ಎಲ್ಲರೂ ಓದಬೇಕಾದ ಒಂದು ವಿಶಿಷ್ಟ ಕಿರು ಕಾದಂಬರಿ ಇದು


‘ಈ ಕಥೆಯಲ್ಲಿ ಪ್ರಸ್ತಾಪ ಆಗುವ ನಿಜಾಮನ ಬಳಿ ಇದ್ದ ಅಪಾರವಾದ ಸಂಪತ್ತು, ನಿಧಿಯ ಹುಡುಕಾಟ, ತುಂಬಾ ಕುತೂಹಲಕಾರಿಯಾದ ನಿರೂಪಣೆ ಇದೆ’ ಎನ್ನುತ್ತಾರೆ ನಿರಂಜನ್ ರಾಜ್ ಅರಸ್. ಅವರು ಡಾ. ಕೆ.ಎನ್. ಗಣೇಶಯ್ಯ ಅವರ ‘ಏಳು ರೊಟ್ಟಿಗಳು’ ಕಾದಂಬರಿ ಕುರಿತು ಬರೆದ ವಿಮರ್ಶೆ ಇಲ್ಲಿದೆ.

"ಏಳು ರೊಟ್ಟಿಗಳು" ಪುಸ್ತಕದ ಹೆಸರು ಓದಿದಾಗ ತುಂಬಾ ವಿಶೇಷ ಅನಿಸಿತು... ಡಾ. ಕೆ. ಎನ್. ಗಣೇಶಯ್ಯ ಅವರು ಬರೆದಿರುವ "ಏಳು ರೊಟ್ಟಿಗಳು" ಏನಿರಬಹುದೆಂದು ಕುತೂಹಲದಿಂದ ಓದಿದೆ. ಇದೊಂದು ಕಿರು ಕಾದಂಬರಿ. ಒಂದೇ ದಿನದಲ್ಲಿ ಓದಿ ಮುಗಿಸಿದೆ! ಟಿಪಿಕಲ್ ಗಣೇಶಯ್ಯ ಅವರ ಬರವಣಿಗೆ . ನಮ್ಮನ್ನು ಗೋದಾವರಿ ನದಿಯ ಕಡೆಗೆ, ನಿಜಾಮರ ಬಗ್ಗೆ ,ಇನ್ನೂ ಅನೇಕ ವಿಷಯಗಳ ಒಳಗೊಂಡ ಕಥೆ ರೋಚಕವಾಗಿದೆ . ಇಲ್ಲಿ ಬರುವ ಸರಳ, ವಿನಯ್, ಸಿದ್ದಿ, ಅಜ್ಜಿ, ಕಲ್ಯಾಣ್ ಇನ್ನೂ ಅನೇಕ ಪಾತ್ರಗಳು ನಮ್ಮ ಕಣ್ಣ ಮುಂದೆಯೇ ಬಂದರೇನೋ ಅನ್ನುವ ಮಟ್ಟಿಗೆ ಕಥೆ ನಮ್ಮನ್ನು ಸೆಳೆದುಕೊಂಡು ಹೋಗುತ್ತದೆ .

ಈ ಕಥೆಯಲ್ಲಿ ಪ್ರಸ್ತಾಪ ಆಗುವ ನಿಜಾಮನ ಬಳಿ ಇದ್ದ ಅಪಾರವಾದ ಸಂಪತ್ತು, ನಿಧಿಯ ಹುಡುಕಾಟ, ತುಂಬಾ ಕುತೂಹಲಕಾರಿಯಾದ ನಿರೂಪಣೆ ಇದೆ.. ಹೇಗೆ ಫಕೀರ ಕೊಟ್ಟ ಏಳು ರೊಟ್ಟಿಗಳಿಂದ ನಿಜಾಮರ ಲಾಂಚನ ಹುಟ್ಟಿದ ಘಳಿಗೆ, ಸಮಗ್ರ ಭಾರತದ ನಿರ್ಮಾಣಕ್ಕೆ ಸ್ವತಂತ್ರ ಭಾರತಕ್ಕೆ ಎದುರಾದ ಸಮಸ್ಯೆಗಳು ಹೀಗೆ ಅನೇಕ ಸಂಗತಿಗಳು ಕಣ್ಣಿಗೆ ಕಟ್ಟುವ ರೀತಿ ಹೆಣೆದಿದ್ದಾರೆ.

ಓದುತ್ತಾ ಹೋದಂತೆ ಇಷ್ಟು ಬೇಗ ಮುಗಿಯಿತು ಎಂದು ಅನಿಸಿತು.. ಗಣೇಶಯ್ಯ ಅವರು ನಡೆಸುವ ಅಧ್ಯಯನ, ಕಥೆಗೆ ಪೂರಕವಾಗಿ ತರುವ ಹಲವು ವಿಷಯಗಳು, ನಿರೂಪಣಾ ಶೈಲಿ, ನಮ್ಮನ್ನು ಅತ್ತ ಇತ್ತ ಕದಲದಂತೆ ವಿಸ್ಮಯ ಮೂಡಿಸುವ ವಿಚಾರಗಳು , ನಾವು ಯೋಚಿಸದ ಅನೇಕ ವಿಷಯಗಳು ಹೀಗೆ ಅನೇಕ ವೈಶಿಷ್ಟ್ಯಗಳಿಂದ ಅವರ ಪುಸ್ತಕಗಳು ಕೂಡಿರುತ್ತದೆ..

ಒಟ್ಟಿನಲ್ಲಿ ಎಲ್ಲರೂ ಓದಬೇಕಾದ ಒಂದು ವಿಶಿಷ್ಟ ಕಿರು ಕಾದಂಬರಿ ಇದು.. ಇಲ್ಲಿರುವ ವಿಷಯಗಳ ಬಗ್ಗೆ ಓದುತ್ತಾ ಹೋದಂತೆ ಒಂದು ಬೃಹತ್ ಕಾದಂಬರಿ ಆಗುತ್ತಿತ್ತು ಎಂದು ನನ್ನ ಅನಿಸಿಕೆ . "ಏಳು ರೊಟ್ಟಿಗಳು " ನಾನು ಓದಿದ ಗಣೇಶಯ್ಯ ಅವರ 12ನೆಯ ಪುಸ್ತಕ ಹೀಗೆಯೇ ಸುದೀರ್ಘವಾಗಿ ನಿಮ್ಮ ಪುಸ್ತಕಗಳು ನಿಮ್ಮಿಂದ ಬರಲಿ. ಓದಲು ನಾನಂತೂ ಎಂದಿಗೂ ಕಾಯುತ್ತಿರುತ್ತೇನೆ.

- ನಿರಂಜನ್ ರಾಜ್ ಅರಸ್

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...