ಕನ್ನಡ ನಾಡಿನಲ್ಲಿಯೂ ಕಾಣದ ಅಭಿಮಾನವನ್ನು ಕಂಡು ಮನಸ್ಸು ಮೂಕವಾಗುತ್ತದೆ: ಎಲ್.ವಿ. ಶಾಂತಕುಮಾರಿ


''ಸುತ್ತಮುತ್ತಲ ವಾತಾವರಣ, ಪರಿಸ್ಥಿತಿ, ಪ್ರಕೃತಿ, ಜನರ ವರ್ತನೆಗಳು ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಉಂಟುಮಾಡಿ ನಮ್ಮನ್ನು ಪ್ರತಿಕ್ರಿಯಿಸುವಂತೆ ಒತ್ತಾಯಿಸುವುದಂತೂ ಸತ್ಯ. ಪ್ರತಿಕ್ರಿಯಿಸುವುದಕ್ಕಿಂತಲೂ ಹಲವು ಬಾರಿ ಈ ಬಾಹ್ಯ ಪ್ರಚೋದನೆಗಳಿಂದ ನಮ್ಮ ಒಳಗನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು ಎನಿಸುತ್ತದೆ,'' ಎನ್ನುತ್ತಾರೆ ಎಲ್. ವಿ. ಶಾಂತಕುಮಾರಿ. ಅವರು ತಮ್ಮ ‘ಸೂರ್ಯಮುಖಿ’ ಕೃತಿಗೆ ಬರೆದ ಲೇಖಕರ ನುಡಿ ನಿಮ್ಮ ಓದಿಗಾಗಿ.

ಈ ಸಂಕಲನಕ್ಕೆ ನನ್ನ ಮಾತಿನ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ದುಃಖವೋ ಅದಾಗಲೋ, ಬದುಕಿನ ಹಲವಾರು ಭಾವಗಳು ಮನ ಇಲ್ಲಿರುವ ಬರೆಹಗಳನ್ನು ಕವನಗಳೆಂದು ನಾನು ಹೇಳಲಾರೆ, ಮನಸ್ಸಿಗೆ ಸಂತೋಷವೋ ಹಂಚಿಕೊಳ್ಳಲಾಗದಿದ್ದಾಗ ಮನಸ್ಸು ತನಗೆ ತಾನೆ ಹೇಳಿಕೊಂಡ ಮಾತುಗಳು ಮಾತ್ರ ಮುತ್ತಿದ್ದಾಗಲೂ ಗುರುತು ಹಾಕಿಕೊಂಡಿದ್ದ ಬರೆಹಗಳಿವು. ಕೆಲವೊಮ್ಮೆ ಭಾವನೆಗಳನ್ನು ಬಂದಿರುವ ಸ್ವಗತಗಳೆಂದರೆ ಹೆಚ್ಚು ಸರಿಯಾದೀತು, ಯಾವುದೇ ಬರಹಕ್ಕೂ ಇವನ್ನು ಈಗ ಸುಮಾರು ನಲವತ್ತು ವರ್ಷಗಳಿಗೂ ಮುಂಚಿನಿಂದಲೂ ಬರೆಯುವ ದಿನಾಂಕವನ್ನು ನಮೂದಿಸಿಲ್ಲವಾಗಿ ಯಾವಾಗ ಗುರುತು ಹಾಕಿದ್ದೆನೆಂಬುದು ಮರೆತು ಹೋಗಿದೆ.

