ಕಾಲ್ದಾರಿ

Author : ಅಗ್ರಹಾರ ಕೃಷ್ಣಮೂರ್ತಿ

Pages 224

₹ 230.00




Year of Publication: 2024
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಕಾಲ್ದಾರಿ ಇದು ಅಗ್ರಹಾರ ಕೃಷ್ಣಮೂರ್ತಿ ಅವರ ಕೃತಿಯಾಗಿದ್ದು, ಇಲ್ಲಿ ಎರಡು ಬಗೆಯ ಬರೆಹಗಳಿವೆ. ಮೊದಲನೆಯವು- ತಮ್ಮ ವಾರಿಗೆಯ ಮತ್ತು ಕಿರಿಯ ಲೇಖಕರ ಪುಸ್ತಕಗಳಿಗೆ ಬರೆದ ವಿಮರ್ಶೆ ಮತ್ತು ಮುನ್ನುಡಿಗಳು. ಬರೆಹ ಯಾಕೆ ಇಷ್ಟವಾಯಿತು ಎಂದು ಸಹೃದಯ ಸ್ಪಂದನೆಯನ್ನು ಹಂಚಿಕೊಳ್ಳುವ ಮಾದರಿಯಲ್ಲಿ ಇವು ಇವೆ. ಇಲ್ಲಿ ಚರ್ಚಿತವಾಗಿರುವ ಕೃತಿಗಳು ಹೆಚ್ಚಿನವು ಹೊಸ ತಲೆಮಾರಿಗೆ ಸೇರಿದವು. ಕೆಲವು ಅಜ್ಞಾತ ಲೇಖಕರವು. ಇಲ್ಲಿನ ಸಾಹಿತ್ಯಕ ಸ್ಪಂದನೆಗಳಲ್ಲಿ ನಿಷ್ಠುರವಾದ ವಿಮರ್ಶೆ ಮತ್ತು ಮೌಲ್ಯಮಾಪನದ ಅಂಶ ಕಡಿಮೆ ಇದೆ; ಹೊಸ ತಲೆಮಾರನ್ನು ಪ್ರೀತಿ ವಿಶ್ವಾಸಗಳಿಂದ ಬೆಳೆಸುವ ತಾಯ್ತನ ಹೆಚ್ಚಾಗಿದೆ. ಎರಡನೆಯವು- ಸಾಹಿತ್ಯ ಲೋಕದಲ್ಲಿ ನಡೆದ ಬೇರೆ ಬೇರೆ ವಿದ್ಯಮಾನಗಳನ್ನು ಸಾಹಿತ್ಯಕವಾದರೂ, ಇವುಗಳ ಒಳಗಿರುವ ಸಾಂಸ್ಕೃತಿಕ ರಾಜಕಾರಣ ಪ್ರಶ್ನೆ, ಚರ್ಚೆಯನ್ನು ಚಾರಿತ್ರಿಕ ನೆಲೆಗೆ ಕೊಂಡೊಯ್ಯುತ್ತದೆ. ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಾರ್ವಜನಿಕ ಸಂಸ್ಥೆಗಳ ಆಡಳಿತಗಾರರಾಗಿದ್ದ ಕಾರಣ, ಅವರ ಅನುಭವ ಈ ಬರೆಹಗಳಿಗೆ ಹೊಸತೊಂದು ಆಯಾಮವನ್ನು ದೊರಕಿಸಿದೆ. ಅಗ್ರಹಾರ ಅವರು ಶ್ರೇಷ್ಠ ಗುರುಗಳಿಂದ ಸಾಹಿತ್ಯದ ಅಭಿರುಚಿಯನ್ನು, ಹೆಸರಾಂತ ಚಿಂತಕರಾದ ಗೆಳೆಯ-ಸಹಪಾಠಿಗಳ ಸಂಗದಿಂದ ಚಳವಳಿ ಪ್ರಜ್ಞೆಯನ್ನು ಭಾರತದ ಬೇರೆ ಬೇರೆ ಲೇಖಕರ ಒಡನಾಟದ ಅನುಭವವನ್ನು ಪಡೆದವರು. ಈ ಅಭಿರುಚಿ, ಪ್ರಜ್ಞೆ ಮತ್ತು ಅನುಭವಗಳು, ಪುಸ್ತಕಗಳ ಚರ್ಚೆಯ ನೆಪದಲ್ಲಿ ಇಲ್ಲಿ ಸಂಗಮಿಸಿವೆ.

About the Author

ಅಗ್ರಹಾರ ಕೃಷ್ಣಮೂರ್ತಿ
(18 January 1953)

ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು 1953 ರ ಜನವರಿ 18 ರಂದು, ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದರು. ಕರ್ನಾಟಕದ ಅತ್ಯಂತ ಅಲ್ಪಸಂಖ್ಯಾತ ಜಾತಿಗಳಲ್ಲೊಂದಾದ ಜೆಟ್ಟಿ ಜನಾಂಗದ ಏಕಮಾತ್ರ ಲೇಖಕರು ಎನ್ನಬಹುದು. ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡರ  ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವೀಧರರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲಿ ಹಾಗೂ  ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ...

READ MORE