"ಈ ಕೃತಿಯ ಎಂಟು ಅಧ್ಯಾಯಗಳ ಪ್ರತಿ ಅಧ್ಯಾಯದಲ್ಲಿ ಅವರ ಬದುಕಿನ ವಿವಿಧ ಮಜಲುಗಳು ಹಂತ ಹಂತವಾಗಿ ತೆರೆದುಕೊಳ್ಳುತ್ತಾ, ಹೋಗುತ್ತದೆ. ಅವರ ಬದುಕಿನ ನೋಟ ಒಂದು ಸಂವೇದನೆಯ ನೋಟವಾಗಿ ಓದುಗರಿಗೆ ಭಾಸವಾಗುತ್ತದೆ," ಎನ್ನುತ್ತಾರೆ ರೇಶ್ಮಾ ಗುಳೇದಗುಡ್ಡಾಕರ್. ಅವರು ಎ.ಎನ್ ನಾಗರಾಜ್ ಅವರ ‘ಆನಂದದ ಹುಡುಕಾಟದಲ್ಲಿ’ ಕೃತಿ ಕುರಿತು ಬರೆದ ವಿಮರ್ಶೆ.
ಕೃತಿ: ಆನಂದದ ಹುಡುಕಾಟದಲ್ಲಿ
ಲೇಖಕರು: ಎ.ಎನ್ ನಾಗರಾಜ್
ಪ್ರಕಾಶನ:- ಅಂಕಿತ ಪುಸ್ತಕ.
ಬೆಲೆ: ₹170
ಕೆಲವು ಪುಸ್ತಕಗಳೇ ಹಾಗೆ ನೋಡುತ್ತಲೇ ಸೆಳೆಯುತ್ತವೆ, ಹಾಗೆಂದು ನಾನು ಅಂದವಾದ ಮುಖಪುಟದ ಬಗ್ಗೆ ಇಲ್ಲಿ ಹೇಳುತ್ತಿಲ್ಲ, ಮುಖಪುಟವು ಕೃತಿಯ ಒಂದು ಭಾಗವೆ ಆದರೂ ಕೆಲವೊಮ್ಮೆ ಅದು ವಿಫಲವಾಗುತ್ತದೆ. ಆದರೆ ನಾನು ಈಗ ಹೇಳು ಹೊರಟಿರುವುದು ಎ.ಎನ್.ನಾಗರಾಜ್ ಅವರು ಬರೆದ ಅನುಭವ ಕಥನ. "ಆನಂದದ ಹುಡುಕಾಟದಲ್ಲಿ" ಎಂಬ ಕೃತಿಯ ಕುರಿತು, ಇಲ್ಲಿ ಲೇಖಕರು ಆಹಾರ ತಜ್ಞರಾಗಿ, ಪರಿಸರ ಹೋರಾಟಗಾರರಾಗಿ, ಪ್ರೀತಿಯ ಅಪ್ಪನಾಗಿ, ಆತ್ಮೀಯ ನೆರೆಹೊರೆಯನಾಗಿ, ಹೀಗೆ ಹತ್ತು ಹಲವು ರೂಪಗಳಲ್ಲಿ ಓದುಗರಿಗೆ ಕಾಣಸಿಗುತ್ತಾರೆ.
ಇವರು ಎ.ಎನ್. ಮೂರ್ತಿ ರಾವ್ ಅವರ ಪುತ್ರ ಎ.ಎನ್. ನಾಗರಾಜ್ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ನಿವೃತ್ತ ಸಲಹೆಗಾರರಾಗಿ ತಮ್ಮ ಸಂಧ್ಯಾ ಜೀವನವನ್ನು ಕಳೆಯುವ ಇವರಿಗೆ ಈಗ ಬರಪೂರ 96 ರ ಯುವಪ್ರಾಯ ಎಂದರೆ ತಪ್ಪಾಗುವುದಿಲ್ಲ. ಕಾರಣ ನಾನು ಮೊದಲ ಬಾರಿಗೆ ಓದಿದ ಕೃತಿಯೊಂದರ ಲೇಖಕರನ್ನು ನೇರವಾಗಿ ಭೇಟಿಯಾಗಿ ಬಂದಾಗ ಅನಿಸಿದ ಬಗೆಯಿದು.
