Date: 22-12-2024
Location: ಮಂಡ್ಯ
ಮಂಡ್ಯ: ಲಿಂಗ, ಲಿಂಗತ್ವ, ಲೈಂಗಿಕತೆಯ ಮಡಿಯನ್ನು ಮನೆಯಲ್ಲೇ ಬಿಡಿಬೇಕು. ಆಗ ಮಾತ್ರ ಮುಕ್ತವಾಗಿರಲು ಸಾಧ್ಯ. ಸ್ತ್ರೀ, ಪುರುಷ ಇಬ್ಬರಲ್ಲೂ ಹರಿಯುತ್ತಿರುವ ರಕ್ತ ಒಂದೇ. ಹೀಗಾಗಿ ಬೇರೆ ಬೇರೆಯಾಗಿ ಕಾಣುವುದು ಸರಿಯಲ್ಲ ಎಂದು ಅಕ್ಕೈ ಪದ್ಮಶಾಲಿ ಅಭಿಪ್ರಾಯ ವ್ಯಕ್ತಪಡಿಸಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ "ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು" ಎಂಬ ಗೋಷ್ಠಿಯ ʻಲಿಂಗತ್ವ ಮತ್ತು ಲೈಂಗಿಕತೆ ಅಲ್ಪ ಸಂಖ್ಯಾತರ ಸಾಹಿತ್ಯʼ ಎಂಬ ವಿಷಯದಲ್ಲಿ ಮಾತನಾಡಿದ ಅವರು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂತರ್ ಲಿಂಗಿ, ಲಿಂಗತ್ವ, ಲೈಂಗಿಕತೆ ಅಲ್ಪ ಸಂಖ್ಯಾತರಿಗೆ ಒಂದು ಗೋಷ್ಠಿಯನ್ನು ಮೀಸಲಿಡಬೇಕು ಎಂದು ವೇದಿಕೆಯಲ್ಲಿ ಒತ್ತಾಯಿಸಿದರು. ಜೊತೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಿಂಗತ್ವ, ಲೈಂಗಿಕತೆ ಅಲ್ಪ ಸಂಖ್ಯಾತರಿಗೆ ನಾಮ್‌ಕಾ ವಾಸ್ತೆ ರೀತಿ ಒಂದು ವಿಷಯ ಇಟ್ಟಿದ್ದಾರೆ ಎಂದು ತಮ್ಮ ಪ್ರತಿಭಟನೆಯನ್ನ ತೋರಿದರು.
ಲೈಂಗಿಕತೆ ಅಲ್ಪ ಸಂಖ್ಯಾತರಿಗೆ ವಿವಾಹ, ವಿಚ್ಛೇದನ, ಮಕ್ಕಳನ್ನು ಪಡೆಯುವ ಹಕ್ಕು ಕೊಡಬೇಕು. ಆಕೆಗೂ ಒಂದು ಕುಟುಂಬ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಇದು ಈಗ ಸಾಧ್ಯವಾಗಿದೆ. ಆದರೆ ಇನ್ನಷ್ಟೂ ಜ್ಞಾನ ಈ ಬಗ್ಗೆ ಬೇಕಿದೆ ಎಂದು ಈ ಸಮಯದಲ್ಲಿ ಹೇಳಿದರು.
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.