ವಸುಧೇಂದ್ರ ಅವರ 9 ತಿಂಗಳ ಅಧ್ಯಯನದ 9 ತಿಂಗಳಿಗೆ ಹುಟ್ಟಿದ್ದ ಕೂಸು ಇದು


“ಎರಡು ನದಿಗಳ ಜೊತೆಗೆ ಸಾಗುವ ಕಥೆಗಳಲ್ಲಿ ವ್ಯವಸ್ಥಿತ ಮತಾಂತರ, ಮುಗಿಯದ ಕಾಮ, ಬಳಸಿಕೊಳ್ಳುವ ಮುಗ್ಧತೆ ಒಳಗೊಂಡು ಕೊನೆಗೆ ತೇಜೋ ತುಂಗಭದ್ರವಾಗಿ ಹೋಯಿತು.,” ಎನ್ನುತ್ತಾರೆ ಜಯಂತ್ ದೇಸಾಯಿ. ಅವರು ವಸುಧೇಂದ್ರ ಅವರ “ತೇಜೋ ತುಂಗಭದ್ರಾ” ಕೃತಿ ಕುರಿತು ಬರೆದ ವಿಮರ್ಶೆ

ಎಲ್ಲಿಯ ಲಿಸ್ಬನ್ ಎಲ್ಲಿಯ ತೆಂಬಕಪುರ ಎಲ್ಲಿಯ ಗೇಬ್ರಿಯಲ್ ಬೆಲ್ಲಾ ಎಲ್ಲಿಯ ಹಂಪಮ್ಮ ಕೇಶವ....

ಎರಡು ನದಿಗಳ ಗುಂಟ ಸಾಗುವ ಕಥೆ ಅದೆಷ್ಟು ರೋಚಕತೆ ಇಂದ ಕೂಡಿದ್ದು ಅಂದ್ರೆ ಅಲ್ಲಿರುವ ಪ್ರತಿ ತಿರುವುಗಳು ಅಚ್ಚರಿ ಮೂಡಿಸಿದವು.ಮೂಕವಿಸ್ಮಿತನಾಗಿ ಮಾಡಿದವು

ಶಾಂತ ತುಂಗಭದ್ರಾ, ಕಡಲ ಕೂಸು ತೇಜೋ ನದಿ ಎರಡು ದಂಡೆಯ ಗುಂಟ ಸಾಗುವ ತನ್ನ ಒಡಲಿನ ತನ್ನ ದಂಡೆಯ ತನ್ನ ದೇಶಗಳ ಕಥೆಯನ್ನು ಭಿನ್ನ ಆಚರಣೆಗಳನ್ನು ಪ್ರೇಮವನ್ನು, ಪೌರತ್ವನ್ನು, ಕಾಮವನ್ನು,ಮತಾಂತರವನ್ನು, ವಿಜಯವನ್ನು, ಹಟವನ್ನು ನಮ್ಮನ್ನು ಕಟ್ಟಿ ಹಾಕುತ ತೇಜೋವಿನ ಬಣ್ಣದ ಮೀನುಗಳು ತುಂಭದ್ರೆಯಲ್ಲಿ ವಿಹರಿಸಿ ಹೇಳುವ ಮೂಕ ಕಥೆಯೂ ನನ್ನ ಹಿಡಿದಿಟ್ಟು ಬಿಟ್ಟಿತ್ತು.

