ಅಂತರಂಗಕ್ಕೆ ತಾಕುವ ಹಲವಾರು ಸಾಲುಗಳಿವೆ


“ಬೇರ್ಯಾರದೋ ಕಣ್ಣಲ್ಲಿ ನಮ್ಮ ಇಡೀ ಬದುಕಿಗೆ ಮೌಲ್ಯಮಾಪನ ಮಾಡಲಿಕ್ಕೆ ಅಂಶಗಳು ಏನೇ ಇರಬಹುದು, ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಭಾವನೆಗಳ ಮುಖಾಂತರವೇ. ಅಂಥಾ ಭಾವನೆಗಳನ್ನು ಹೇಳುವ ಗಾಢವಾದ ಸಾಲುಗಳು ಈ ಸಂಕಲನದುದ್ದಕ್ಕೂ ಢಾಳಾಗಿ ಸಿಗುತ್ತವೆ,” ಎನ್ನುತ್ತಾರೆ ವಿನಾಯಕ ಅರಳಸುರಳಿ ಅವರು ಸದಾಶಿವ ಸೊರಟೂರು ಅವರ “ಧ್ಯಾನಕ್ಕೆ ಕೂತ ನದಿ” ಕೃತಿ ಕುರಿತು ಬರೆದ ವಿಮರ್ಶೆ.

ನಾವು ಬದುಕನ್ನು ಕಳೆಯುವುದು ಕ್ಷಣಕ್ಷಣಗಳ ಮೂಲಕ. ಪ್ರತಿ ಸಕೆಂಡಿನಲ್ಲೂ ನಮ್ಮ ಮನಸ್ಸಿನಲ್ಲಿ ಒಂದಿಲ್ಲೊಂದು ತಳಮಳ, ಯೋಚನೆ, ಭಾವನೆಗಳ ಪ್ರವಾಹ ಹರಿಯುತ್ತಲೇ ಇರುತ್ತದೆ. ಬದುಕಿನ ಘಟ್ಟಗಳನ್ನು ಗುರುತಿಸುವಾಗ ಇವೆಲ್ಲ ಲೆಕ್ಕಕ್ಕೆ ಬಾರದೇ ಹೋದರೂ ನಮ್ಮ ಇಡೀ ದೈನಿಕವನ್ನು ರೂಪಿಸುವುದು, ನಿಭಾಯಿಸುವುದು ಇಂಥಾ ಭಾವನೆಗಳೇ. ಯಾವುದೇ ಖುಷಿ ಅಥವಾ ಆಘಾತದ ಘಟನೆಯಾದರೂ ನಮ್ಮ ಬದುಕಿನಲ್ಲಿ ಪ್ರಸ್ತುತವಾಗುವುದು ಅದು ಏಳಿಸುವ ಅಲೆಗಳ ಮೂಲಕವೇ. ಅಂಥ ವಿವರಣೆಗಳನ್ನು, ಭಾವನೆಗಳನ್ನು, ಏರಿಳಿತಗಳನ್ನು ಕಥೆಗಳಲ್ಲಿ ಓದುವುದೇ ಒಂದು ಖುಷಿ.

'ಧ್ಯಾನಕ್ಕೆ ಕುಳಿತ ನದಿ' ಸೆಳೆಯುವುದು ತನ್ನ ಶೈಲಿ ಹಾಗೂ ಭಾವನೆಗಳ ಮೂಲಕ. ಹಾಗೆಯೇ ಅಲ್ಲಲ್ಲಿ ಹೊಸದೆನ್ನಿಸುವ ತನ್ನ ವಸ್ತುಗಳ ಮೂಲಕವೂ ಹೌದು. ಬೇರ್ಯಾರದೋ ಕಣ್ಣಲ್ಲಿ ನಮ್ಮ ಇಡೀ ಬದುಕಿಗೆ ಮೌಲ್ಯಮಾಪನ ಮಾಡಲಿಕ್ಕೆ ಅಂಶಗಳು ಏನೇ ಇರಬಹುದು, ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಭಾವನೆಗಳ ಮುಖಾಂತರವೇ. ಅಂಥಾ ಭಾವನೆಗಳನ್ನು ಹೇಳುವ ಗಾಢವಾದ ಸಾಲುಗಳು ಈ ಸಂಕಲನದುದ್ದಕ್ಕೂ ಢಾಳಾಗಿ ಸಿಗುತ್ತವೆ. ಅಂತೆಯೇ ಸಮಾಜದ ಗದ್ದಲದ ನಡುವೆ ಮಾರ್ದನಿಸದೇ ಉಳಿದ ಹಲವಾರು ದನಿಗಳು ಇಲ್ಲಿ ಚೆಲ್ಲಾಡಿವೆ.‌ ಅವನ್ನೆಲ್ಲ ಪೋಣಿಸಿ, ಸುಂದರ ಕಥೆಯಾಗಿಸಿ, ತಿರುವುಗಳ ಜೊತೆ ಕಟ್ಟಿಕೊಡಲಾಗಿದೆ. ಆಯ್ಕೆ ಮಾಡಿಕೊಂಡ ವಿಷಯಗಳೂ ಹೃದ್ಯವಾಗಿವೆ. ಇನ್ನೊಂದರ್ಥದಲ್ಲಿ ಕಥೆಗಾರ ತಮ್ಮ ಗಾಢವಾದ ಸಾಲು ಹಾಗೂ ಶೈಲಿಗಳ ಮೂಲಕ ಆಯ್ಕೆ ಮಾಡಿಕೊಂಡ ವಸ್ತುವನ್ನು ಹೃದ್ಯವಾಗಿಸಿದ್ದಾರೆ.

ಕೃತಿಯುದ್ದಕ್ಕೂ ಗಮನ ಸೆಳೆಯುವ, ಅಂತರಂಗಕ್ಕೆ ತಾಕುವ ಹಲವಾರು ಸಾಲುಗಳಿವೆ. ಎಲ್ಲ ಕಥೆಗಳು ತನ್ಮಯವಾಗಿ ಓದಿಸಿಕೊಂಡು ಹೋಗುತ್ತವೆ.

- ವಿನಾಯಕ ಅರಳಸುರಳಿ

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...