''ಬಡವರ ಮಕ್ಕಳು ಯಾರೂ ಮುಟ್ಟದ ಅಪ್ರಯೋಜಕ ವಸ್ತುಗಳ ಜೊತೆ ಆಟವಾಡುತ್ತಾರೆ. ಅಂತಹ ಬಡ ಗ್ರಾಮೀಣ ಮಕ್ಕಳ ಜೊತೆ ಬೇಂದ್ರೆ ಬೆರತು ಬಾಲ್ಯ ಕಳೆದರು. ಕಸವಾದ ಜೋಳದ ಗರಿ, ರವದಿಯನ್ನು ಊದಿ ಆನಂದಪಟ್ಟರು. ತಿಪ್ಪೆಯಲ್ಲಿ ತಿಂದು ಎಸೆದ ಮಾವಿನ ಓಟೆಯನ್ನು ಹುಡುಕಿ ಅದರಲ್ಲಿ ನಾದ ಹೊಮ್ಮಿಸಿ ಸುಖ ಪಡುತ್ತಿದ್ದರು'' ಎಂಬ ಮಾತುಗಳನ್ನು 2015ರಲ್ಲಿ ಕರ್ನಾಟಕ ಲೋಚನ- ಷಾಣ್ಮಾಸಿಕ ವಿದ್ವತ್ ಪತ್ರಿಕೆಯಲ್ಲಿ ಪ್ರಕಟವಾದ ಜಿ. ಕೃಷ್ಣಪ್ಪ ಅವರ ಲೇಖನ ‘ಬೇಂದ್ರೆ ವ್ಯಕ್ತಿತ್ವ ಮತ್ತು ನವೋದಯ ಕಾವ್ಯ’ ನಿಮ್ಮ ಓದಿಗಾಗಿ...
ಬೇಂದ್ರೆಯವರ ವ್ಯಕ್ತಿತ್ವ ವಿಕಾಸಗೊಂಡಿರುವುದು ಗೆಳೆಯ, ಶಿಕ್ಷಕ, ಕವಿ, ದೇಶಭಕ್ತ ಎಂಬ ಚತುರ್ಮುಖಗಳಲ್ಲಿ. ಅಲ್ಲಿ ಪ್ರಬಲಗೊಂಡ ಕವಿಗೆ ಕಾವ್ಯರಚನೆ ಒಂದು ಯೋಗವಾಗಿತ್ತು. ಅದನ್ನು ಅವರು “ಕಾವ್ಯಯೋಗವೆಂದರೆ ಕವಿಯ ಕರ್ಮಯೋಗ, ಲೋಕಸಂಗ್ರಹದ ಇಚ್ಛೆಯಿಂದ ಜಗತ್ತಿನ ಕಲ್ಯಾಣಕ್ಕಾಗಿ ಕುಶಲತೆಯಿಂದ ಮಾಡಿದ ಕೆಲಸವದು, ಕರ್ಮಕುಶಲತೆಗೆ ಯೋಗವೆಂದು ಹೆಸರು'' ಎ೦ದು ಹೇಳಿದ್ದಾರೆ.
ಬೇಂದ್ರೆ ಸಾಹಿತ್ಯ ಅಧ್ಯಯನ ಮಾಡಬೇಕಾದ ರೀತಿ ಮತ್ತು ಪ್ರಾಮುಖ್ಯತೆ ಕುರಿತು ಶಂಕರ ಮೊಕಾಶಿ ಪುಣೇಕರರು ಹೀಗೆ ಹೇಳಿದ್ದಾರೆ:
ಬೇಂದೆಯವರ ಇತ್ತೀಚಿನ ಕವನಗಳಲ್ಲಿ ಅವರ ಮೊದಲಿನ ಕವಿತೆಯಲ್ಲಿರುವ ಎಲ್ಲ ಗುಣಗಳನ್ನು ಹುಡುಕಿ, ಕೆಲವನ್ನು ಕಾಣದೆ ಅವರು ವೃದ್ಧರಾದರೆಂದೂ ಕಾವ್ಯದ ಮೇಲಿನ ಅವರ ಹಿಡಿತ ಸಡಿಲವಾಯಿತೆಂದೂ ಹೇಳುವ ಮೊದಲು, ನಾವು ಏನನ್ನು ಹುಡುಕಹೋದೆವೆಂಬುದನ್ನು ಆಲೋಚಿಸುವುದು ವಿವೇಕದ ಲಕ್ಷಣ.
