ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್


‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ’ ಎನ್ನುತ್ತಾರೆ ಡಾ. ಉಪೇಂದ್ರ ಕೆ ಆರ್. ಅವರು ಮೌನೇಶ್ ಬಡಿಗೇರ ಅವರ ‘ಜೀವ ಜಗತ್ತು’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ನಾವು ಕಥೆಯನ್ನೋ ಅಥವಾ ಕಾದಂಬರಿಯನ್ನೋ ಯಾಕೆ ಓದಬೇಕು? ಎಂದು ಕೇಳಿಕೊಂಡರೆ ತಕ್ಷಣ ಬರುವ ಉತ್ತರ- ʻಅದು ನಮ್ಮ ಜೀವನದ ಅನುಭವವನ್ನು ಬೇರೆ ರೀತಿಯಾಗಿ ನೋಡುವುದಕ್ಕೆ ಅನುವು ಮಾಡಿಕೊಡುತ್ತದೆʼ ಎಂಬುದು ಅಲ್ಲವೇ?

ಆದರೆ ಮೌನೇಶ್‌ ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಪ್ರಸ್ತುತ ಕಾಲದ ಬದಲಾದ ಓದುಗರ ಓದಿನ ಲಯ (tempo) ಹಾಗೂ ರೂಪಕ ಸೂಕ್ಷ್ಮತೆಯನ್ನು (visual sensibility) ಬಹಳ ಸಶಕ್ತವಾಗಿ ಹಿಡಿದಿರುವ ಮೌನೇಶ್ ಈ ಕಾದಂಬರಿಯನ್ನು ನಾವು ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತಾರೆ!

ನಾವು ಊಹಿಸಲಿಕ್ಕೆ ಸಾಧ್ಯವೇ ಆಗದ ಸ್ಥಿತಿ-ಗತಿಗಳಲ್ಲಿ ಈ ಕಾದಂಬರಿಯ ಮುಖ್ಯ ಪಾತ್ರಗಳು ಏನೆಲ್ಲಾ ರೂಪವನ್ನು ತಾಳುತ್ತವೆ, ಕಾಲ ಹಾಗೂ ಅವಕಾಶದ ಹೊಡೆತಕ್ಕೆ ಸಿಲುಕಿ ಏನೇನೆಲ್ಲಾ ಅನುಭವಿಸುತ್ತವೆ ಎಂಬುದನ್ನು ನಾವು ಓದುತ್ತ ಹೋಗುವಾಗ ನಮಗೆ ಒಂದು ಬಗೆಯ ವಿಸ್ಮಯದ ಭಾವ ಆವರಿಸಿಕೊಂಡುಬಿಡುತ್ತದೆ.

ಈ ಕಾದಂಬರಿ ಏಕಕಾಲಕ್ಕೆ ನಮ್ಮ ಈ ನಿಜಜೀವನದ logic ಅನ್ನು ಮತ್ತು ಅದು ಸೃಷ್ಟಿಸಿರುವ Fictional Narrative ಲೋಕದ logic ಅನ್ನು ಒಟ್ಟೊಟ್ಟಿಗೆ ನೋಡುವ ಒಂದು ಹೊಸ ಅವಕಾಶವನ್ನು ಮಾಡಿಕೊಡುತ್ತದೆ ಮತ್ತು ಆ ಮೂಲಕ ಒಂದು ಹೊಸದಾದ ಹಾಗೂ ಬಹಳ ಘನವಾದ Magic ಲೋಕವನ್ನೇ ಅದು ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸಿಬಿಡುತ್ತದೆ!

-ಡಾ. ಉಪೇಂದ್ರ ಕೆ ಆರ್

MORE FEATURES

ನಾವು ಬದುಕುತ್ತಿರುವ ಪರಿಸರವೇ ಕುಂ.ವೀ ಅವರ ಬರವಣಿಗೆಯ ಶಕ್ತಿಯಾಗಿದೆ

16-09-2024 ಬೆಂಗಳೂರು

“ಕುಂ.ವೀರಭದ್ರಪ್ಪ ಅವರ ಸೃಷ್ಟಿ ಪ್ರತಿಭಟನಾತ್ಮಕ ಸಾಹಿತ್ಯವಾಗಿ ಸಹಜ ಬಂಡಾಯದ ಧ್ವನಿಯಾಗಿದೆ. ಎಪ್ಪತ್ತೊಂದು ವರ್ಷದ...

ಮೊಸಳೆ ಸೆರೆ ಹಿಡಿದ ಪ್ರಸಂಗ

16-09-2024 ಬೆಂಗಳೂರು

"ನನ್ನ ಗಸ್ತಿಗೆ ಬಂದ ಹೊಸತರಲ್ಲಿ ವಾಚರುಗಳಿಬ್ಬರು ನನ್ಮುಂದೆ "ಈ ಗಸ್ತಿನ ವ್ಯಾಪ್ತಿಯಲ್ಲಿ ಮೊಸಳೆ ಕಾಟ ಜಾಸ್ತ...

ಕನ್ನಡ ಕಾದಂಬರಿ ಲೋಕದ ಅಗ್ರಮಾನ್ಯ ಪ್ರಯತ್ನಗಳಲ್ಲೊಂದು `ಚೆನ್ನಭೈರಾದೇವಿ'

16-09-2024 ಬೆಂಗಳೂರು

"ಈ ಕಾದಂಬರಿಯಲ್ಲಿ ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಸಾಲು "ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಧ...