ಎಲ್ಲಾ ಆಯಾಮಗಳಲ್ಲಿ ಸೈ ಎನಿಸಿಕೊಂಡು ಗೆದ್ದಿದ್ದಾರೆ


“ಇಂತಹ ಹಾರರ್ ಕಥೆಯನ್ನು ಬೆಳೆಸಲು ಅವರ ನಿರೂಪಣೆಯ ಭಾಷೆ ಈ ಕಾದಂಬರಿಗೆ ಒಂದು ಘನತೆಯನ್ನು ತಂದು ಕೊಟ್ಟಿದೆ. ಅದೇ ಈ ಕೃತಿಯ ಶಕ್ತಿ. ಕಾದಂಬರಿಯ ಕ್ಲೈಮ್ಯಾಕ್ಸ್ ಅಂತೂ ಓದುಗರನ್ನು ಉಸಿರು ಬಿಗಿ ಹಿಡಿದು ಓದಿಸುವಂತೆ ಮಾಡುತ್ತದೆ,” ಎನ್ನುತ್ತಾರೆ ವಿವೇಕಾನಂದ ಕಾಮತ್‌ ಅವರು ಗುರುರಾಜ ಕೊಡ್ಕಣಿ ಅವರ “ಅತಿಮಾನುಷ” ಕೃತಿ ಕುರಿತು ಬರೆದ ವಿಮರ್ಶೆ.

ಸಾಮಾನ್ಯವಾಗಿ ಹಾರರ್ ವಸ್ತುಗಳು ನಾಲ್ಕೈದು ವಾಕ್ಯಗಳ ನ್ಯಾನೋ ಕಥೆಯಾಗಿಯೋ, ಅದಕ್ಕಿಂತ ಹಿರಿದು ಕಥೆಯಾಗಿಯೋ ಬರೆದು ಸಫಲವಾಗಬಹುದು. ಆದರೆ ಒಂದು ಕಾದಂಬರಿಯಾಗಿ, ಅದೂ 38 ಕಂತುಗಳಲ್ಲಿ ಹಿಡಿದಿಡುವುದು, ಪ್ರತಿ ಕಂತಿನ ಕೊನೆಯಲ್ಲಿ ಕುತೂಹಲ ಘಟ್ಟದಲ್ಲಿ ನಿಲ್ಲಿಸುವುದು, ಎಲ್ಲೂ ಸಪ್ಪೆಯೆನಿಸದೇ ಕಥೆಯನ್ನು ನಿರೂಪಿಸುವುದು, ರೋಚಕತೆಯನ್ನು ಬೆಳೆಸುತ್ತಾ ಹೋಗುವುದು ಹಾರರ್ ಕತೆಗಳಲ್ಲಿ ದೊಡ್ಡ ಸವಾಲು.

ಕನ್ನಡದಲ್ಲಿ ಇಂಥ ಪ್ರಕಾರಗಳಲ್ಲಿ ಈ ರೀತಿ ಬರೆದು ಗೆದ್ದವರು ವಿರಳ. ಗುರುರಾಜ ಕೊಡ್ಕಣಿ ಅವರ ಅತಿಮಾನುಷ ಕಾದಂಬರಿಯಲ್ಲಿ ಈ ಎಲ್ಲಾ ಆಯಾಮಗಳಲ್ಲಿ ಸೈ ಎನಿಸಿಕೊಂಡು ಗೆದ್ದಿದ್ದಾರೆ. ಅತಿಮಾನುಷ ಕಾದಂಬರಿಯ ಓದು ನಿಜಕ್ಕೂ ಖುಷಿ ನೀಡಿತು.

ಕಾದಂಬರಿಯ ಉತ್ತರಾರ್ಧವಂತೂ ಪುಸ್ತಕವನ್ನು ಕೆಳಗಿಡಲಾಗದಂತೆ , ಊಹಿಸಲಾಗದ ತಿರುವುಗಳ ಮೂಲಕ ಓದಿಸಿಕೊಂಡು ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಮೆಚ್ಚುಗೆಯಾದ ಅಂಶವೆಂದರೆ ಕೋಡ್ಕಣಿಯವರ ಭಾಷೆಯ ಮೇಲಿನ ಹಿಡಿತ. ಇಂತಹ ಹಾರರ್ ಕಥೆಯನ್ನು ಬೆಳೆಸಲು ಅವರ ನಿರೂಪಣೆಯ ಭಾಷೆ ಈ ಕಾದಂಬರಿಗೆ ಒಂದು ಘನತೆಯನ್ನು ತಂದು ಕೊಟ್ಟಿದೆ. ಅದೇ ಈ ಕೃತಿಯ ಶಕ್ತಿ. ಕಾದಂಬರಿಯ ಕ್ಲೈಮ್ಯಾಕ್ಸ್ ಅಂತೂ ಓದುಗರನ್ನು ಉಸಿರು ಬಿಗಿ ಹಿಡಿದು ಓದಿಸುವಂತೆ ಮಾಡುತ್ತದೆ. ಅದನ್ನು ಓದಿಯೇ ಅನುಭವಿಸಬೇಕು.

MORE FEATURES

ಅಕ್ಕಿಯಿದ್ದಲ್ಲಿ ಹಕ್ಕಿಗಳು ಬರುತ್ತವೆ...

11-04-2025 ಬೆಂಗಳೂರು

"ಬಹು ಆಯಾಮದ ವ್ಯಕ್ತಿತ್ವದ, ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಸದಾ ಚಟುವಟಿಕೆಯುಳ್ಳ, ಕ್ರಿಯಾಶೀಲಗುಣವ...

ಒಂದು ಸಮುದಾಯವು ತನ್ನ ಒಳಿತಿಗಾಗಿ ಶ್ರಮಿಸಿದವರನ್ನು ಆರಾಧಿಸುವುದು ಸಾಮಾನ್ಯ

11-04-2025 ಬೆಂಗಳೂರು

"‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಪ್ರಸ್ತುತ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ...

ಪ್ರಯೋಗಾತ್ಮಕ ಹಾಗು ಸಹಜ ಹರಿವಿನ ಕಥೆಗಳ ನಡುವೆ 

11-04-2025 ಬೆಂಗಳೂರು

"ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಕಾಣಸಿಗುವ ಹೆಣ್ಣಿನ ಪಾವಿತ್ಯ್ರತೆಯ ಪ್ರಶ್ನೆ ಹಾಗೂ ಅಸಮ ದಾಂಪತ್ಯದಲ್...