ವಸುಧೇಂದ್ರ ಅವರ 9 ತಿಂಗಳ ಅಧ್ಯಯನದ 9 ತಿಂಗಳಿಗೆ ಹುಟ್ಟಿದ್ದ ಕೂಸು ಇದು… ಐತಿಹಾಸಿಕ ಘಟನೆಗಳೇ ಹಾಗೆ ಅನ್ನಿಸುತ್ತದೆ ಅಲ್ಲೊಂದು ಜೀವದ ಮೌಲ್ಯವನ್ನು ತಿಳಿಸುತ್ತಾ ತನ್ನೊಡಲಲ್ಲಿ ನಡೆದಿರಬಹುದಾದ ಕಥೆಗಳನ್ನು ವ್ಯಥೆಗಳನ್ನು ಆಯಾ ಕಾಲಘಟ್ಟದ ಬದುಕಿನ ಚಿತ್ರಣವನ್ನು ನಮ್ಮೆದುರು ತೆರೆದುಕೊಳ್ಳುತ್ತಾ ತನ್ನ ಒಡಲಿನ ದುಃಖವನ್ನು ಸ್ವಲ್ಪ ಮಟ್ಟಿಗಾದರೂ ಶಾಂತಗೊಳಿಸಿಕೊಳ್ಳುವ ಪ್ರಕ್ರಿಯೆ ಗೆ ಸಾಕ್ಷಿಯಾಗಿ ಅಲ್ಲಿ ನಡೆದಿರಬಹುದಾದ ಕ್ರೌರ್ಯವನ್ನು ತಿರಸ್ಕಾರಗಳನ್ನು ಅಟ್ಟಹಾಸಗಳನ್ನು, ಕೇಕೆಯನ್ನು, ಸಂಪ್ರದಾಯವನ್ನು ಅದರ ದಕ್ಕೆಯನ್ನು, ಒಟ್ಟಾರೆ ದುಖಃ ಸುಖಗಳನ್ನು ಇತಿಹಾಸದ ಪುಟಗಳಲ್ಲಿ ಛಾಪಿಟ್ಟು ಮುಂದಿನ ಪೀಳಿಗೆಗೆ ಭವ್ಯತೆಯ ತೋರಿಸುತ್ತವೆ. ಇಂತಹದೇ ಐತಿಹಾಸಿಕ ಚಾರಿತ್ರಿಕ ಪರಂಪರೆಗೆ ಹೆಸರುವಾಸಿಯಾದ ಭವ್ಯ ಇತಿಹಾಸವನ್ನು ಹೊಂದಿದ್ದು "ವಿಜಯನಗರ". ಅಲ್ಲಿನ ರಾಜ ಕೃಷ್ಣದೇವರಾಯ ಹಾಗು ಅವನ ರಾಜ್ಯಾಡಳಿತ.

ಇಂತಹ ರಾಜ್ಯಗಳನ್ನು ಹೊಂದಿರುವ ದೇಶ ಭಾರತವನ್ನು ಸೇರಲು ಇಲ್ಲಿನ ವೈಭವನ್ನು ಕಣ್ಣು ತುಂಬಿಕೊಂಡು ಬದುಕು ಕಟ್ಟಿಕೊಳ್ಳಲು ಅದೆಷ್ಟು ದೇಶಗಳು ಅಲ್ಲಿನ ಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಅದಕ್ಕಿದೆ. ಅದೊಂದೇ ಅಲ್ಲ ಭಾರತ ದೇಶದ ಶ್ರೀಮಂತಿಕೆ ಇಂತಹ ರಾಜ್ಯಗಳಿಂದ ತುಂಬಿತ್ತು ಇಲ್ಲಿನ ಪರಂಪರೆ ಜೀವನ ಪದ್ಧತಿ, ಸಹಿಷ್ಣತೆ ಅನೇಕ ದೇಶಗಳನ್ನು ತನ್ನತ್ತ ಸೆಳೆಯುವ ಸನಾತನಕ್ಕೆ ಇತ್ತು ಹಾಗು ಈಗಲೂ ಇದೆ. ಇಂತಹ ಶ್ರೀಮಂತ ದೇಶಕ್ಕೆ ಕಡಲ ದಾರಿ ಹುಡುಕಿದವನು ವಾಸ್ಕೋಡಿಗಾಮ ಅವನ ದೇಶ ಪೋರ್ಚುಗಲ್.

