ಮಂಡ್ಯ ಜಿಲ್ಲೆಯ ಜಾತ್ರೆಗಳು

Author : ಜಿ.ವಿ. ದಾಸೇಗೌಡ (ಜಿ.ವಿ.ಡಿ.)

Pages 212

₹ 55.00




Year of Publication: 2000
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಜನಪದರು ತಾವು ಖುಷಿಯಿಂದ ಆಚರಿಸುವ ಜಾತ್ರೆಯ ಬಗ್ಗೆ , ಜನರು ಪರಸ್ಪರರು ಭೇಟಿಯಾಗುತ್ತಾ ವಿಜಯೋತ್ಸವದ ತರ ಆಚರಿಸುತ್ತಿರವ ಜಾತ್ರೆಯು ಯಾವ ರೀತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ. ಪ್ರತಿಯೊಂದು ತಾಲೂಕಿನಲ್ಲಿ ನಡೆಯವ ತಾಲೂಕಿನ ಭೌಗೋಳಿಕ ಹಿನ್ನೆಲೆ, ಅದರ ಇತಿಹಾಸ, ದೇವತೆಗಳ ಮಹತ್ವ, ಅದರಲ್ಲೂ ಪ್ರಧಾನ ದೇವತೆಗಳು , ಗುಡಿ , ಮಠ, ಮೊದಲಾದ ಧಾರ್ಮಿಕತೆಯ ಬಗ್ಗೆ ಈ ಕೃತಿಯು ವಿವರಿಸುತ್ತದೆ. ಮಂಡ್ಯ ಜಿಲ್ಲೆಯ ಸ್ವರೂಪವನ್ನು ವಿವರಿಸುವ ಈ ಕೃತಿಯೂ ಒಟ್ಟು ಮಂಡ್ಯ ಜಿಲ್ಲೆಯ ಬಗ್ಗೆ, ಅಲ್ಲಿಯ ಸ್ಥಳೀಯ ಭೌಗೋಳಿಕತೆಯ ಬಗ್ಗೆ ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಜಿ.ವಿ. ದಾಸೇಗೌಡ (ಜಿ.ವಿ.ಡಿ.) - 21 April 2019)

ಜಿ.ವಿ.ಡಿ ಎಂದು ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿದ್ದ ಡಾ. ಜಿ.ವಿ. ದಾಸೇಗೌಡ ಅವರು ಹಿರಿಯ ಸಾಹಿತಿ, ಜಾನಪದ ತಜ್ಞ. ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದ ಅವರು ಜಾನಪದ ಮತ್ತು ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ 65ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಥೆ, ಕವಿತೆ, ಕಾದಂಬರಿ, ವಿಮರ್ಶೆ, ನಾಟಕ, ಕಾವ್ಯ ಮೀಮಾಂಸೆ, ಪ್ರಬಂಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿ ಪ್ರಕಟಿಸಿದ್ದರು.   ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ, ಸಂಸ್ಕೃತ, ಪ್ರಾಕೃತ ಭಾಷೆಗಳನ್ನು ಬಲ್ಲವರಾಗಿದ್ದ ಅವರು ಕನ್ನಡ ಪ್ರಾದ್ಯಾಪಕರಾಗಿ ಮಂಡ್ಯದ ಕೆ.ಎಂ.ದೊಡ್ಡಿ, ಮಡಿಕೇರಿ, ತುಮಕೂರು, ಮಂಡ್ಯ, ಮತ್ತಿತರ ಸರ್ಕಾರಿ ಕಾಲೇಜುಗಳಲ್ಲಿ 32 ...

READ MORE

Related Books