Year of Publication: 2025 Published by: ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ Address: Shri Hanagal Kumara Shivayogi Seva Samiti New Dehali and Karnataka Phone: 9910159245
Share On
Synopsys
೨೦ನೆಯ ಶತಮಾನದ ಅರಂಭದ ದಿನಗಳಲ್ಲಿ ಮೇಲುವರ್ಗದ ಸಮುದಾಯಗಳಿಂದ ಶೋಷಣೆಗೆ ತುತ್ತಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಅಧೋಗತಿಗೆ ತುತ್ತಾಗಿದ್ದ ವೀರಶೈವ-ಲಿಂಗಾಯತ ಧರ್ಮಿಯರ ಸ್ವಾಭಿಮಾನವನ್ನು ಎತ್ತಿ ಹಿಡಿಯುವದರ ಜೊತೆಗೆ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ
೧. ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು
೨. ಶ್ರೀ ಶಿರಸಂಗಿ ಲಿಂಗರಾಜರು
೩. ಶ್ರೀ ವಾರದ ಮಲ್ಲಪ್ಪನವರು
೪. ಶ್ರೀ ಅರಟಾಳ ರುದ್ರಗೌಡರು
೫. ಶ್ರೀ ಹಾಲಭಾವಿ ವೀರಭದ್ರಪ್ಪನವರು
೬. ಶ್ರೀ ಪುಟ್ಟಣ್ಣ ಶೆಟ್ಟರು
೭. ಶ್ರೀ ಒಂಟಮುರಿಯ ಲಖಮಗೌಡ ಸರದೇಸಾಯಿ ಯವರು
೮. ಶ್ರೀ ಮೆಣಸಿನಕಾಯಿಯವರು
ಇನ್ನೂ ಹಲವು ಮಹಾತ್ಮರು ಇಂದು ನಮ್ಮ ಕಣ್ಣೆದುರು ಇಲ್ಲ.
ಅವರು ಅಖಿಲ ಭಾರತ ವೀರಶೈವ ಮಹಾಸಭೆ ಗೆ “ಲಿಂಗಾಯತ” ಎಂದು ಹೆಸರು ಇಡದೇ “ವೀರಶೈವ” ಎಂದು ಹೆಸರು ಇಟ್ಟರು ಎಂಬ ಕಾರಣಕ್ಕೆ ಡಾ.ಎಸ್.ಎಂ ಜಾಮದಾರ ಅವರು ಬರೆದ “ಅಖಿಲ ಭಾರತ ವೀರಶೈವ ಮಹಾಸಭೆಯು ಸತ್ಯವನ್ನು ಅರ್ಥಮಾಡಿಕೊಳ್ಳುವುದೆ?” ಎಂಬ ಪುಸ್ತಕದಲ್ಲಿ ಈ ಎಲ್ಲ ಮಹಾನ್ ಚೇತನಗಳ ಕುರಿತು ಹೀನಾಯವಾಗಿ ಬರೆಯುವ ಧಾವಂತದಲ್ಲಿ ಡಾ.ಎಸ್.ಎಂ ಜಾಮದಾರ ಅವರು ಕನಿಷ್ಟ ಪಕ್ಷ ವ್ಯಕ್ತಿ ಗೌರವದ ಸೌಜನ್ಯತೆಯ ಮಾನದಂಡ ಬಳಸದೇ
“ಆನೆ ನಡೆದಿದ್ದೇ ದಾರಿ” ಎಂಬ ಭ್ರಮೆಯಲ್ಲಿ ಬರೆದಿದ್ದು ಖೇದಕರ.
ಜೊತೆಗೆ ಇಂಥ ಪುಸ್ತಕವನ್ನು ಪ್ರಕಟಿಸಿದ ಜಾಗತಿಕ ಲಿಂಗಾಯತ ಮಹಾಸಭೆಯ ನಡೆ ಖಂಡನೀಯವಾದುದು.
ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ?
ಆ ನಿಂದಕನ ಅಂತರಂಗದಲ್ಲಿ ಅಹಂಕಾರನೆಂಬ ಕೋಣ ಹುಟ್ಟಿ
ಜ್ಞಾನಿಗಳೆಂದರಿಯದೆ ಬಾಯಿಗೆ ಬಂದಂತೆ ನುಡಿವ ತರಕಿಮೂಳರ
ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ
ಶರಣ ಜಕ್ಕಣಯ್ಯ ಅಹಂಕಾರವನ್ನು ಕೋಣಕ್ಕೆ ಹೋಲಿಸಿದ್ದಾರೆ. ಅಹಂಕಾರ ಇದ್ದಲ್ಲಿ ಅಜ್ಞಾನ ಸಹಜ ವಾಗಿ ನೆಲೆಗೊಳ್ಳುತ್ತದೆ ಅದರ ಪರಿಣಾಮವಾಗಿ ಆತ ಕಂಡ ಕಂಡವರನ್ನು ಬಾಯಿಗೆ ಬಂದಂತೆ ನಿಂದಿಸುವನು.
ಹಿರಿಯರು ಅಹಂಕಾರಕ್ಕೆ ಉದಾಸೀನವೇ ಮದ್ದು ಎನ್ನುವರು. ಆದರೆ ಉದಾಸೀನ ಮಾಡಿದಾಗ
“ ನನಗೆ ” ಹೆದರಿಕೊಂಡರೆಂದು ಭಾವಿಸಿ ಆ ಅಹಂಕಾರಿ ಇನ್ನಷ್ಟು ದರ್ಪ ದೌರ್ಜನ್ಯಗಳನ್ನು ತೋರಿಸಬಹುದು. ಅದನ್ನು ನೆನಪಿನಲ್ಲಿಟ್ಟು ಕೊಂಡು ಈ ಪುಸ್ತಕವನ್ನು ಪ್ರಕಟಿಸಲಾಗುತ್ತಿದೆ.
-ಶ್ರೀಕಂಠ.ಚೌಕೀಮಠ
Excerpt / E-Books