ಬೇಂದ್ರೆಯವರ ಸುದೈವವೆಂದರೆ (ಅದು ಕನ್ನಡದ ಸುದೈವವೂ ಹೌದು) ಅವರು ತಮ್ಮ ಇತ್ತೀಚಿನ ಕಾವ್ಯದಲ್ಲಿ ಅರವಿಂದ ತತ್ತ್ವಜ್ಞಾನದ ಮುಖಾಂತರ ವ್ಯಕ್ತಿ ಸಾಮಾನ್ಯತೆಯ ಅನುಭವದತ್ತ ಹಬ್ಬುಗೆಗೊಂಡಿದ್ದಾರೆ. ಕದಾಚಿತ್ ಅವರು ಪ್ರಾಯಿಡನ, ಯುಂಗನ, ಮಾರ್ಕ್ಸ್‌ನ ಮುಖಾಂತರ ಈ ದರ್ಶನದತ್ತ ಹೊರಳಿದ್ದರೆ ಇಷ್ಟೊಂದು ಸೌಮ್ಯವಾದ, ಆಳವಾದ, ಸಹಿಷ್ಣುವಾದ, ಅಶೆಹೀರಿಯವಾದ ಕಾವ್ಯವನ್ನು ಬರೆಯುವದು ಶಕ್ಕವಾಗುತ್ತಿರಲಿಲ್ಲವೆಂಬುದು ಸ ಸ್ಪಷ್ಟ ಪ್ರಾಯಿಡನ ಮುಖಾಂತರ ಹೀಗೆ ಹಬ್ಬಲು ಹೋದ ಆಡೆನ್‌ನಂಥವರು, ಮಾರ್ಕ್ಸ್‌ನ ಮುಖಾಂತರ ಹಬ್ಬಲು ಹೋದ ಸಿ.ಡೇ. ಲ್ಯೂಯಿಸನಂತಹರು ಇಂಗ್ಲಿಷದಲ್ಲಿಯೇ ಪೂರ್ಣ ಯಶಸ್ವಿಯಾಗದೇ ಬೇರೆ ಕಾವ್ಯ ರೀತಿಗಳತ್ತ ಹೊರಳಿದರು. ಅರವಿಂದ ತತ್ತ್ವಜ್ಞಾನವು ಬುದ್ಧಿ-ಭಾವಗಳೆರಡನ್ನೂ ಒಳಗೊಂಡಿದ್ದಲ್ಲದೆ ಕವಿಗೆ ಬೇಕಾಗುವ World-View, a sense of destiny ಇವುಗಳನ್ನು ಆಧುನಿಕ ಪ್ರಜ್ಞೆಯ ಅರಿವಿನಲ್ಲಿಯೇ ಹುಟ್ಟಿಸುತ್ತದೆ.”“ಒಂದು ಪೂರ್ಣ ಆಯುಷ್ಯವನ್ನು ಸಫಲವಾಗಿ ಯಾರ ಕಾವ್ಯದ ಅಭ್ಯಾಸಕ್ಕಾಗಿ ಮೀಸಲಿಡಬಹುದೋ ಅಂಥ ಕನ್ನಡ ಕವಿಗಳಲ್ಲಿ ಶ್ರೀಮಾನ್ ಬೇಂದ್ರೆಯವರು ಅತ್ಯಾಧುನಿಕರು.