ನಮ್ಮ ನಾಡಿನ ಮಸಾಲೆ ಪದಾರ್ಥ ಪೋರ್ಚುಗೀಸ್ ದೇಶದ ಜನರನ್ನು ಸೆಳೆಯಿತು ,ಅದೊಂದೇ ಅಲ್ಲದೆ ಇಲ್ಲಿನ ವೈಭವದ ಶ್ರೀಮಂತಿಕೆಯನ್ನು ಕಣ್ಣು ಕುಕ್ಕುವಂತೆ ಮಾಡಿ ತನ್ನೆಡೆಗೆ ಸೆಳೆದು ಬಿಟ್ಟಿತ್ತು ಅಲ್ಲೊಂದು ಕಥೆ ಕೂಡ ಹುಟ್ಟಿತ್ತು ಅಲ್ಲೊಬ್ಬ ಗೇಬ್ರಿಯಲ್ ಅಲ್ಲಿನ ಹಸಿ ಮೆಣಸು ಕೂಡ ಇಲ್ಲಿ ಬರುವಂತೆ ಪ್ರೇರೇಪಿಸಿತು ಇಲ್ಲಿಯ ವಿಜಯನಗರ ವೈಭವನ್ನು ಸಾರಲು ಅಲ್ಲಿಯ ಕಥೆ ಗೆ ಇಲ್ಲೊಂದು ಕಥೆ ಹುಟ್ಟಿತ್ತು ಇಲ್ಲೊಬ್ಬಳು ಹಂಪಮ್ಮ ಇಲ್ಲಿನ ಕರಿ ಮೆಣಸು ಲವಂಗ ದಾಲ್ಚಿನ್ನಿ ಅವರೆಡೆಗೆ ಸಾಗುವಂತೆ ಮಾಡಿತು. ಇಲ್ಲಿ ಮೆಣಸಿನಕಾಯಿ ಉಗಮವಾಯಿತು ಅಲ್ಲಿ ಕರಿ ಮೆಣಸು ಪಾರುಪತ್ಯ ಸ್ಥಾಪಿತವಾಯಿತು. ಮಸಾಲೆ ಹಾಗು ಶ್ರೀಮಂತಿಕೆ, ಬದುಕು ಹಾಗೂ ಕಠಿಣ ಸತಿ ಆಚರಣೆ, ಪದ್ಧತಿ ಎರಡು ಒಂದೊಂದಾಗಿ ಎರಡಾಗಿ ಕೊನೆಗೆ ಸಮ್ಮಿಳಿತವಾಗಿ ಹೋಯಿತು.

ಎರಡು ನದಿಗಳ ಜೊತೆಗೆ ಸಾಗುವ ಕಥೆಗಳಲ್ಲಿ ವ್ಯವಸ್ಥಿತ ಮತಾಂತರ, ಮುಗಿಯದ ಕಾಮ, ಬಳಸಿಕೊಳ್ಳುವ ಮುಗ್ಧತೆ ಒಳಗೊಂಡು ಕೊನೆಗೆ ತೇಜೋ ತುಂಗಭದ್ರವಾಗಿ ಹೋಯಿತು.ಮನಸಿನಲ್ಲಿ ಉಳಿಯುವುದು ಅಮ್ಮದಕಣ್ಣ ನಾದ ಗೇಬ್ರಿಯಲ್, ಮಾಪಳ, ತೆಂಬಕ್ಕಾ, ತೆಂಬಕಪುರದ ತೆಂಬಕಸ್ವಾಮಿ,ದಿಬ್ಬಕ್ಕಾ, ಅಡವಿ ಸ್ವಾಮಿ. ಗುಣಸುಂದರಿ ಹಾಗು ಚಂಪಕ್ಕ. ಒಂದು ಅದ್ಭುತ ಓದಿಗೆ ಸಾಕ್ಷಿಯಾದ ಅನುಭವ ಐತಿಹಾಸಿಕ ಪುಟಗಳಲ್ಲಿ ವಿಹರಿಸಿ ಬಂದಂತಹ ಭಾವ.
ಒಮ್ಮೆ ಓದಿ....

- ಜಯಂತ್ ದೇಸಾಯಿ

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...