ಸುತ್ತಮುತ್ತಲ ವಾತಾವರಣ, ಪರಿಸ್ಥಿತಿ, ಪ್ರಕೃತಿ, ಜನರ ವರ್ತನೆಗಳು ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಉಂಟುಮಾಡಿ ನಮ್ಮನ್ನು ಪ್ರತಿಕ್ರಿಯಿಸುವಂತೆ ಒತ್ತಾಯಿಸುವುದಂತೂ ಸತ್ಯ. ಪ್ರತಿಕ್ರಿಯಿಸುವುದಕ್ಕಿಂತಲೂ ಹಲವು ಬಾರಿ ಈ ಬಾಹ್ಯ ಪ್ರಚೋದನೆಗಳಿಂದ ನಮ್ಮ ಒಳಗನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು ಎನಿಸುತ್ತದೆ. ಇಲ್ಲಿನ ಕೆಲವು ಬರೆಹಗಳು ಅಂತಹ ಪ್ರಯತ್ನಗಳಾಗಿರಬಹುದು. ಸುತ್ತ ಮುತ್ತಣ ಗಿಡಮರಗಳು ಗಾಳಿಯಲ್ಲಿ ಓಲಾಡಿ ತೊನೆದಾಡಿ ಬಾಗಿ ಬಳುಕಿ ಮತ್ತೆ ದೃಢವಾಗಿ ನಿಲ್ಲುವುದನ್ನು ಕಂಡಾಗಲೆಲ್ಲ ನನಗೆ ಒಂದು ರೀತಿಯ ಸಂತೋಷವುಂಟಾಗುತ್ತದೆ ಹಾಗೂ ಒಂದು ರೀತಿಯ ಅರಿವು ಮೂಡುತ್ತದೆ. ಬೇರನ್ನು ಗಟ್ಟಿಯಾಗಿ ಭೂಮಿಯಲ್ಲಿ ಊರಿರುವ ಬಲಿಷ್ಠ ಮರವೂ ಕೂಡ ತನ್ನ ರೆಂಬೆಕೊಂಬೆಗಳು ಗಾಳಿಗೆ ನರ್ತಿಸಲು ಅನುವು ಮಾಡಿಕೊಡುತ್ತದೆ. ತೆಂಗಿನಗರಿಗಳು ಅದೆಷ್ಟು ಭಾರವೆನಿಸಿದರೂ ಗಾಳಿಗೆ ಓಲಾಡುವುದನ್ನು ಕಂಡಾಗ ಈ ಸ್ಪಂದನ ಗುಣ ಮನುಷ್ಯನಿಗೂ ಬಹಳ ಅಗತ್ಯವೆನಿಸುತ್ತದೆ. ಬೇರು ಕಡಿದುಕೊಂಡು ಕೆಳಕ್ಕೆ ಬೀಳಬಾರದು ಜೊತೆಗೇ ಸುಳಿಗಾಳಿ ಬಿರುಗಾಳಿಗಳಿಗೆ ಸ್ಪಂದಿಸದೇ ಇರಬಾರದು ಎನಿಸುತ್ತದೆ. ಇಂತಹದೊಂದು ಸಮಸ್ಥಿತಿಯನ್ನು ಪಡೆಯಲು ಯತ್ನಿಸುವಾಗ ಮೂಡಿರಬಹುದು ಇಲ್ಲಿಯ ಕೆಲವು ಬರೆಹಗಳು.

ಈ ಬರೆಹಗಳನ್ನು ಯಾರಾದರೂ ಓದುವರೆಂಬ ನಂಬಿಕೆ ನನಗಿರಲಿಲ್ಲ. ಆದರೆ ನನ್ನ ದತ್ತು ಪುತ್ರಿ ಉಮಾಳ ಕಣ್ಣಿಗೆ ಎಲ್ಲಿಯೋ ಪುಸ್ತಕಗಳ ನಡುವೆ ಅಲ್ಲಿ ಸೂರ್ಯಮುಖಿ ಇಲ್ಲಿ ಇದ್ದ ಈ ಬರೆಹಗಳು ಒಮ್ಮೆ ಬಿದ್ದವು, ಅವಳು ಛಲವಾದಿ, ಅಂದುಕೊಂಡಿದ್ದನ್ನು ಮಾಡಿಯೇ ಮುಗಿಸುವ ತಾಳ್ಮೆ ಸಾಹಸಗಳು ಅವಳಿಗಿವೆ. ಅರ್ಧಂಬರ್ಧ ಟೈಪ್ ಆಗಿದ್ದ, ಕೈಬರಹದಲ್ಲಿದ್ದ ಎಲ್ಲವನ್ನೂ ತಾಳ್ಮೆಯಿಂದ ತಾನೇ ಟೈಪ್ ಮಾಡಿ ವಿಂಗಡಣೆ ಮಾಡಿದ್ದಾಳೆ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯರು ಮುಂಬಯಿಯಲ್ಲಿರುವ ಅಪ್ಪಟ ಕನ್ನಡ ಪ್ರೇಮಿ ಅವರ ಕಾರ್ಯಗಳನ್ನು ಕಂಡು ನಾವು ಇಲ್ಲಿನ ಕನ್ನಡಿಗರು ಅಚ್ಚರಿಪಡುತ್ತೇವೆ. ಅವರು ಈ ಬರೆಹಗಳನ್ನು ಬೆಳಕಿಗೆ ತರಲು ಒಪ್ಪಿರುವುದು ನನಗೆ ಅತೀವ ಸಂತೋಷವನ್ನು ನೀಡಿದೆ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದವರು ಉಮಾಳಿಂದಾಗಿ ನನಗೂ ಬಂಧುಗಳಂತಾಗಿದ್ದಾರೆ. ಅಲ್ಲಿರುವ ಪ್ರತಿಯೊಬ್ಬರಿಗೂ ಕನ್ನಡದ, ಕನ್ನಡ ಸಾಹಿತ್ಯದ ಬಗೆಗಿರುವ ಪ್ರೀತಿಯನ್ನು ಕಂಡು ಮೆಚ್ಚುಗೆ ಸಂತೋಷಗಳಾಗುತ್ತವೆ. ಕನ್ನಡ ನಾಡಿನಲ್ಲಿಯೂ ಕಾಣದ ಅಭಿಮಾನವನ್ನು ಕಂಡು ಮನಸ್ಸು ಮೂಕವಾಗುತ್ತದೆ. ಮನಸ್ಸು ಈ ಕೆಳಗಿನಂತೆ ಉಲಿಯುತ್ತಿದೆ:

