ಭಾರತದಲ್ಲಿ ನಕ್ಸಲ್ ಮತ್ತು ಕಮ್ಯುನಿಸ್ಟರ ಕ್ರಾಂತಿಯಾಗಿ ಸಾಗಿದ ಕಥೆಯನ್ನು ಈ ಪುಸ್ತಕ ಹೇಳುತ್ತೆ


“ನಕ್ಸಲರು ಅಂದ್ರೆ ಯಾರು, ನಕ್ಸಲಿಸಂ ಶುರುವಾಗಿದ್ದು ಹೇಗೆ, ಶುರುಮಾಡಿದ್ದು ಯಾರು, ಮುಂದೆ ಕಮ್ಯುನಿಸ್ಟರ ಗುಂಪು ನೂರಾರು ಬಣಗಳಾಗಿ ಚೆದುರಿದ್ದು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಪಶ್ಚಿಮದಲ್ಲಿ ನಡೆದ ಹೋರಾಟ, ಸಾವು ನೋವು, ದಂಗೆ ಮುಂತಾದವುಗಳ ಮಾಹಿತಿಯನ್ನ ಈ ಪುಸ್ತಕದಲ್ಲಿ ಹೇಳ್ತಾ ಹೋಗಿದ್ದಾರೆ,” ಎನ್ನುತ್ತಾರೆ ಪ್ರಸಾದ್. ಅವರು ಡಾ. ಎನ್. ಜಗದೀಶ್ ಕೊಪ್ಪ ಅವರ ‘ಎಂದೂ ಮುಗಿಯದ ಯುದ್ಧ’ ಕೃತಿ ಕುರಿತು ಬರೆದ ವಿಮರ್ಶೆ ಇಲ್ಲಿದೆ.

ಕೃತಿ: ಎಂದೂ ಮುಗಿಯದ ಯುದ್ಧ
ಲೇಖಕ: ಡಾ. ಎನ್. ಜಗದೀಶ್ ಕೊಪ್ಪ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಪುಸ್ತಕ
ವರ್ಷ: 2019
ಪ್ರಕಾಶನ: ಸಪ್ನ ಬುಕ್ ಹೌಸ್

ಇಲ್ಲಿ ಸೇರಿದೋರು ಬರೀ ಅನ್ನ ನೀರಿಗೂ ಗತಿ ಇಲ್ಲದವರಲ್ಲ. ಐಪಿಎಸ್ ಮತ್ತು ಐಎಎಸ್ ಅಂತಹ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸರಕಾರಿ ಸಂಬಳ ತಗೊಳ್ಳೋ ಮಕ್ಕಳೂ ಸೇರಿಸಿ, ಜಮೀನ್ದಾರ್ರು, ಬ್ರಿಟಿಷರು, ಕೃಷಿ ಭೂಮಿ ಮಾಲೀಕರು, ಹೈದರಾಬಾದ ನಿಜಾಮ ಹೀಗೆ ಸಿಕ್ಕಾಪಟ್ಟೆ ದುಡ್ಡು ಮಾಡಿರೋ ಇಲ್ಲ ಸಿಕ್ಕಾಪಟ್ಟೆ ಜಾಗ ಇಟ್ಕೊಂಡು ಬಳಸಿಕೊಳ್ಳುತ್ತಿದ್ದ ರೈತರು, ಕೃಷಿ ಕಾರ್ಮಿಕರು, ಕೂಲಿ ಕೆಲಸಗಾರರು, ಆದಿವಾಸಿಗಳೂ ಸೇರಿ ವರ್ಗಭೇದ, ಅಸಮಾನತೆ ಅಂತಹ ಸಮಸ್ಯೆಗಳ ವಿರುದ್ಧ ಸಿಡಿದೆದ್ದ ಜನರ ಗುಂಪು ಶುರುಮಾಡಿದ ಹೋರಾಟದ ಆದಿ ಅವನತಿ ಮತ್ತು ಈಗ ಪ್ರಸ್ತುತಿ ಸಂದರ್ಭಗಳನ್ನು ಈ ಪುಸ್ತಕ ತಿಳಿಸುತ್ತೆ.

