವ 2023-24ನೇ ಸಾಲಿನ ...