ಲೇಖಕಿ -ಸಂಶೋಧಕಿ ಡಾ. ಎ.ಎನ್. ಸಿದ್ದೇಶ್ವರಿ ಅವರು ತಮ್ಮೂರು ಅಮಕುಂದಿ ಬಗ್ಗೆ ವಿಶಿಷ್ಟ ಅನುಭವವನ್ನು ದಾಖಲಿಸಿದ ಕೃತಿ-ನಮ್ಮೂರು ಅಮಕುಂದಿ. ಈ ಗ್ರಾಮದ ಭೌಗೋಳಿಕ ಇತಿಹಾಸ ಕೃಷಿ ಸಂಸ್ಕೃತಿ ನಾಗರಿಕತೆ ಬೆಳೆದು ಬಂದ ರೀತಿ , ಐತಿಹಾಸಿಕ ಹಿನ್ನೆಲೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ.
ಗ್ರಾಮ ಸ್ವರೂಪ, ಪಾರಂಪರಿಕ ವೃತ್ತಿಮೂಲ ಸಮುದಾಯ ಗಳು, ಆಚರಣೆಗಳು, ಜೀವನಾವತ್ರನ ಆಚರಣೆಗಳು, ವಾಷ್ರಿಕಾವ್ರತ್ತ್ರನ ಆಚರಣೆಗಳು ಹೀಗೆ ವಿವಿಧ ಅಧ್ಯಾಯಗಳಡಿ ಅಧ್ಯಯನ ಮಾಡಲಾಗಿದೆ. ಕೃತಿಗೆ ಮುನ್ನುಡಿ ಬರೆದ ಕರ್ನಾಟಕ ಜಾನಪದ ವಿ.ವಿ. ಕುಲಪತಿ ಡಾ. ಡಿ.ಬಿ. ನಾಯಕ ಅವರು ‘ಅಮಕುಂದಿ ಗ್ರಾಮವನ್ನು ಸಮಗ್ರ ಆಯಾಮಗಳಿಂದ ನೋಡಿ, ಅಧ್ಯಯನ ಮಾಡಿ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವದ ಕೃತಿಯನ್ನಾಗಿಸುವ ಈ ರೀತಿಯ ಬರವಣಿಗೆಯು ಸಂಶೋಧನೆಯ ಜೀವಾಳವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.