“ಒಂದು ಪೂರ್ಣ ಆಯುಷ್ಯವನ್ನು ಸಫಲವಾಗಿ ಯಾರ ಕಾವ್ಯದ ಅಭ್ಯಾಸಕ್ಕಾಗಿ ಮೀಸಲಿಡಬಹುದೋ ಅಂಥ ಕನ್ನಡ ಕವಿಗಳಲ್ಲಿ ಶ್ರೀಮಾನ್ ಬೇಂದ್ರೆಯವರು ಅತ್ಯಾಧುನಿಕರು.”
ಸಮುದಾಯದ ಬಾಲಕನಾಗಿ ಬೆಳೆದ ಬೇಂದ್ರೆ:
ಯಾವುದೇ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದು ಬಾಲ್ಕದಲ್ಲಿ. “ಮೂರು ವರ್ಷದಲ್ಲಿ ಕಲಿತದ್ದು ನೂರು ವರ್ಷದತನಕ' ಎಂಬ ಗಾದೆ ಮಾತಿದೆ. ಬೇಂದ್ರೆಯವರು ಧಾರವಾಡದಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟದರು. ಚಿಕ್ಕಂದಿನಲ್ಲಿಯೇ ಅವರ ತಂದೆ ತೀರಿಹೋಗಿ ಅವರ ಬಾಲ್ಯ ಸ್ತ್ರೀ ಪೋಷಿತವಾದುದಾಗಿತ್ತು. "ದನ್ನು ಅವರು `ನಮ್ಮ ತಾಯಿಗೆ ಅಜ್ಜಿ, ನಮ್ಮ ಅಜ್ಜಿಗೆ ಈಯಿ- ಎರಡು ಹೆಣ್ಣು ಜೀವ ಒಂದನ್ನೊ ೦ದು ಅಂಟಿಕೊಂಡು ನಿಂತ್ ಪುಟ್ಟ' ಕುಟುಂಬ ಎಂದು ಹೇಳಿಕೊಂಡಿದ್ದಾರೆ. ಅವರು ಧಾರವಾಡದ ಜಾನಪದ ಪರಿಸರದಲ್ಲಿ ಎಲ್ಲ ವರ್ಗ ವರ್ಣದ ಬಾಲಕರೊಡನೆ ಒಂದಾಗಿ ಬೆರೆತು ಸಹಜ ಸ್ನೇಹದ ಸವಿಯಲ್ಲಿ ಬಾಲ್ಯವನ್ನು ಕಳೆದವರು. 'ಕೋಣೆ ಮಕ್ಕಳು ಕೊಳತೊ ಬೀದಿಮಕ್ಕಳು ಬೆಳದೊ' ಎಂಬ ನಾಣ್ಣುಡಿಯಂತೆ ಅವರು ಸಮುದಾಯದ ಬಾಲಕನಾಗಿ ಬೆಳೆದರು.
ಬಡವರ ಮಕ್ಕಳು ಯಾರೂ ಮುಟ್ಟದ ಅಪ್ರಯೋಜಕ ವಸ್ತುಗಳ ಜೊತೆ ಆಟವಾಡುತ್ತಾರೆ. ಅಂತಹ ಬಡ ಗ್ರಾಮೀಣ ಮಕ್ಕಳ ಜೊತೆ ಬೇಂದ್ರೆ ಬೆರತು ಬಾಲ್ಕ ಕಳೆದರು. ಕಸವಾದ ಜೋಳದ ಗರಿ, ರವದಿಯನ್ನು ಊದಿ ಆನಂದಪಟ್ಟರು. ತಿಪ್ಪೆಯಲ್ಲಿ ತಿಂದು ಎಸೆದ ಮಾವಿನ ಓಟೆಯನ್ನು ಹುಡುಕಿ ಅದರಲ್ಲಿ ನಾದ ಹೊಮ್ಮಿಸಿ ಸುಖ ಪಡುತ್ತಿದ್ದರು.
ತೆಯ್ದದ್ದೆ ತೆಯ್ದದ್ದು ತುಟಿಗೆರೆ ಬಿಚ್ಚಿರಲು
ಉಸಿರೆ ಆಗುವದಣ್ಣ ಸಾಕಾರವು|
ಯಾವ ತಿಪ್ಪೆಯ ಬಸಿರ ಬಿರಕಿಗೆ ಮೂಡಿತ್ತೊ
ಮಾವಿನ ಪೀಪಿಯ ಆಕಾರವು?