ಈ ಕೃತಿಯ ಎಂಟು ಅಧ್ಯಾಯಗಳ ಪ್ರತಿ ಅಧ್ಯಾಯದಲ್ಲಿ ಅವರ ಬದುಕಿನ ವಿವಿಧ ಮಜಲುಗಳು ಹಂತ ಹಂತವಾಗಿ ತೆರೆದುಕೊಳ್ಳುತ್ತಾ, ಹೋಗುತ್ತದೆ. ಅವರ ಬದುಕಿನ ನೋಟ ಒಂದು ಸಂವೇದನೆಯ ನೋಟವಾಗಿ ಓದುಗರಿಗೆ ಭಾಸವಾಗುತ್ತದೆ.
ಈ ಪುಸ್ತಕದಲ್ಲಿ ಅವರು ವಿವರಿಸಿರುವ ಅವರ ಇಡೀ ಜೀವನವನ್ನು ಬರಹ ರೂಪದಲ್ಲಿ ನಾನು ಮತ್ತೆ ಇಲ್ಲಿ ಪರಿಚಯಿಸುವುದು ಬಹಳ ಪ್ರಯಾಸಕರ ವಿಚಾರ. ಆದರೂ ನಾನು ಬಹುವಾಗಿ ಪ್ರಯತ್ನಿಸಿದ್ದೇನೆ. ಆದರೆ ಈ ಕೃತಿ ಎಲ್ಲಿಯೂ ತಡೆ ಆಗದಂತೆ ಓದಿಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗುತ್ತದೆ. ಬದುಕಿನ ರೋಚಕ ತಿರುವುಗಳು ಹಲವು ಇದು ಯಾರಿಗೂ ತಪ್ಪಿರುವುದಿಲ್ಲ. ಈ ತಿರುವುಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮಗೆ ಎದುರಾದ ಸಂದಿಗ್ನತೆ ಇರಬಹುದು, ಸ್ನೇಹಿತರಾಗಿರಬಹುದು, ಮಕ್ಕಳು. ಎಲ್ಲರೂ ಇಲ್ಲಿ ಹಾದು ಹೋಗುತ್ತಾರೆ.
ಬಾಲ್ಯದಲ್ಲಿ ತಂದೆಯವರು ಎ.ಎನ್. ಮೂರ್ತಿರಾಯರು ಸದಾ ಓದು ಮತ್ತು ಬರಹಗಳಲ್ಲಿ ಮಗ್ನರಾಗಿರುತ್ತಾರೆ. ತಂದೆಯೊಂದಿಗೆ ಆಡುವ ,ಮಾತನಾಡಿ ಅವರ ಅಪ್ಪುಗೆಯನ್ನು ಬಯಸಬೇಕು ಎಂಬ ಪುಟ್ಟ ಹೃದಯಗಳು ದೂರವಿರಬೇಕಾದ ಸಂದರ್ಭಇರುತ್ತದೆ. ಇನ್ನು ಬಾಲ್ಯದಲ್ಲಿ ಬೆಳೆದ ಪರಿಸರ ಮುಂದೆ ಬದುಕಿನಲ್ಲಿ ಇವರಿಗೆ ಬಹಳಷ್ಟು ಭದ್ರತೆಯ ಮನಸ್ಸನ್ನು ಸದೃಢ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯನ್ನಾಗಿ ಮಾಡುತ್ತದೆ ಎಂಬುದು ಈ ಪುಸ್ತಕದ ಬಾಲ್ಯದ ಸಾರಾಂಶವಾಗಿ ಓದುಗರಿಗೆ ಕಾಣಸಿಗುತ್ತದೆ.
ಇನ್ನು ಓದು, ವಿದೇಶದ ಪಯಣ, ವಿದೇಶದಲ್ಲಿನ ತೊಡಲಾಟಗಳನ್ನು ಈ ಪುಸ್ತಕ ಸಮರ್ಥವಾಗಿ ವಿವರಿಸಿದೆ. "ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ" ಎಂಬುವಂತೆ ಎಷ್ಟೋ ವಿಚಾರಗಳನ್ನು ನಾವು ಅರಿಯಲು ಅಸಮರ್ತರಾಗುತ್ತೇವೆ. ಇಂದಿಗೂ ಇರಬಹುದು ವಿದೇಶ ಎಂದರೆ ಹಲವಾರು ಜನರಿಗೆ ಬಹಳ ಮೋಹವಿದೆ ಅದು ತಪ್ಪಲ್ಲ ಆದರೆ ಅಲ್ಲಿನ ನೈಜ ವಾತಾವರಣವನ್ನು ಅರಿವುವಲ್ಲಿ ಸಫಲ ಆಗುವುದಿಲ್ಲ.
