ಪಾರ್ವತಿ ಐತಾಳ್ ಒಂದು ದೊಡ್ಡ ಸಂದೇಶವನ್ನು ನೀಡುವ ಕೆಲಸ ಮಾಡಿದ್ದಾರೆ


"ಒಂದು ಪ್ರದೇಶದಲ್ಲಿ ಒಂದು ಆಸ್ಪತ್ರೆ ಬರುವುದು ಪ್ರಗತಿಯ ಪ್ರತೀಕವಾಗಿ. ಆಸ್ಪತ್ರೆ ಬರುವುದ ಆ ಊರಿನ ಅಗತ್ಯ. ಯಾವುದೇ ಊರಿನ ಅಗತ್ಯ ಕೂಡಾ. ಅಂಥ ಒಂದು ಊರಿನಲ್ಲಿ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಆಡಳಿತ ವರ್ಗವು ಹುಚ್ಚಿಗೆ ಚಿಕಿತ್ಸೆ ನೀಡುವ ಒಂದು ವಾರ್ಡ್ ಬೇಕೆಂದು ನಿರ್ಧರಿಸುತ್ತದೆ. ಹುಚ್ಚರೆಂದು ಅವರಿಗೆ ಅನ್ನಿಸಿದ ಕೆಲವರನ್ನು ಅಲ್ಲಿ ಚಿಕಿತ್ಸೆ ನೀಡಲೆಂದು ಹಿಡಿದು ತರುತ್ತದೆ," ಎನ್ನುತ್ತಾರೆ ಡಾ. ಮಿನಿಪ್ರಸಾದ್. ಅವರು ಪಾರ್ವತಿ ಜಿ. ಐತಾಳ್ ಅವರು ಮಲೆಯಾಳಕ್ಕೆ ಅನುವಾದಿಸಿದ 'ಭ್ರಾಂತಾಲಯಂ' ಕನ್ನಡ ನಾಟಕದ ಬಗ್ಗೆ ಬರೆದಿರುವ ವಿಮರ್ಶೆ.

ಆಂಟನ್ ಚೆಕೋಫನ ಪ್ರಸಿದ್ಧ ಕಥೆ 'ವಾರ್ಡ್ ನಂ.6 ಅದರ ನಾಟಕ ರೂಪಾಂತರ ಎಂಬ ನೆಲೆಯಿಂದ 'ಭ್ರಾಂತಾಲಯಂ'ಎಂಬ ನಾಟಕ ಗಮನಾರ್ಹವಾಗುತ್ತದೆ. ಈ ಪ್ರಸಿದ್ಧವಾದ ಕಥೆಯನ್ನು ಕನ್ನಡದ ಹಿರಿಯ ಲೇಖಕ ಡಾ.ಡಿ.ಅರ್. ನಾಗರಾಜ್ 'ಕತ್ತಲ ದಾರಿ ದೂರ' ಎಂಬ ನಾಟಕವಾಗಿ ರೂಪಾಂತರಿಸಿದ್ದನ್ನು ಶ್ರೀಮತಿ ಪಾರ್ವತಿ ಐತಾಳ್ ಮಲೆಯಾಳಕ್ಕೆ 'ಭ್ರಾಂತಾಲಯಂ' ಎಂಬ ಹೆಸರು ಕೊಟ್ಟು ಅತ್ಯಂತ ಸುಂದರವಾದ ಒಂದು ಅನುಭವವಾಗಿ ಪರಿವರ್ತಿಸಿದ್ದಾರೆ.

ಒಂದು ಪ್ರದೇಶದಲ್ಲಿ ಒಂದು ಆಸ್ಪತ್ರೆ ಬರುವುದು ಪ್ರಗತಿಯ ಪ್ರತೀಕವಾಗಿ, ಆಸ್ಪತ್ರೆ ಬರುವುದು ಆ ಊರಿನ ಅಗತ್ಯ. ಯಾವುದೇ ಊರಿನ ಅಗತ್ಯ ಕೂಡಾ. ಅಂಥ ಒಂದು ಊರಿನಲ್ಲಿ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಆಡಳಿತ ವರ್ಗವು ಹುಚ್ಚಿಗೆ ಚಿಕಿತ್ಸೆ ನೀಡುವ ಒಂದು ವಾರ್ಡ್ ಬೇಕೆಂದು ನಿರ್ಧರಿಸುತ್ತದೆ. ಹುಚ್ಚರೆಂದು ಅವರಿಗೆ ಅನ್ನಿಸಿದ ಕೆಲವರನ್ನು ಅಲ್ಲಿ ಚಿಕಿತ್ಸೆ ನೀಡಲೆಂದು ಹಿಡಿದು ತರುತ್ತದೆ. ಅವರೆಲ್ಲರೂ ಹುಚ್ಚರೇನಲ್ಲ. ಹುಚ್ಚು ಅನ್ನುವುದು ಸಮಾಜದ ಸೃಷ್ಟಿ ಎಂಬ ದೃಷ್ಟಿಯಿಂದ ಇಲ್ಲಿನ ಕಥಾಪಾತ್ರಗಳನ್ನು ಪ್ರಸ್ತುತ ಪಡಿಸಲಾಗಿದೆ. ಅವರನ್ನು ಹುಚ್ಚರಾಗಿ ನಿಲ್ಲಿಸುವುದು ಆಡಳಿತ ವರ್ಗದ ಒಂದು ಅಗತ್ಯ ಕೂಡಾ ಆಗಿದೆ.