ತಿಪ್ಪೆಯಲ್ಲಿ ಚಿಗುರಿದ ಮಾವನ್ನು ತಂದು, ಚಿಗುರಿದ ಕಡೆ ಹಾಗೆ ಬಿಟ್ಟು, ಬುಡದ ಕಡೆ ಓಟೆಯ ಮೇಲಿನ ಕರಟ ಕಿತ್ತು ಕಲ್ಲಿನ ಮೇಲೆ ತೆಯ್ದರೆ ಅದು ತುಟಿಯಂತೆ ಬಾಯಿ ಬಿಟ್ಟುಕೊಳ್ಳುತ್ತದೆ. ಅದನ್ನು ಊದಿದರೆ ಅದ್ಭುತ ನಾದ ಹೊಮ್ಮುತ್ತದೆ. ಅದು ಅವರ ನಾದಶೋಧದಲ್ಲಿ ಜಾಗೃತಗೊಂಡ ಸೃಜನ ಶಕ್ತಿಯಿರಬಹುದೇನೊ! ಅಂತಹ ನಾದಮಾಧುರ್ಯವನ್ನು ಬಾಲ್ಯದಲ್ಲಿ ಸವಿದ ಬೇಂದ್ರೆಯವರು ನವೋದಯಕಾವ್ಯವನ್ನು `ನಾದಲೀಲೆ'ಯಾಗಿ ರೂಪಿಸಿದರು. ಅವರ ಬಾಲ್ಯ ಕಂಡ ಸತ್ಯದ ವಿಕಸಿತ ರೂಪ ನವೋದಯ ಕಾವ್ಯ. ವ್ಯಕ್ತಿ ಎಲ್ಲ ಕಷ್ಟ ಸುಖಗಳಲ್ಲಿ ಬದುಕನ್ನು ನಾದಿಕೊಂಡು ಹದಗೊಳ್ಳಬೇಕು.
ಹದಾ ಒಳೆಗs ಇಲ್ಲ ತಮ್ಮಾ|
ಪದಾ ಹೊರಗ ಬರೂದಿಲ್ಲಾ
ಕದಾ ತೆರ್ಕೊದಿಲ್ಲಾ ಅಂತಃಕರಣಾ.
"ಬೇಂದ್ರೆ ಕಾವ್ಯದ ಮುಖ್ಯ ಲಕ್ಷಣ ಹದ ಮತ್ತು ಅಂತಃಕರಣ. ಅಂತಃಕರಣದ ಮಿಡಿತದಲ್ಲಿ ಹದಗೊಂಡ ವ್ಯಕ್ತಿ ತಾನೇ ನಾದವಾಗಿ ಹೋಗುವನು ಎಂಬ ಚಿಂತನೆಯನ್ನು ನಾದ ಬೇಕು'' ಕವನದಲ್ಲಿ ಅವರು ನೀಡಿದ್ದಾರೆ.
ನಾದ ಬೇಕು ನಾದ ಬೇಕು
ನಾದಾನ ನಾದ ಬೇಕು
ನಾದಕ್ಕೆ ಪ್ರತಿನಾದ ಬೇಕು
ನಾದಾನsನ ಆದ ಮ್ಯಾಲೆ ಬ್ಯಾರೆ ಯಾಕ ವಾದ ಬೇಕು.
ಹೊರಗಿನ ದೇವರು ಯಾಕ ಬೇಕು?
ಒಳಗಿನ ದೇವನ ಸಾಕ ಬೇಕು
ಜೋಕಿಯೊಳಗ ಹೊಸ ರೋಕ ಬೇಕು
ಸಂತೀ ಮಂದಿನ್ನ ನೂಕಬೇಕು ಅನುರಾಗಕ್ಕ ಷೋಕ ಬೇಕು.
ಅಂತರಂಗದಾ ಶೋಧ ಬೇಕು
ಪರ ಬ್ರಹ್ಮದಾ ಬೋಧ ಬೇಕು
ಎಂದಿಗು ಶ್ರೀಗುರುಪಾದ ಬೇಕು
ನಾದ ಬೇಕು ನಾದ ಬೇಕು ತುದಿಮುಟ್ಟಾನು ನಾದ ಬೇಕು.
"ಬೇಂದ್ರೆಯವರು ತಾವು ಆಡಿದ ಆಟಗಳನ್ನು "ಚಿಣಿ ಫಣಿ, ಚಂಡು, ಬೊಗರೆ,ಗಾಳಿಪಟ, ಆಕಾಶಬುಟ್ಟಿ, ಜಿದ್ದು, ಕಸರತ್ತಿನ ಕೆಲಸ, ಗೋಲಿಗುಂಡು, ತಿಳ್ಳಿ, ಹುಡುತುತ್ತು. ಗಂಗಾಳಮರಗಿ' ಎಂದು ಹೇಳುತ್ತ "ಹೆಣ ಎತ್ತುವ ಮೊದಲು ಬಾರಿಸುವ ಹಲಗೆಯಲ್ಲಿಯೂ ನಮಗೊಂದು ಸಲಿಗೆಯಿತ್ತು”” ಎ೦ದು ಬಾಲ್ಯದ ಮುಕ್ತ ಲಹರಿಯನ್ನು ನೆನದಿದ್ದಾರೆ. ಅದರ ದನಿಯನ್ನು ಕಾವ್ಯದಲ್ಲಿ ಹೀಗೆ ನೀಡಿದ್ದಾರೆ:
“ಸತ್ತರೆ ಸತ್ತಿನೀ' ಇದ್ದವರ ಮೆರವಣಿಗೆ
ಹಲಿಗೆ ಸೊಲ್ಲಿಸುತಿತ್ತು ಕೊನೆಯರಿಣಾ."
ಅವರಿಗೆ ಬಾಲ್ಯದಲ್ಲಿ ಬ್ರಾಹ್ಮಣ ಹೆಣಗಳಿಗಿ೦ತ ಮುಸಲ್ಮಾನರ ಹೆಣದ ಮೆರವಣಿಗೆ ಬಗ್ಗೆ ತುಂಬಾ ಆಸಕ್ತಿಯಿತ್ತು.
ಜಾನಪದ ಪ್ರಭಾವ:
ಬೇಂದ್ರೆಯವರು ಧಾರವಾಡದವರಾಗಿ ಸರಳ ನಿರಾಡಂಬರ ಜೀವನ ನಡೆಸಿ, ಗ್ರಾಮೀಣರಂತೆ ಸಾಧಾರಣ ಉಡುಪು ಧರಿಸಿ ಜಾನಪದ ವ್ಯಕ್ತಿತ್ವವನ್ನು ಹೊಂದಿದ್ದರು.
ಪೂನಾದ ಫರ್ಗುಸನ್ ಕಾಲೇಜಿನಿಂದ ಬಿ.ಎ ಪಾಸು ಮಾಡಿದ್ದ ಬೇಂದ್ರೆಯವರು ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆ ಪ್ರಭಾವಗಳಿಗೆ ಒಳಗಾಗಿ ಅಲ್ಲಿನ ಆಲೋಚನಾ ರೀತಿಗಳನ್ನು ಅರಗಿಸಿಕೊಂಡಿದ್ದರು. ಅದನ್ನು ಅಭಿವ್ಯಕ್ತಿಸುವಾಗ ಅದು ಪೂರ್ತಿ ಈ ನೆಲದಿಂದ ಹೊಮ್ಮಿದ್ದು ಎಂಬಂತೆ ಸೃಷ್ಟಿಸಿದರು. ನವೋದಯದ ಪ್ರಮುಖ ಮಾರ್ಗ (Classic) ಕವಿಯಾದರು. “ಸ್ಕಾಟ್, ಬರ್ನ್ಸ್, ವರ್ಡ್ಸ್‌ವರ್ತ್ ಮೊದಲಾದ ಆಂಗ್ಲ ಕವಿಗಳ ಕಾವ್ಯಗಳಲ್ಲಿ ನಾಡಹಾಡುಗಳ, ಜನಪದ ಗೀತಗಳ ಸಂಸ್ಕಾರವನ್ನು ಕಾಣಬಹುದು. ಅದರಿಂದ ಅವರ ಕಾವ್ಯದಲ್ಲಿ ಒಂದು ಬಗೆಯಾದ ನಾವೀನ್ಯ ಉ೦ಟಾಯಿತು. ನಮ್ಮ ಈಗಿನ ಕನ್ನಡ ಸಾಹಿತ್ಯಕ್ಕೆ ಆ ಸಂಸ್ಕಾರವು ಅವಶ್ಯವಿದೆ.” ಎಂಬ ಅರಿವಿನಲ್ಲಿ ಜನಪದವನ್ನು ಶಿಷ್ಠ ಕಾವ್ಯಕ್ಕೆ ಕಸಿಗೊಳಿಸಿದರು.
