ಪ್ರೀತಿಯನ್ನು ವ್ಯಾಖ್ಯಾನ ಮಾಡುವುದು ಕಷ್ಟ


“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನುಷ್ಯನ ಮನೋವ್ಯಾಪರವನ್ನು ತರ್ಕದೊಂದಿಗೆ ಸಮೀಕರಿಸಿಕೊಂಡು ಅತ್ಯಂತ ಸಹಜವಾಗಿ ಪ್ರೀತಿಯನ್ನು ಪ್ರಸ್ತುತಪಡಿಸುತ್ತದೆ,” ಎನ್ನುತ್ತಾರೆ ಸಂಜಯ್‌ ಮಂಜುನಾಥ್‌. ಅವರು ಎಸ್‌. ಎಲ್‌. ಭೈರಪ್ಪ ಅವರ “ದೂರ ಸರಿದರು” ಕೃತಿ ಕುರಿತು ಬರೆದ ವಿಮರ್ಶೆ

ಪ್ರೀತಿಯನ್ನು ವ್ಯಾಖ್ಯಾನ ಮಾಡುವುದು ಕಷ್ಟ. ಎಲ್ಲದಕ್ಕೂ ಮೀರಿದ ಪ್ರೀತಿಯು ಎಲ್ಲರಿಗೂ ದಕ್ಕುವುದು ಅಪರೂಪ. ಈ ಕೃತಿಯಲ್ಲಿ ಬರುವ ಜೋಡಿಗಳಿಗೆ ಪ್ರೀತಿ ದಕ್ಕುವುದಿಲ್ಲ. ತಮ್ಮದೇ ಆದ ಪರಿಸ್ಥಿತಿಗಳಿಂದ ದೂರ ಸರಿಯುತ್ತಾರೆ. ಆ ದೂರ ಸರಿಯುವ ಕ್ರಿಯೆ ಓದುಗನನ್ನು ಕದಡಿಸದೇ ಇರುವುದಿಲ್ಲ.

ವಿಚಾರವಂತಿಕೆ ಮತ್ತು ಭಾವನಾತ್ಮಕತೆಯ ತಳಹದಿಯಲ್ಲಿ ಪ್ರೀತಿಯ ಸ್ವರೂಪವನ್ನು ನಿರೂಪಿಸಿರುವ ಕೃತಿ ದೂರಸರಿದರು.

ವೈಚಾರಿಕತೆಯನ್ನು ಹೆಗಲಗೇರಿಸಿಕೊಂಡಿರುವ ವಸಂತನಿಗೆ ಉಮೆಯ ಸಹಚರ್ಯ ಮೊದಲಿಗೆ ಖುಷಿಯೆನಿಸಿದರು ನಂತರ ಅವಳು ವೈಚಾರಿಕತೆಯಿಂದ ವಿಮುಖಳಾದ್ದರಿಂದ ಅವರಿಬ್ಬರೂ ದೂರ ಸರಿಯುತ್ತಾರೆ. ವಸಂತನ ವಿಚಾರವಂತಿಕೆ ಸರಿಯಿದ್ದರೂ ಅದು ಭಾವದ ಅಭಿವ್ಯಕ್ತಿಯೊಳಗೆ ಮಿಳಿತಗೊಳ್ಳದೆ ಇರುವುದು ಪ್ರೀತಿಫಲಿಸದೆ ಇರುವುದಕ್ಕೆ ಮುಖ್ಯ ಕಾರಣವಾಗುತ್ತದೆ.

ಭಾವನಾತ್ಮಕತೆಯ ಜೊತೆಗೆ ವೈಚಾರಿಕತೆಯನ್ನು ಮೈಗೂಡಿಸಿಕೊಂಡ ಆನಂದನಿಗೆ ವಿನಯಳ ಅತಿ ಭಾವನಾತ್ಮಕತೆ ಮತ್ತು ಅಸಹಾಯಕತೆಯೇ ಅವರಿಬ್ಬರ ಪ್ರೀತಿಗೆ ಮುಳುವಾಗತ್ತದೆ.