ಎಲ್ಲಿದೆಲ್ಲಿಯದು ಮುಂಬಯಿಗು ನನಗು ಈ ಬಂಧ ಎಲ್ಲೆದಾಟದವಳೆಡೆಗೆ ಹರಿದ ನುಡಿಯೊಲವ ಛಂದ ಚಿರವಿರಲಿ ಜನುಮ ಜನುಮದಲು ಈ ಸ್ನೇಹಸಂಬಂಧ

ಈ ಬರೆಹಗಳಿಗೆ ಪುಸ್ತಕದ ರೂಪ ಕೊಡಲು ಪ್ರಯತ್ನಿಸುತ್ತಿರುವ ನನ್ನ ಎಲ್ಲಾ ಯುವ ಬಂಧುಗಳಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳು. ಇದಕ್ಕಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ,

- ಎಲ್. ವಿ. ಶಾಂತಕುಮಾರಿ

MORE FEATURES

ಹೊಸನೆಲೆಯಲ್ಲಿ ಕಂಡಿರಿಸಿದ ಕನ್ನಡದ ವಿವೇಕ

30-09-2024 ಬೆಂಗಳೂರು

"ಅಧ್ಯಯನದ ಉದ್ದೇಶ ಮತ್ತು ಮಹತ್ವ ಎಂಬುವ ಮೊದಲ ಅಧ್ಯಾಯದಲ್ಲಿ ಇರುವ ಭಾಷೆಯನ್ನು, ಭಾಷಾ ಸಂಸ್ಕೃತಿಯ ಸಾಂಸ್ಕೃತ...

ದೇಶದಲ್ಲಿ ವಿದ್ಯುತ್ ಇಲಾಖೆಯೊಂದನ್ನು ಹುಟ್ಟುಹಾಕಿದ ಮೊದಲ ಸಂಸ್ಥಾನ ಮೈಸೂರು

30-09-2024 ಬೆಂಗಳೂರು

“ವಿದ್ಯುತ್ ಎಂಬ ವಿಸ್ಮಯದ ಹಿನ್ನೆಲೆಯೇ ಗೊತ್ತಿಲ್ಲದ ಆ ಕಾಲಘಟ್ಟದಲ್ಲಿ ಇಂಥದ್ದೊಂದು ಮಹತ್ಕಾರ್ಯಕ್ಕೆ ಮುಂದಾದ ಆ ತ...

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ದುರ್ಗತಿಯ ಮೇಲೆ ಬೆಳಕು ಚೆಲ್ಲುವ ಕೃತಿಯಿದು

30-09-2024 ಬೆಂಗಳೂರು

"ಈ ಗ್ರಂಥವು ಮಾಧ್ಯಮದಲ್ಲಿ ಮಹಿಳೆ ಎಂಬ ವಿಷಯದ ನೆಪದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಲೈಂಗಿಕ, ಸಾಂಸ್ಕೃತಿಕ ಶೋಷ...