ಬಬಲಾದ ಶ್ರೀ, ಹಾನಗಲ್ಲ, ಜಯಶ್ರೀ ಮತ್ತಿಮಡು, ದಸ್ತಿ ಸೇರಿದಂತೆ ಆರು ಜನರಿಗೆ `ಅವ್ವ ಪ್ರಶಸ್ತಿ'

Date: 05-11-2024

Location: ಬೆಂಗಳೂರು


ಕಲಬುರಗಿ: ಜಿಲ್ಲೆಯ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ಏಳನೇ ವರ್ಷದ 2024ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ 'ಅವ್ವ' ಪ್ರಶಸ್ತಿಗಳನ್ನು ಘೋಷಿಸಿದೆ.

ಲೇಖಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ ಹಾನಗಲ್ಲ ಅವರ "ವೀರ ಸೌಧಾಮಿನಿ ಕಿತ್ತೂರ ರಾಣಿ ಚನ್ನಮ್ಮ" (ಸಂಶೋಧನ ಕೃತಿ ), ಪಾರ್ವತಿ ವಿ ಸೋನಾರೆ ಅವರ "ಓಡಿ ಹೋದಾಕಿ" (ಕಾದಂಬರಿ) ಹಾಗೂ ಜ್ಯೋತಿ ಬೊಮ್ಮಾ ಅವರ "ಎಲ್ಲರೊಳಗೊಂದಾಗಿ" (ಕವನ ಸಂಕಲನ ) ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪರಮಪೂಜ್ಯ ಮ. ನಿ. ಪ್ರ. ಶ್ರೀ ಗುರುಪಾದಲಿಂಗ ಶಿವಯೋಗಿಗಳು (ಕೃಷಿ ಹಾಗೂ ಧಾರ್ಮಿಕ ಕ್ಷೇತ್ರ) ಜಯಶ್ರೀ ಬಸವರಾಜ ಮತ್ತಿಮಡು (ಸಮಾಜ ಸೇವೆ ಕ್ಷೇತ್ರ) ಹೋರಾಟಗಾರರಾದ ಡಾ‌. ಲಕ್ಷ್ಮಣ ದಸ್ತಿ (ಹೋರಾಟ ಕ್ಷೇತ್ರ) ಅವರನ್ನು 2024ನೇ ಸಾಲಿನ 'ಅವ್ವ ಗೌರವ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭವು ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ.

 

MORE NEWS

2024ನೇ ಸಾಲಿನ ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರಕ್ಕೆ ಬಿ.ಎಂ.ರಮೇಶ್ ಆಯ್ಕೆ

07-11-2024 ಬೆಂಗಳೂರು

ಬೆಂಗಳೂರು: 2024ನೇ ಸಾಲಿನ ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರಕ್ಕೆ ಕೆನಡಾದ ಮಣಿತೋಬಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸ...

2021ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನ ಪುರಸ್ಕೃತರು

07-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗ...

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ವಿಜೇತರ ಪಟ್ಟಿ

07-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 2021 ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮ...