ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಯು ಡಿ.14 ಮತ್ತು 15ರಂದು ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆಯಲಿದೆ.
ಎರಡು ದಿನಗಳ ಉತ್ಸವದಲ್ಲಿ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಕ್ರೀಡೆ ಸೇರಿದಂತೆ ವೈವಿಧ್ಯಮಯ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಪ್ರತಿಯೊಂದು ಗೋಷ್ಠಿಗಳಿಗೂ ನಿಗದಿತ ವೇದಿಕೆಯಿದ್ದು Festival Lawns, Waterfront, The Valley, Red Couch, New Book Alert ಎಂದು ವೇದಿಕೆಗಳಿಗೆ ಹೆಸರಿಡಲಾಗಿದೆ.
ಡಿ.14 ಶನಿವಾರದಂದು ಬೆಳಗ್ಗೆ Festival Lawns ಎನ್ನುವ ವೇದಿಕೆಯ ಮೂಲಕ ಕರ್ನಾಟಕ ಗಾಯನ ವಾಚನವು ಸುಮಿತ್ರಾ ನಿತಿನ್ ಜೊತೆಗೆ ಮಾಥುರ್ ಆರ್ ಶ್ರೀನಿಧಿ, ಅದಮ್ಯ ರಮಾನಂದ್ ಮತ್ತು ನಾಟ್ಯಶ್ರುತಿ ಸಂಗೀತ ಮೇಳದೊಂದಿಗೆ ಬೆಂಗಳೂರು ಲಿಟ್ ಫೆಸ್ಟ್ ಆರಂಭವನ್ನು ಪಡೆದುಕೊಳ್ಳಲಿದೆ.
ಮುಖ್ಯ ವೇದಿಕೆಯಾದ Festival Lawns ನಲ್ಲಿ ಬೆಳಗ್ಗೆ 9.00 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾದರೆ, Waterfront, The Valley, Red Couch, New Book Alert ವೇದಿಕೆಗಳಲ್ಲಿ 10.00 ರಿಂದ ಸಂಜೆ 7.00ರವರೆಗೆ ವಿವಿಧ ಗೋಷ್ಠಿಗಳು ನಡೆಯಲಿದ್ದು, ಗೋಷ್ಠಿ ಯಲ್ಲಿ ವಿವಿಧ ಕ್ಷೇತ್ರಗಳ ದೇಶ–ವಿದೇಶಗಳ ಚಿಂತಕರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಉತ್ಸವದಲ್ಲಿ ಅರ್ಥಪೂರ್ಣ ಸಂವಾದ, ಆರೋಗ್ಯಕರ ಚರ್ಚೆಗಳು ನಡೆಯಲಿವೆ.
ಒಟ್ಟಾರೆಯಾಗಿ ದೀರ್ಘವಲ್ಲದ, ಇಬ್ಬರು ಅಥವಾ ಮೂವರನ್ನು ಮಾತ್ರ ಕೂರಿಸಿ ನಡೆಸುವ ಸಂವಾದಗಳು, ನಿರ್ದಿಷ್ಟ ವಿಷಯದ ಮೇಲೆ ಸೂಕ್ಷ್ಮವಾಗಿ ಫೋಕಸ್ ಆಗಿರುತ್ತವೆ. ಅಷ್ಟೇಅಲ್ಲದೆ ಎಲ್ಲಾ ಸಂವಾದಗಳು ಕೂಡ ಹೆಚ್ಚಾಗಿ ಒಂದು ಪ್ರಮುಖ ಕೃತಿಯನ್ನು ಆಧರಿಸಿ ನಡೆಯುತ್ತವೆ.
ಈಗಾಗಲೇ ಬೆಂಗಳೂರು ಲಿಟ್ ಫೆಸ್ಟ್ ವೆಬ್ ಸೈಟ್ ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತರು ಈ ಕೆಳಗೆ ನೀಡಲಾಗಿರುವ ವೆಬ್ ಸೈಟ್ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.