Date: 22-12-2024
Location: ಮಂಡ್ಯ
ಮಂಡ್ಯ: ಆತ್ಮ ಕಥನಗಳ ಮೂಲಕ ನಮ್ಮ ಸಂಸ್ಕೃತಿಯನ್ನ ಮರು ಕಟ್ಟಲು ಯಾಕೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೆಣ್ಣು ಮಕ್ಕಳ ಆತ್ಮಕಥನಗಳನ್ನ ಇಟ್ಟುಕೊಂಡು ಸ್ತ್ರೀ ವಾದವನ್ನು ಕಟ್ಟಲಾಗಲಿಲ್ಲ. ಈಗ ಸಂಕಷ್ಟದಲ್ಲಿರುವವರು ಮಾತ್ರ ಆತ್ಮ ಕಥನಗಳ ಬರಿತಾರೆ ಎಂಬ ವಿಧಾನ ಬದಲಾಗಿದೆ. ತೃತೀಯ ಲಿಂಗಿಗಳ, ಅಧಿಕಾರಿಗಳ ಆತ್ಮಕಥನಗಳು ಕನ್ನಡದಲ್ಲಿ ಬರುತ್ತಿದೆ ಎಂದು ಅರುಣ್ ಜೋಳದಕೂಡ್ಲಿಗಿ ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ "ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು" ಎಂಬ ಗೋಷ್ಠಿಯಲ್ಲಿ 'ಆತ್ಮ ಕಥನಗಳು' ಎಂಬ ವಿಷಯದ ಬಗ್ಗೆ ಅವರು ಮಾತನಾಡುತ್ತಾ, ಸಾಹಿತ್ಯ ಚಿಂತಕರ ಹತ್ಯೆಗಳು ಆತ್ಮ ಕಥನಗಳಲ್ಲಿ ಸತ್ಯವನ್ನು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಎನಿಸುತ್ತಿದೆ. ಆತ್ಮ ಕಥನಗಳು ಉಂಟುಮಾಡಬೇಕಾದ ಸಾಮಾಜಿಕ ಪ್ರತಿಕ್ರಿಯೆ ಈಗ ಸಾಧ್ಯವಾಗುತ್ತಿಲ್ಲ. ಈ ಕಾಲಘಟ್ಟದಲ್ಲಿ ಸತ್ಯವನ್ನು ಹೇಳಲಾಗದ ಬಿಕ್ಕಟ್ಟು ಎದುರಿಸುತ್ತಿದ್ದೇವೆ ಎಂದು ಅರುಣ್ ಜೋಳದಕೂಡ್ಲಿಗಿ ಹೇಳಿದರು.
ಮೂಲ ವಿಜ್ಞಾನವನ್ನು ಕನ್ನಡಕ್ಕೆ ತರುವುದು ಕಷ್ಟಸಾಧ್ಯ: ವಿಜ್ಞಾನ ಸಾಹಿತ್ಯ ಎಂಬ ವಿಷಯದ ಬಗ್ಗೆ ಮಾತನಾಡಿದ ಬಿ.ಎಸ್. ಶೈಲಜಾ, ವಿಜ್ಞಾನ ಸಾಹಿತ್ಯ ರಚನೆ ಕಡಿಮೆ ಇದೆ. ಅದರ ಜೊತೆಗೆ ಓದುಗರು ಕಡಿಮೆ ಇದ್ದಾರೆ. ಇದಕ್ಕೆ ಅನುವಾದ ಮಾಡುವಾಗ ಅಗುವ ಶಬ್ದಗಳ ಕೊರತೆಯೂ ಕಾರಣ. ಒಂದಾ ಸಂಸ್ಕೃತ ಅಥವಾ ಇಂಗ್ಲಿಷ್ ಪದ ಬಳಸ ಬೇಕಾಗುತ್ತದೆ. ಪಠ್ಯ ಪುಸ್ತಕ ಮಾತ್ರ ವಿಜ್ಞಾನ ಪುಸ್ತಕ ಎಂಬಂತಾಗಿದೆ. ಆದರೆ ವೈದ್ಯಕೀಯ ವಿಜ್ಞಾನದ ಸಾಹಿತ್ಯ ಸ್ವಲ್ಪ ಹೆಚ್ಚು ಕಾಣಲು ಸಿಗುತ್ತದೆ. ಬಿಜಿಎಲ್ ಸ್ವಾಮಿ, ಶಿವರಾಮ ಕಾರಂತ ಅವರು ವಿಜ್ಞಾನ ಸಾಹಿತ್ಯಗಳನ್ನ ರಚಿಸಿದ್ದಾರೆ.
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.