ಸಮಾಜಪರವಾದ ದೃಷ್ಠಿಯನ್ನು ಬೆಳೆಸಲು ಸಮಾಜಪರವಾದ ಜ್ಞಾನವೂ ಬೇಕು. ಸಾಮಾಜಿಕ ದೃಷ್ಟಿಯೂ ಸಮಗ್ರತೆಯ ಪರಿಶೀಲನೆಯಿಂದ ಮಾತ್ರ ಸಾಧ್ಯವಾಗುವಂತದ್ದು. ಒಂದು ಸಮಾಜದ ಹುಟ್ಟಿಗೆ ಬಹು ದೊಡ್ಡ ಚರಿತ್ರೆಯಿರುವಂತೆ, ಸಾಮಾಜಿಕ ಜ್ಞಾನವೆಂಬುದು ವ್ಯಾಪಕವಾದ ಅರ್ಥವನ್ನು ಪಡೆದುಕೊಂಡಿದೆ.
ಸಾಮಾಜಿಕ ನಡೆ-ನುಡಿಯು ತನಗೆ ಬೇಕಾದಂತೆ ವರ್ತಿಸುತ್ತದೆ. ಇದರಿಂದಾಗಿ ಸಾಮಾಜಿಕ ಮೌಲ್ಯ ವಿಶೇಷವಾಗಿ ರೂಪುಗೊಳ್ಳುತ್ತದೆ.
’ಸಾಂಸ್ಕೃತಿಕ ಪರಿಕಲ್ಪನೆಗಳು’ ಕೃತಿಯು ವೈದಿಕ ಸಂಸ್ಕೃತಿಯ ಹಿನ್ನಲೆಯಿಂದಲೂ ಆಧುನಿಕ ಅಂಶಗಳವರೆಗೆ ಚರ್ಚಿಸುವಂತಹ ವಿಷಯಗಳನ್ನು ಕುರಿತು ಪ್ರಸ್ತಾಪಿಸುತ್ತದೆ.
ಅಗ್ನಿ ಸಾಕ್ಷಿ, ಅಜ್ಞಾತವಾಸ, ಅತ್ಯಾಸಕ್ತ, ಅತಿಥಿ, ಕುಲ – ಗೋತ್ರಗಳು, ಕೇಶ ಸಂಸ್ಕಾರ, ಗಾಂಧರ್ವ ವಿವಾಹ, ಕೈಗಾರಿಕೆ, ಗ್ರಂಥಾಲಯ, ಗ್ರಾಮ ದೇವತೆ, ಜನಪದ, ಜಲದಾನ ಕ್ರಿಯೆ, ಚಾತುರ್ವರ್ಣ, ಚಾಂದ್ರಮಾನ, ಅಮಾತ್ಯರ ಬಗ್ಗೆ ಹೀಗೆ ಹಲವಾರು ಅಂಶಗಳನ್ನು ಈ ಕೃತಿ ತೆರೆದಿಡುತ್ತದೆ.
©2024 Book Brahma Private Limited.