ಸಿಲಿಕಾನ್‌ ಸಿಟಿಯಲ್ಲಿ ಸಾಹಿತ್ಯದ ಕಲರವ: ಇಂದು ನಾಳೆ ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌ 

Date: 14-12-2024

Location: ಬೆಂಗಳೂರು


ಬೆಂಗಳೂರು: ಸಿಲಿಕಾನ್‌ ಸಿಟಿಯ ವಾಹನದ ಗದ್ದಲದ ನಡುವೆ ಇಂದು ಮತ್ತು ನಾಳೆ (ಡಿ.14 ಮತ್ತು 15) ಸಾಹಿತ್ಯ ಕಲರವ ಇರಲಿದೆ. ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ ಹೋಟೆಲ್‌ನಲ್ಲಿ 13ನೇ ಆವೃತ್ತಿಯ ಬೆಂಗಳೂರು ಸಾಹಿತ್ಯ ಉತ್ಸವ ನಡೆಯಲಿದೆ. ಸಾಹಿತ್ಯಾಸಕ್ತರಿಗೆ ವಿಧಾನಸೌದದಿಂದ ಉತ್ಸವದ ಸ್ಥಳಕ್ಕೆ ಬಸ್‌ ವ್ಯವಸ್ಥೆ ಇದೆ.

ಈ ಎರಡು ದಿನಗಳ ಉತ್ಸವದಲ್ಲಿ ವಿಚಾರ ಸಂಕಿರಣ, ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 350 ಲೇಖಕರು ಹಾಗೂ ಭಾಷಣಕಾರರು ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಸ್ತುತ ವಿದ್ಯಮಾನಗಳು, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಆಹಾರ ಹೀಗೆ ವಿವಿಧ ಆಸಕ್ತ ವಿಷಯಗಳ ಮೇಲೆ ಸಂವಾದಗಳು ನಡೆಯಲಿದೆ. ಏಕಕಾಲದಲ್ಲಿ ಐದು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿವಿಧ ಭಾಷೆಯ ಪುಸ್ತಕ ಪ್ರದರ್ಶನ, ಮಾರಾಟ ಇರಲಿದೆ.

ಈ ವರ್ಷದ ವಿಶೇಷ ಅತಿಥಿಗಳು:-
ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ವೆಂಕಿ ರಾಮಕೃಷ್ಣನ್, ಅಭಿಜಿತ್ ಬ್ಯಾನರ್ಜಿ ಮತ್ತು ಬೂಕರ್ ಪ್ರಶಸ್ತಿ ವಿಜೇತ ಕಿರಣ್ ದೇಸಾಯಿ ಈ ವರ್ಷದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಮಲಯಾಳಂ ನಟಿ ಪಾರ್ವತಿ ತಿರುವೋತು, ಇಳಾ ಅರುಣ್, ಎಲ್. ಸುಬ್ರಮಣ್ಯಂ ತಮ್ಮ ಕ್ಷೇತ್ರಗಳ ಕುರಿತು ಮಾತನಾಡಲಿದ್ದಾರೆ. ಆಸ್ಟ್ರೇಲಿಯ, ಸ್ಪೇನ್ ಮತ್ತು ಡೊಮಿನಿಕನ್ ರಿಪಬ್ಲಿಕ್‌ನ ರಾಯಭಾರಿಗಳು ಸಹ ಉತ್ಸವದಲ್ಲಿ ಭಾಗಯಾಗಲಿದ್ದಾರೆ.

ಕನ್ನಡದವರು ಯಾರಿದ್ದಾರೆ?
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕನ್ನಡದ ಕಂಪೂ ಇದೆ. ವನಮಾಲ ವಿಶ್ವನಾಥ್‌, ಜೋಗಿ, ಟಿ.ಎನ್‌. ಸೀತಾರಾಮ್‌, ಅಬ್ದುಲ್‌ ರಶೀದ್‌, ಸುಮಾ ಅಯ್ಯರಹಳ್ಳಿ, ಮಧು ವೈ.ಎನ್‌., ಶಾಂತಿ ಕೆ. ಅಪ್ಪಣ್ಣ, ಪ್ರಶಾಂತ್‌ ಪಂಡಿತ್‌, ಮಲ್ಲಮ್ಮ ಸರಸ್ವತಿ ಜುಲೇಖಾ ಬೇಗಂ, ದೀಪಾ ಬಸ್ತಿ ಮತ್ತು ಬಾನು ಮಸ್ತಕ್‌ ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌ನಲ್ಲಿ ನಡೆಯುವ ಗೋಷ್ಠಿ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

ಕನ್ನಡದ ಗೋಷ್ಠಿಗಳ ವಿವರ :-
ಡಿಸೆಂಬರ್‌ 14 ಗೋಷ್ಠಿಗಳ ವಿವರ:-

ಮಧ್ಯಾಹ್ನ 12ರಿಂದ Bride in the Hills: A Kuvempu Classic :- ವನಮಾಲ ವಿಶ್ವನಾಥ ಮತ್ತು ಗೀತಾ ಹರಹರಣ್‌ ಸಂವಾದ

ಮಧ್ಯಾಹ್ನ 12:30ರಿಂದ ಮಹಾ ಸಂಗ್ರಾಮಿ : - ಎಸ್‌ಆರ್‌ ಹೀರೇಮಠ್‌ ಮತ್ತು ಟಿಆರ್‌ ಚಂದ್ರಶೇಖರ್‌ ಸಂವಾದ

ಮಧ್ಯಾಹ್ನ 2ರಿಂದ ಹೊಸ ಬರಹ: ಕನ್ನಡ ರೈಟಿಂಗ್‌ ಟುಡೇ :- ಕುಸುಮಾ ಅಯ್ಯರಹಳ್ಳಿ, ಮಧು ವೈ.ಎನ್‌, ಶಾಂತಿ ಕೆ. ಅಪ್ಪಣ್ಣ, ಗೀತಾ ವಸಂತ್‌

ಮಧ್ಯಾಹ್ನ 3 ರಿಂದ ಗಂಟೆಗೆ: ಹಸೀನಾ ಮತ್ತು ಇತರೆ ಕಥೆಗಳು:- ದೀಪಾ ಬಸ್ತಿ ಜೊತೆಗೆ ಬಾನು ಮಸ್ತಕ್‌ ಸಂವಾದ

ಸಂಜೆ 4 30 ರಿಂದ: ಕನ್ನಡ ನಿಘಂಟುಗಳ ಜಗತ್ತು :- ಪ್ರಶಾಂತ್‌ ಪಂಡಿತ್‌ ಮತ್ತು ಪಂಜು ಗಂಗೊಳ್ಳಿ ಸಂವಾದ.

ಸಂಜೆ 5 ರಿಂದ: ರಂಗನಟಿಯ ಜೀವನರಂಗ :- ಅಬ್ದುಲ್‌ ರಶೀದ್‌ ಜೊತೆ ಮಲ್ಲಮ್ಮ ಸರಸ್ವತಿ ಜುಲೇಖಾ ಬೇಗಂ ಸಂವಾದ

ಸಂಜೆ 6:15 ರಿಂದ: ನೆನಪಿನ ಪುಟಗಳು: Television, Tales and Turning Points:- ಟಿ.ಎನ್‌. ಸೀತಾರಾಮ್‌ ಜೊತೆ ಜೋಗಿ (ಗಿರೀಶ್‌ ರಾವ್‌ ಹತ್ವಾರ್‌) ಸಂವಾದ

ಡಿಸೆಂಬರ್‌ 15ರ ಗೋಷ್ಠಿಗಳ ವಿವರ:-

11:00 ರಿಂದ:- ಬಿಂಬ ಬಿಂಬನ: Frames of a Life :- ಗಿರೀಶ್‌ ಕಾಸರವಳ್ಳಿ ಅವರ ಜೊತೆ ಎಂ.ಡಿ. ಪಲ್ಲವಿ ಸಂವಾದ

12:15 ರಿಂದ:- ನನ್ನ ಪಾಡಿಗೆ ನಾನು: Adventures with the World :- ಅಬ್ದುಲ್‌ ರಶೀದ್‌ ಜೊತೆ ಗೀತ ವಸಂತ ಸಂವಾದ

1:15 ರಿಂದ:- ಕನ್ನಡ ಪತ್ರಿಕೋದ್ಯಮ: Kannada Journalism Then and Now :- ಪದ್ಮರಾಜ್‌ ದಂಡಾವತಿ ಜೊತೆ ಚ.ಹ. ರಘುನಾಥ್‌ ಸಂವಾದ

2:30 ರಿಂದ:- ನುಡಿ, ನಾಡು, ನೆನಪು: Celebrating Ku Shi Haridas Bhat's Centenary:- ಕೆ. ಚಿನ್ನಪ್ಪ ಗೌಡ, ನಾ ದಾಮೋದರ ಶೆಟ್ಟಿ ಮತ್ತು ಪುರುಷೋತ್ತಮ ಬಿಳಿಮಲೆ

3:45 ರಿಂದ:- ತುಳುನಾಡು: Indigenous Knowledge and Tulu Oral Epics :- ಕೆ. ಚಿನ್ನಪ್ಪ ಗೌಡ

5:30 ರಿಂದ:- ಇಂದಿನ ರಾಜಕೀಯ: Reflections on Contemporary Politics :- ಪುರುಷೋತ್ತಮ ಬಿಳಿಮಲೆ ಜೊತೆ ಚ.ಹ. ರಘುನಾಥ್‌ ಸಂವಾದ

6:00 ರಿಂದ:- ಕಥೆ ಹೇಳುವುದು, ನ್ಯಾಯ ಕೇಳುವುದು: Theatre and Social Justice:- ಹುಲಿಗಪ್ಪ ಕಟಿಮನಿ ಜೊತೆ ಶರಣ್ಯ ರಾಮಪ್ರಕಾಶ್‌

6:30 ರಿಂದ:- Kuvempu's ಶ್ರೀ ರಾಮಾಯಣ ದರ್ಶನಂ :- A Community Reading

ಬೆಂಗಳೂರು ಸಾಹಿತ್ಯೋತ್ಸವದ ಸಂಪೂರ್ಣ ಕಾರ್ಯಕ್ರಮದ ಪಟ್ಟಿ, ನೋಂದಣಿ ಸೇರಿದಂತೆ ಸಂಪೂರ್ಣ ವಿವರ ಪಡೆಯಲು bangaloreliteraturefestival.org ಭೇಟಿ ನೀಡಿ

- ಕುಮಾರ ಸುಬ್ರಹ್ಮಣ್ಯ ಎಸ್‌.

MORE NEWS

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಡೆಯಲಿ:  ಅಮರನಾಥ ಗೌಡ  

22-12-2024 ಮಂಡ್ಯ

ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...

ಗಣಿನಾಡು ಬಳ್ಳಾರಿಯಲ್ಲಿ ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

22-12-2024 ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...

ಸರ್ಕಾರಿ ಶಾಲೆಗಳ ಜಮೀನು ಒತ್ತುವರಿಗೆ ನಾವೇ ದನಿಯಾಗಬೇಕು: ಪುರುಷೋತ್ತಮ ಬಿಳಿಮಲೆ 

22-12-2024 ಮಂಡ್ಯ

ಮಂಡ್ಯ:  100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...