ಅಲ್ಲಿ ಚಿಕಿತ್ಸೆ ನೀಡಲು ಬರುವ ಒಬ್ಬ ಡಾಕ್ಟರ್- ಅವನ ಕರುಣೆ-ಸಹಾನುಭೂತಿಗಳು ಹೆಚ್ಚಾದವೆಂದು, ಅಲ್ಲಿನ ರೋಗಿಗಳನ್ನು- ರೋಗಿಗಳೆಂದು ಮುದ್ರೆ ಹಾಕಿಸಿಕೊಂಡವರನ್ನು- ಮನುಷ್ಯತ್ವದಿಂದ ಕಾಣುತ್ತಾನೆ ಎಂಬ ಕಾರಣದಿಂದ, ಅವರಿಗೆ ಬೇಕಾದ ಸೌಲಭ್ಯಗಳನ್ನು ಕೇಳಿ ಸಂಪಾದಿಸಿ ಕೊಡುತ್ತಾನೆಂದು ಅವನನ್ನು ಇವರು ಹುಚ್ಚನೆಂದು ಘೋಷಿಸುತ್ತಾರೆ. ಈ ನಾಟಕವನ್ನು ಓದುವಾಗ ನಮಗೆ ಅರ್ಥವಾಗುವುದು ಆಡಳಿತ ವರ್ಗಕ್ಕೆ-ಅದರಲ್ಲಿ ಕಾರ್ಯ ನಿರ್ವಹಿಸುವವರಿಗೆ ಮತ್ತು ಕಾನೂನಿಗೆ ಯಾರನ್ನೂ ಕೂಡಾ ಹುಚ್ಚರಾಗಿ ಬದಲಾಯಿಸಲು ಸಾಧ್ಯವಾಗುತ್ತದೆ ಎಂದು. ಹಾಗೆ ಬದಲಾಯಿಸಿ ಅವರನ್ನು ಹುಚ್ಚಾಸ್ಪತ್ರೆಯಲ್ಲಿ ಕೂಡಿ ಹಾಕಲು ಯಾವುದೇ ರೀತಿ ಕಷ್ಟವಾಗುವುದಿಲ್ಲ ಎಂಬುದು ಅದರಲ್ಲಡಗಿದ ಮುಂದಿನ ಸತ್ಯ. ಸತ್ಯವನ್ನು ಹೀಗೆ ತಮಗೆ ಬೇಕಾದಂತೆ ತಿರುಚಿಕೊಳ್ಳುವ ಸಾಮಾಜಿಕ ಸಂದರ್ಭವನ್ನು ಚಿತ್ರಿಸುವ ಒಂದು ನಾಟಕವನ್ನು ಬರೆಯುವುದರ ಮೂಲಕ ಪಾರ್ವತಿ ಐತಾಳ್ ಒಂದು ದೊಡ್ಡ ಸಂದೇಶವನ್ನು ನೀಡುವ ಕೆಲಸ ಮಾಡಿದ್ದಾರೆಂದು ನನಗನ್ನಿಸುತ್ತದೆ.

ಹಣ, ಅಧಿಕಾರ, ಪ್ರಭಾವ, ರಾಜಕೀಯ, ಬೆಂಬಲಗಳು ಇದ್ದರೆ ಏನನ್ನು ಬೇಕಾದರೂ ಸಾಧಿಸುವ ಒಂದು ಸ್ಥಿತಿಯತ್ತ ನಾವು ಸಾಗುತ್ತಿರುವ ಒಂದು ಕಾಲಘಟ್ಟದಲ್ಲಿ ಕಾನೂನು ಅನ್ನುವುದು ಬಡವರ ಪರವಾಗಿ ಇಲ್ಲವೆಂದೂ ನ್ಯಾಯದೇವತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದಾಳೆಂಬುದು ಬರೇ ಕಲ್ಪನೆಯೆಂದೂ ನಮ್ಮ ಪ್ರಸಕ್ತ ಅನುಭವವಾಗಿ ಸಂದರ್ಭವು ನಮಗೆ ಪಾಠ ಕಲಿಸಿಕೊಂಡಿರುವ ಈ ಕಾಲದಲ್ಲಿ ಈ ನಾಟಕವು ಅತ್ಯಂತ ಪ್ರಸ್ತುತವಾಗಿದೆ.

- ಡಾ. ಮಿನಿಪ್ರಸಾದ್
(ಮಲೆಯಾಳದಲ್ಲಿ ಬರೆದ ವಿಮರ್ಶೆಯ ಅನುವಾದ)
(ಡಾ.ಮಿನಿಪ್ರಸಾದ್ ಕೇರಳದ ನಿಲಂಬೂರಿನ ಮಾರ್ಥೋಮಾ ಕಾಲೇಜಿನಲ್ಲಿ ಮಲೆಯಾಳಂ ಪ್ರೊಫೆಸರ್ ಅಗಿ ನಿವೃತ್ತರಾದವರು. ಮಲೆಯಾಳದ ಹಿರಿಯ ವಿಮರ್ಶಕರು. )

 

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...