ಒಂದು ಅಭಿಪ್ರಾಯವನ್ನು ಸಕಲರು ಒಪ್ಪುವುದಿಲ್ಲ. ಅದು ಒಬ್ಬರಿಂದ ಒಬ್ಬರಿಗೆ ಬೇರೆಯಾಗಿಯೇ ಇರುತ್ತದೆ. ಇಲ್ಲಿಯ ಪಾತ್ರಗಳ ದೃಷ್ಟಿಯಲ್ಲಿ ಅವುಗಳ ಅಭಿಪ್ರಾಯ ಅವುಗಳಿಗೆ ಸರಿ ಎಂದೇ ಅನಿಸುತ್ತದೆ.

ಇನ್ನೂ ಈ ಕೃತಿಯಲ್ಲಿ..

ಆನಂದ-ರಮ ರ ಅಮೂರ್ತ ಪ್ರೀತಿ, ಜಗದಾಂಬೆ-ವಿನುತಾಳ ಸ್ನೇಹ ಪ್ರೀತಿ, ನರೋತ್ತಮ್-ರಮ..ರಾಮಮೂರ್ತಿ-ವಿಜಯಳ ವಂಚನೆಯ ಪ್ರೀತಿ, ವಾಸನ್-ವಿಜಯರ ಅವಸರದ ಪ್ರೀತಿ, ಆನಂದ್ ಮತ್ತು ಅವನ ತಾಯಿಯ ವಾತ್ಸಲ್ಯ ಪ್ರೀತಿ, ವಿನುತಾ ಮತ್ತು ಅವಳ ತಾಯಿಯ ಜಿಗುಟು ಪ್ರೀತಿ. ಹೀಗೆ ಪ್ರೀತಿಯ ವಿವಿಧ ಸ್ವರೂಪಗಳು ಕಾಣಿಸುತ್ತವೆ.

ಮೊದಲಿಗೆ ತರ್ಕ ವಿಚಾರಗಳೇ ಜಾಸ್ತಿಯೆಂದೆನಿಸಿ ಕೃತಿಯ ಪ್ರವೇಶಕ್ಕೆ ಸ್ವಲ್ಪ ನಿಧಾನವಾಯಿತು. ಆದರೆ ಮುಂದೆ ಕಥೆಯು ಸರಾಗವಾಗಿ ಸಾಗಿದಂತೆ ನನ್ನೊಳಗೆ ಮಥಿಸಲು ಶುರುವಾಗಿದ್ದಂತೂ ನಿಜ.

ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನುಷ್ಯನ ಮನೋವ್ಯಾಪರವನ್ನು ತರ್ಕದೊಂದಿಗೆ ಸಮೀಕರಿಸಿಕೊಂಡು ಅತ್ಯಂತ ಸಹಜವಾಗಿ ಪ್ರೀತಿಯನ್ನು ಪ್ರಸ್ತುತಪಡಿಸುತ್ತದೆ.

ಉತ್ತಮ ಕೃತಿ

MORE FEATURES

ಅಕ್ಕಿಯಿದ್ದಲ್ಲಿ ಹಕ್ಕಿಗಳು ಬರುತ್ತವೆ...

11-04-2025 ಬೆಂಗಳೂರು

"ಬಹು ಆಯಾಮದ ವ್ಯಕ್ತಿತ್ವದ, ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಸದಾ ಚಟುವಟಿಕೆಯುಳ್ಳ, ಕ್ರಿಯಾಶೀಲಗುಣವ...

ಒಂದು ಸಮುದಾಯವು ತನ್ನ ಒಳಿತಿಗಾಗಿ ಶ್ರಮಿಸಿದವರನ್ನು ಆರಾಧಿಸುವುದು ಸಾಮಾನ್ಯ

11-04-2025 ಬೆಂಗಳೂರು

"‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಪ್ರಸ್ತುತ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ...

ಪ್ರಯೋಗಾತ್ಮಕ ಹಾಗು ಸಹಜ ಹರಿವಿನ ಕಥೆಗಳ ನಡುವೆ 

11-04-2025 ಬೆಂಗಳೂರು

"ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಕಾಣಸಿಗುವ ಹೆಣ್ಣಿನ ಪಾವಿತ್ಯ್ರತೆಯ ಪ್ರಶ್ನೆ ಹಾಗೂ ಅಸಮ ದಾಂಪತ್ಯದಲ್...