ಲೇಖಕಿ ಇಂದಿರಾ ಹೆಗ್ಗಡೆ ಅವರ ಸಂಶೋಧನಾ ಕೃತಿ ʻಬಂಟರು: ಒಂದು ಸಮಾಜೋ-ಸಾಂಸ್ಕೃತಿಕ ಅಧ್ಯಯನʼ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ, ಮತ್ತು ನೆರೆಹೊರೆಯ ಕಾಸರಗೋಡು ಮತ್ತು ಕೊಡಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಬಂಟ ಜನಾಂಗದ, ಸಮಾಜದ ಬಗ್ಗೆ ಹಲವಾರು ವರ್ಷ ಕ್ಷೇತ್ರಕಾರ್ಯ, ಅಧ್ಯಯನ ಮಾಡಿ ವಿಸ್ತಾರವಾಗಿ ರಚಿಸಿದ ಕೃತಿ. ಬಂಟ ಪದದ ವ್ಯುತ್ಪತ್ತಿಯಿಂದ ಹಿಡಿದು ಆ ಸಮಾಜದಲ್ಲಿನ ಪ್ರಭೇದಗಳು, ಕುಟುಂಬ ವ್ಯವಸ್ಥೆ, ಕೃಷಿ ಆಚರಣೆಗಳು, ಆರಾಧನಾ ಪದ್ದತಿ, ಅವರ ಸಂಸ್ಕೃತಿ, ಬೆಳೆದು ಬಂದ ಇತಿಹಾಸ ಹೀಗೆ ಅನೇಕ ಹೊಸ ವಿಚಾರಗಳನ್ನು ಲೇಖಕರು ಪುಸ್ತಕದಲ್ಲಿ ಚರ್ಚಿಸುತ್ತಾರೆ.
©2024 Book Brahma Private Limited.