ಅಂತೇ ಭಾರತದಲ್ಲಿ ತಮಗೆ ಸಿಗದಿದ್ದ ಮಾನ್ಯತೆಯನ್ನು ವಿದೇಶದಿಂದ ತಾವು ಪಡೆದದ್ದು ಸಹ ಕೃತಿಯಲ್ಲಿ ದಾಖಲೆ ಇದೆ. ನಮ್ಮ ದೇಶವಾದರೂ ಅಷ್ಟೇ ಇಲ್ಲಿ ಪೂರಕ ವಾತಾವರಣ ಸಿಗುತ್ತದೆ ಎಂದು ಹೇಳುವುದು ಬಹಳ ಕಷ್ಟವೇ ಇದೆ. ದೇಶ ಮತ್ತು ವಿದೇಶಗಳಲ್ಲಿ ಅವರಿಗಾದ ಎಲ್ಲಾ ಅನುಭವಗಳನ್ನು ಈ ಕೃತಿಯಲ್ಲಿ ಅವರು ಹಂತ ಹಂತವಾಗಿ ದಾಖಲಿಸುತ್ತಾ ಹೋಗುತ್ತಾರೆ. ಇಲ್ಲಿ ಸಿಕ್ಕ ಗೆಳೆಯರು ಕಂಡ ಅನುಭವಗಳು ಸುತ್ತಾಡಿದ ಜಾಗ, ಊಟ ಆಹಾರ ಪದ್ಧತಿ ಬೇರೆಯಾದ ಬಗೆ, ದೇಶಾದ್ಯಂತ ಸಂಚರಿಸಿದಾಗ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ಬಗೆ.
ನಂತರ ಸಂಸಾರಸ್ಥರ ಸಮೇತ ರೈತರಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಮೊದಲು ಅವರು ಬೆಂಗಳೂರಿನ ಸುತ್ತಮುತ್ತ ಭೂಮಿಯನ್ನು ಹುಡುಕುತ್ತಿರುವಾಗ. ಅಲ್ಲಿ ಕಂಡ ಅಕ್ರಮ ಸಕ್ರಮಗಳಿಗೆ ಇವರು ಆಶ್ಚರ್ಯ ಆಗುತ್ತಾರೆ. ಕಾರಣ ಯಾರದೋ ಭೂಮಿ ಇನ್ ಯಾರದೋ ಹೆಸರಿಗಿಂತ ಹಲವಾರು ಗಾದೆಗಳನ್ನು ಇವರಿಗೆ ತೋರಿಸಲಾಗುತ್ತದೆ. ಇವರ ಸಂಬಂಧಿಕರಿಂದಲೇ ಇವರಿಗೆ ಮೋಸವಾಗುವ ಸಾಧ್ಯತೆ ಇರುತ್ತದೆ.