ಬೇರೆ ಬೇರೆ ದೇಶಗಳಲ್ಲಿ ಕ್ರಾಂತಿ ಮಾಡಿದ ಪುಣ್ಯಾತ್ಮರ ವಿಚಾರಧಾರೆಗಳನ್ನು ಇಟ್ಟುಕೊಂಡು ಅದೇ ತರಹ ಇಲ್ಲಿಯೂ ಕ್ರಾಂತಿ ಮಾಡಬೇಕೆಂದು ಮುನ್ನಡೆದ ದೂರದೃಷ್ಟಿ ಇಲ್ಲದ ನಾಯಕರು ಸೇರಿ ನಡೆಸಿದ ಹೋರಾಟ ಮುಂದೆ ಭಾರತದಲ್ಲಿ ನಕ್ಸಲ್ ಮತ್ತು ಕಮ್ಯುನಿಸಸ್ಟರ ಕ್ರಾಂತಿಯಾಗಿ ಸಾಗಿದ ಕಥೆಯನ್ನು ಈ ಪುಸ್ತಕ ಹೇಳುತ್ತೆ.

ನಕ್ಸಲರು ಅಂದ್ರೆ ಯಾರು, ನಕ್ಸಲಿಸಂ ಶುರುವಾಗಿದ್ದು ಹೇಗೆ, ಶುರುಮಾಡಿದ್ದು ಯಾರು, ಮುಂದೆ ಕಮ್ಯುನಿಸ್ಟರ ಗುಂಪು ನೂರಾರು ಬಣಗಳಾಗಿ ಚೆದುರಿದ್ದು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಪಶ್ಚಿಮದಲ್ಲಿ ನಡೆದ ಹೋರಾಟ, ಸಾವು ನೋವು, ದಂಗೆ ಮುಂತಾದವುಗಳ ಮಾಹಿತಿಯನ್ನ ಈ ಪುಸ್ತಕದಲ್ಲಿ ಹೇಳ್ತಾ ಹೋಗಿದ್ದಾರೆ. ಹಾಗೆಯೂ ನಕ್ಸಲರ ದಂಗೆಯಲ್ಲಿ ಕರ್ನಾಟಕ ಮತ್ತು ಕರ್ನಾಟಕದ ಪಾತ್ರಗಳನ್ನು ಸಹ ಈ ಪುಸ್ತಕದ ಕೆಲ ಅಧ್ಯಾಯಗಳಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ಹೇಳಬೇಕು ಅಂದ್ರೆ ನಕ್ಸಲಿಸಂ ಹುಟ್ಟಿದ್ಹೇಗೆ, ಆಮೇಲೆ ಏನಾಯ್ತು, ಮುಂದೆ ಹೇಗೆ ಸತ್ತು, ಅಲ್ಲಿ ನಡೆದ ಒಳ ಸಂಘರ್ಷಗಳು ಏನು? ಕ್ರಾಂತಿಯ ಮೂಲಭೂತ ವಿಚಾರಗಳಿಂದ ದೂರ ಹೋಗಿ ಶಸ್ತ್ರಾಸ್ತ್ರಗಳನ್ನು ಹಿಡಿದು ಹೋರಾಡುವುದೇ ಕ್ರಾಂತಿ ಎಂದು ಯುವಕರಲ್ಲಿ ಹಬ್ಬಿದ್ದು ಮುಂತಾದವುಗಳನ್ನೆಲ್ಲ ತಿಳಿಸುತ್ತಾ, ಎಲ್ಲೆಲ್ಲಿ ಏನೇನು ಕ್ರಾಂತಿಯ ಹೆಸರಲ್ಲಿ ಹೋರಾಟ ಆಯ್ತು, ರೆಡ್ ಲೈನ್ ಅಲ್ಲಿ ಜನರ ಸರ್ಕಾರ ಹೇಗೆ ಬಂತು, ಸ್ವಾತಂತ್ರ್ಯ ಸಿಗೋಕು ಮುಂಚೆಯೇ ನಕ್ಸಲಿಸಂಗೆ ಮುನ್ನುಡಿ ಬರೆದ ಘಟನೆಗಳು, ಸರಕಾರದ ಪಾತ್ರ, ಪೊಲೀಸ್ ಕಾರ್ಯಾಚರಣೆ ಮುಂತಾದವನಲ್ಲ ಹೇಳ್ತಾ ಹೋಗ್ತಾರೆ.

- ಪ್ರಸಾದ್

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...