ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅನುಪಮಾ ಮತ್ತು ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ ಪ್ರದಾನ ಸಮಾರಂಭವು 2024 ಡಿ. 08 ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ, ಖ್ಯಾತ ನ್ಯಾಯವಾದಿ ಹೇಮಲತಾ ಮಹಿಷಿ ಅವರು ಅನುಪಮಾ ಪ್ರಶಸ್ತಿಯನ್ನು ಡಾ. ವಿಜಯಾ ಸುಬ್ಬರಾಜ್, ಡಾ. ವಸುಂಧರಾ ಭೂಪತಿ, ಡಾ. ಸಬಿಹಾ ಭೂಮಿಗೌಡ, ಡಾ. ಕೆ. ಆರ್. ಸಂಧ್ಯಾರೆಡ್ಡಿ, ಡಾ. ಲತಾ ಗುತ್ತಿ ಅವರಿಗೆ ಹಾಗೂ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿಯನ್ನು ಅಲಕಾ ಕಟ್ಟೆಮನೆ, ಎಲ್. ವಿ. ಶಾಂತಕುಮಾರಿ, ಹೆಚ್. ಆರ್. ಸುಜಾತಾ, ಅನುಪಮಾ ಪ್ರಸಾದ್ ಅವರಿಗೆ ಪ್ರದಾನಿಸಿದರು.
ನಂತರದಲ್ಲಿ ಮಾತನಾಡಿದ ಅವರು, 'ಸಾಹಿತ್ಯ ವಲಯದಲ್ಲಿ ಸಾಧನೆಯನ್ನು ಮಾಡಿದವರಿಗೆ ಇಂದು ಗೌರವ ಸಂದಿದೆ. ಮಹಿಳೆಯರ ಎಲ್ಲಾ ವಲಯದಲ್ಲಿಯೂ ಸಾಧನೆಯನ್ನ ಮಾಡುತ್ತಿದ್ದು, ಸಾಹಿತ್ಯ ವಲಯ ಅವರ ಭಾವನೆಗಳಿಗೆ ಬೆಲೆ ಕೊಡುವ ಒಂದು ಸೂಕ್ತವಾದ ವೇದಿಕೆ,' ಎಂದರು.
ಲೇಖಕಿಯರ ಸಂಘದ ಅಧ್ಯಕ್ಷೆ ಎಚ್. ಎಲ್. ಪುಷ್ಪ ಅವರು ಪ್ರಸ್ತಾವಿಕ ನುಡಿಗಳನ್ನಾಡಿ, 'ಅನುಪಮಾ ಹಾಗೂ ಎಚ್. ವಿ. ಸಾವಿತ್ರಮ್ಮ ಅವರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರ ಕಾದಂಬರಿಗಳು ಪ್ರಸ್ತುತ ಜಗತ್ತಿನ ಮಹಿಳಾ ಬರಹಗಾರರಿಗೆ ನಿಜಕ್ಕೂ ಸ್ಫೂರ್ತಿಯನ್ನು ನೀಡುತ್ತದೆ. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ,' ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಂಜಗೆರೆ ಜಯಪ್ರಕಾಶ, ಲೇಖಕ, ಪತ್ರಕರ್ತ ದೇವು ಪತ್ತಾರ, ಮಂಜುಳಾ ಶಿವಾನಂದ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.