“ತಮಿಳುನಾಡಿನ ಕನ್ನಡ ಶಾಸನಗಳು” ಮೂರನೆಯ ಪರಿಷ್ಕೃತ ವಿಸ್ತೃತ ಮುದ್ರಣ 2018. ಈ ಕೃತಿಯನ್ನು ಡಾ. ಪಿ.ವಿ. ಕೃಷ್ಣಮೂರ್ತಿ ಅವರು ಸಂಪಾದಿಸಿದ್ದಾರೆ. ತಮಿಳುನಾಡಿನಲ್ಲಿರುವ ಕನ್ನಡ ಶಾಸನಗಳು ಅವುಗಳ ಹರವು, ಸ್ವರೂಪ ಹಾಗೂ ಭಾಷಿಕ ಹಿನ್ನೆಲೆಯಲ್ಲಿ 1. ಸಹಜ ಕನ್ನಡ ಪ್ರದೇಶದ ಶಾಸನಗಳು. 2. ಕನ್ನಡ ಅರಸುಮನೆತನಗಳ ರಾಜಭಾಷಾ ಶಾಸನಗಳು. 3. ದಿಗ್ವಿಜಯ ಸ್ಮಾರಕಗಳು ಎಂದು ಮೂರು ವಿಭಾಗಳಾಗಿ ವಿಂಗಡಿಸಿ, ಕಾವೇರಿ ತೀರದ ಧರ್ಮಪುರಿ, ಸೇಲಂ ಹಾಗೂ ಈರೋಡ್ ಜಿಲ್ಲೆಗಳಲ್ಲಿ, ತಮಿಳುನಾಡಿನ ಒಟ್ಟು ಕನ್ನಡ ಶಾಸನಗಳಲ್ಲಿ ಶೇಖಡಾ 60ಕ್ಕೂ ಹೆಚ್ಚಿನವು ಹರಡಿಕೊಂಡಿವೆ ಎಂಬುದನ್ನು ಸಾಧಾರವಾಗಿ ತೋರಿಸಿ “ಕಾವೇರಿಯಿಂದ ಮಾ……… “ ಎಂಬ ಕವಿರಾಜಮಾರ್ಗಕಾರನ ಮಾತುಗಳು ದಿಟ ಎಂಬುದಕ್ಕೆ ಸಾಕ್ಷಿ ನೀಡಿದ್ದಾರೆ.
ಜನ್ಮತಃ ತಮಿಳರಾದ ಚೋಳ ಅರಸರೂ ತಮ್ಮ ಆಳ್ವಿಕೆಯ ಆರಂಭದಲ್ಲಿಈ ಪ್ರದೇಶಗಳಲ್ಲಿನ ಸ್ಥಳೀಯ ಭಾಷೆಯಾಗಿದ್ದ ಕನ್ನಡದಲ್ಲೇ ಶಾಸನಗಳನ್ನು ಹಾಕಿಸಿರುವ ಗಮನಾರ್ಹ ಅಂಶಗಳನ್ನು ಇಲ್ಲಿನ ಅಧ್ಯಯನದಲ್ಲಿ ಲೇಖಕರು ತೋರಿಸಿಕೊಟ್ಟಿದ್ದಾರೆ. ಇವಲ್ಲದೇ, ಶಾಸನೋಕ್ತವಾದ ಸ್ಥಳನಾಮಗಳು ಹಾಗೂ ವ್ಯಕ್ತಿನಾಮಗಳನ್ನು ವಿಶ್ಲೇಷಿಸಿ, ಆ ಪ್ರಾಂತ್ಯಗಳು ನಿಸ್ಸಂದಿಗ್ದವಾಗಿ ಪ್ರಾಚೀನ ಕರ್ನಾಟಕದ ಒಂದು ಭಾಗವಾಗಿದ್ದವೆಂಬುದನ್ನು ರುಜುವಾತು ಪಡಿಸಿದ್ದಾರೆ. ಅಲ್ಲದೆ, ಆ ಪ್ರದೇಶಗಳಲ್ಲಿಇಂದಿಗೂ ಉಳಿದು ಬಂದಿರುವ ಜಾನಪದ ಆಚರಣೆಗಳು, ಹಬ್ಬ ಹರಿದಿನಗಳು, ಸಂಪ್ರದಾಯಗಳು ಇತ್ಯಾದಿ ಕಡೆ ಗಮನ ಸೆಳೆದಿದ್ದಾರೆ. ಪ್ರಾದೇಶಿಕ ಆಡಳಿತ ವಿಭಾಗಗಳು ಮತ್ತು ಭೌಗೋಳಿಕ ವಿಭಾಗಗಳು. ರಾಜಕೀಯ ಮಹತ್ವ, ಧಾರ್ಮಿಕ ಮಹತ್ವ, ದೇವಾಲಯ ರಚನೆ, ಜೀರ್ಣೋದ್ಧಾರ, ಪೂಜಾ ಕೈಂಕರ್ಯಗಳು, ಕೃಷಿ, ನೀರಾವರಿ, ವಾಣಿಜ್ಯ, ನಾಣ್ಯಗಳು, ವೀರಪರಂಪರೆ, ವ್ಯಕ್ತಿನಾಮಗಳು, ಸ್ಥಳನಾಮಗಳು, ಸಾಹಿತ್ಯ, ಭಾಷೆ,ಲಿಪಿ, ಶಾಸನಗಳ ಸೂಚಿ ಮತ್ತು ಸಾರಾಂಶಗಳು ಇತ್ಯಾದಿ ಅಧಿಕೃತವಾಗಿ ದಾಖಲಿಸಲಾಗಿದೆ
©2024 Book Brahma Private Limited.