ಈ ಈ ಕರಾಳತೆಯನ್ನು ಬಿಟ್ಟು ಮೈಸೂರಿನ ಹತ್ತಿರ ಹಳ್ಳಿಯಾದ ಕಡಳಲವಾಡಿಯಲ್ಲಿ ವಿವಾದಗಳು ಇಲ್ಲದ ಜಮೀನನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲಿನ ಮುಗ್ಧತೆ ಸ್ನೇಹ, ಪ್ರೀತಿ, ಗೂಗಲ್ ಮ್ಯಾಪ್ ನಿಂದ ಇಂದು ನಾವು ಸಂಚರಿಸುತ್ತೇವೆ, ಆದರೆ ದಶಕಗಳ ಹಿಂದೆ ಗೂಗಲ್ ಇಲ್ಲದೆ ರಾತ್ರಿ ಎತ್ತುಗಳು ಗಾಡಿಯನ್ನು ಸರಿಯಾಗಿ ಮನೆಯ ವಿಳಾಸಕ್ಕೆ ತಂದು ನಿಲ್ಲಿಸಿರುತ್ತವೆ.! ಈ ಅನುಭವ ಕೃಷಿ ಹಿನ್ನೆಲೆಯಿಂದ ಬಂದವರಿಗೆ ಸಹಜ ಎಂದು ಅನಿಸಬಹುದು. ಆದರೆ ಇಂದಿನ AI ತಂತ್ರಜ್ಞಾನದಲ್ಲಿ ಇವೆಲ್ಲ ಮುಂದಿನ ದಿನಗಳಲ್ಲಿಯೂ ಸಹ ಅಗೋಚರವಾಗುತ್ತವೆ. ನಂತರ ಬದುಕು ಧುಮುಕುವುದು ಪರಿಸರ ಹೋರಾಟ ಜೊತೆಗೆ ಬದುಕಿನ ಹೋರಾಟವು ಸಹ ಸೇರುತ್ತದೆ. ಆಧ್ಯಾತ್ಮ ಆಹಾರ ಪದ್ಧತಿ, ಒಲವಿನ ಬದುಕು, ಒಂದು ಆದಿಮ ಬದುಕಿನ ನೋಟವೇ ಆನಂದದ ಹುಡುಕಾಟದಲ್ಲಿ ಎಂಬ ಕೃತಿ .
ಈ ಬದುಕೊಂದು ನಿರಂತರ ಹುಡುಕಾಟ ಲೇಖಕರ ಈ ಹುಡುಕಾಟದಲ್ಲಿ ಇವರು ಜಮೀನು ಪಡೆಯುವಾಗ ಬೆಂಗಳೂರಲ್ಲಿರುವ ಭೂವಿವಾದವನ್ನು ಕಾಣಬಹುದು, ಮೈಸೂರಿನ ಕೊಳಚೆ ನೀರನ್ನು ಕಳಲವಾಡಿಯ ಕೆರೆಗೆ ಬಿಡುವ ಸಮಯ ಬಂದಾಗ ಇವರು ಊರನ್ನು ತೊರೆಯುವ ಪ್ರಸಂಗ ಹೇಗೆ ಸರ್ಕಾರವೇ ಕೆರೆ ಮತ್ತು ಪರಿಸರಗಳನ್ನು ಹೇಗೆ ಹಾಳುಮಾಡುತ್ತವೆ ಎಂಬುದಕ್ಕೆ ಇಲ್ಲಿ ಸೂಕ್ತ ನಿದರ್ಶನ ಕಾಣುತ್ತದೆ. ನಂತರ ಶಿವಮೊಗ್ಗದಲ್ಲಿ ವಾಸ ಅಲ್ಲಿ ಪರಿಸರಕ್ಕೆ ತೆಗೆದುಕೊಂಡ ಜಾಗೃತಿಯ ಕಾರ್ಯಗಳು. ಹತ್ತು ಹಲವು ಕಾರ್ಯಗಳು ಒಂದೇ ಬದುಕಿನಲ್ಲಿ ನಮಗೆ ಕಾಣಸಿಗುವುದು ವಿಶೇಷ. ನಿರ್ವಾಜ್ಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸರಳವಾಗಿ ಬದುಕುವುದರಲ್ಲಿ ನಡೆದ ಹೋರಾಟವಿದೆಯಲ್ಲ ಅದು ಸಾಮಾನ್ಯವಲ್ಲ.
ಪ್ರಸ್ತುತ ಅಪ್ಪನಾಗಿ, ಅಜ್ಜನಾಗಿ ,ಊರಿನ ಹಿರಿಯಣ್ಣನಾಗಿ ಭೀಮನ ಕಟ್ಟೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಈ ಕೃತಿಯ ಇಂಗ್ಲಿಷ್ ಅವತರಿಣಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. ಸದಾ ಓದು ,ಸಂಗೀತ, ಬರಹ ಮನೆಗೆ ಬಂದವರೊಡನೆ ಆತ್ಮೀಯವಾದ ಚರ್ಚೆ ಇವೆಲ್ಲವೂ ಲೇಖಕರ ಪ್ರಸ್ತುತ ದಿನಚರಿಯಾಗಿದೆ.
- ರೇಶ್ಮಾ ಗುಳೇದಗುಡ್ಡಾಕರ್
"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...
"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
©2024 Book Brahma Private Limited.