ಬೇಂದ್ರೆಯವರ ಪ್ರಥಮ ಪ್ರಕಟಿತ ಕವನಗಳು `ತುತ್ತೂರಿ' ಮತ್ತು "ಸರಸ್ವತಿ'. ಅವು "ಪ್ರಭಾತ' ಪತ್ರಿಕೆಯ 1918 ಆಗಸ್ಟ್‌ನ ಪ್ರಥಮ ಸಂಚಿಕೆಯಲ್ಲಿ "ಅಂಬಿಕಾತನಯದತ್ತ ಕಾವ್ಯನಾಮದಿಂದ ಪ್ರಕಟವಾದವು. 'ತುತ್ತೂರಿ' ನವೋದಯ ಸಾಹಿತ್ಯದ ಅರುಣೋದಯವನ್ನು ಸೂಚಿಸುತ್ತ ಸ್ವಾತಂತ್ರ್ಯೋದಯದ ಸುಳಿವನ್ನು ನೀಡುವ ಕವನವಾಗಿದೆ.
ಸಾಂಸ್ಕೃತಿಕ ಹಿನ್ನೆಲೆ ಹಾಗೂ ರಾಷ್ಟ್ರಾಭಿಮಾನ:
ಬೇಂದ್ರೆಯವರು ಹುಟ್ಟಿ ಬೆಳೆದ ಕಾಮನಕಟ್ಟೆ ಅಂದಿಗೆ ಧಾರವಾಡದ ಕೇಂದ್ರ ಸ್ಥಾನವಾಗಿತ್ತು. ಅಲ್ಲಿ ನಡೆಯುತ್ತಿದ್ದ ದೊಡ್ಡಾಟ, ಬಯಲಾಟ, ಕಾಮನಹಬ್ಬ, ಅಲಾಬಿಯ ಮೆರವಣಿಗೆ, ಪುರವ೦ತರ ಮೇಳ, ಹೆಜ್ಜೆ ಮೇಳ, ಹಬ್ಬ ಹರಿದಿನ ಅವರನ್ನು ಜಾನಪದ ಸಂಸ್ಕೃತಿ ಭಾಗವಾಗಿ ಬೆಳೆಸಿತು. ಕಾಮನಕಟ್ಟೆಯಲ್ಲಿ ಸಾಹಿತ್ಯಕ, ರಾಷ್ಟ್ರೀಯ ಮತ್ತು ಸಾಂಸ್ಕೃ ತಿಕ ಚಿಂತನೆಯನ್ನು ಹೊತ್ತ ಶಾಂತಕವಿ, ಕಾವ್ಯಾನಂದ (ನರಸಿಂಜಾಚಾರ್ಯಣೇಕ, ವೆಂಕಟರಂಗೋಕಟ್ಟ ಗಂಗಸಿದ್ದ ಗಂಗಪ್ಪ ಸೋಂಡಿಲಕ್ಷಾಧೀಶ, ರಾವಸಾಹೇಬ ಜತ] ನಾ. ಶ್ರೀ. ರಾಜಪುರೋಹಿತ; ಕಡಪಾ ರಾಘವೇಂದ್ರರಾವ್ ಮುಂತಾದವರು ವಾಸಿಸುತ್ತಿದ್ದರು. ಅದು ಆಲೂರು ವೆಂಕಟರಾಯರ ರಾಷ್ಟ್ರೀಯ ಚಳವಳಿಯ ಕೇಂದ್ರವಾಗಿತ್ತು. ಆಲೂರರು ಸ್ಥಾಪಿಸಿದ "ಕರ್ನಾಟಕ ನೂತನ ರಾಷ್ಟ್ರೀಯ ವಿದ್ಯಾಲಯ” ಬೇಂದ್ರೆಯವರ ಮನೆಯ ಎದುರಿನಲ್ಲಿತ್ತು “ಈ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥೆಗೆ ಅತಿರಥಿ ಮಹಾರಧಿಗಳಾದ ರಾಷ್ಟ್ರೀಯ ಮುಖಂಡರು ಮೇಲಿಂದ ಮೀಲೆ ಭೇಟಿಯನ್ನು ಕೊಡುತ್ತಿದ್ದರು. ಈ ಉಜ್ವಲವಾದ ರಾಷ್ಟ್ರೀಯ ವಾತಾವರಣವು. ಬಾಲಕರಾದ ಬೇಂದ್ರೆಯವರ ಕೋಮಲವಾದ ಅಂತಃ ಕರಣಿದ ಮೇಲೆ ಸಂಸ್ಕಾರವನ್ನುಂಟು ಮಾಡದೆ ಬಿಡಲಿಲ್ಲ'?* ಎಂದು ಅವರ ಶಿಕ್ಷಕರಾದ ನಾ.ಶ್ರೀ. ರಾಜಪುರೋಹಿತರು ತಿಳಿಸಿದ್ದಾರೆ.
ಬೇಂದ್ರೆಯವರು "ಅಲೌಕಿಕ' ಕವನದಲ್ಲಿ ರೂಪಕವಾಗಿ ಬಳಸಿರುವ ಪದ “ಮದಗ'ವು ಕುವೆಂಪು ಅವರ ನುಡಿಗೆ ಸಾಕ್ಷಿಯಂತಿದೆ;
ನನ್ನ ಪಂಕದಲ್ಲಿ ಹುಟ್ಟಿ ಲೇಪವಿಲ್ಲದಿರುವೆ,
ನನ್ನ ಪಂಕಜವೆ|
ನನ್ನ ನೀರಲ್ಲಿ ಬೆಳೆದು ನೀರಾಳದಲ್ಲಿರುವೆ,
ನನ್ನ ನೀರಜವೆ!
ಒಡೆಯಲು ಬಾರದ ಒಡಪಿನಂತಿರುವೆ,
ಬಿಡಿಸಲು ಬಾರದ ತೊಡಕಿನಂತಿರುವೆ.
ನನ್ನ ಮಾನಸದ ಮದಗವೆ
ಮುಳುಗಿ ನೋಡಿದೆ, ಮುದ್ದಿಸಿ ನೋಡಿದೆ,
ಮೂಸಿ ನೋಡಿದೆ,
ಮುಟ್ಟಿ ನೋಡಿದೆ, ದಿಟ್ಟಿಸಿ ನೋಡಿದೆ,
ನಿನ್ನಳವು ಅಸದಳವು. (ಅಲೌಕಿಕ : ಉಯ್ಯಾಲೆ)
"ಇಲ್ಲಿ ಜಾತಿ, ಧರ್ಮ ಯಾರನ್ನೂ ದೊಡ್ಡವರು, ಚಿಕ್ಕವರನ್ನಾಗಿ ಮಾಡಿಲ್ಲ. ತಮ್ಮ ಮತ ತಮಗೆ ಹಾಕುವ ಕಟ್ಟುಪಾಡುಗಳಿದ್ದಾಗ...
“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದ...
“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...
©2025 Book Brahma Private Limited.