'ಹೂ ಹಸಿವಿನ ಮಾತು' ಕೃತಿಯಲ್ಲಿ ಒಟ್ಟು 23 ವಿವಿಧ ಹೂಗಿಡ, ಮರಗಳ ಪರಿಚಯವಿದೆ. ‘ಸುರಗಿಯ ಸಿರಿ’’, 'ಆಶೋಕ ವನದಲ್ಲಿ, ‘ರಂಜವೆಂಬ ಬಕುಲದ ಹೂ', 'ಮಾದಕ ಮಾಧವಿ ಲತೆ', 'ಕಾಡಿನ ಆಭರಣ ಸಿಗ್ದಾಳಿ ಹೂ' ಹೀಗೆ ಶೀರ್ಷಿಕೆಯಲ್ಲಿ ಈ ಹೂಗಳ ಆಕರ್ಷಣೆಯ ಪರಿಚಯ ಸಿಗುತ್ತದೆ. ಲೇಖನದ ಜೊತೆಜೊತೆಗೆ ಹಾಗೂ ಮಧ್ಯದ ಪುಟಗಳಲ್ಲಿ ಇರುವ ಫೋಟೋಗಳು ಓದುಗರ ಕುತೂಹಲವನ್ನು ತಣಿಸುತ್ತವೆ. ನಮ್ಮ ಪಶ್ಚಿಮ ಘಟ್ಟಗಳು ಜೀವವೈವಿಧ್ಯದ ತವರು. ಅಲ್ಲಿರುವ ಅಪರೂಪದ ಸಸ್ಯ. ಪ್ರಾಣಿಗಳ ಅರಿವು ನಗರದವರಿಗಂತೂ ಇರುವುದೇ ಇಲ್ಲ ಈ ಕೃತಿಯ ಪುಟ್ಟ ಪುಟ್ಟ ಲೇಖನಗಳು ಇಂತಹ ಅಪರೂಪದ ವಿಶಿಷ್ಟ ಮರ, ಗಿಡಗಳ ಪರಿಚಯವನ್ನು ಸಸ್ಯ ಶಾಸ್ತ್ರೀಯವಾಗಿ ಮಾತ್ರವಲ್ಲದೆ ಜೀವನಾನುಭವ ಹಾಗೂ ಕಾವ್ಯದ ಸಾಲುಗಳು ಬೆರೆತ ಲವಲವಿಕೆಯ ಶೈಲಿಯಲ್ಲಿ ಪರಿಚಯ ಮಾಡಿಕೊಡುತ್ತವೆ. 'ಸುರಗಿಯ ಸಿರಿ' ಎಂಬ ಲೇಖನ ಹೀಗೆ ಆರಂಭಗೊಳ್ಳುತ್ತದೆ. 'ಮರದ ಸಮೀಪ ಹೋಗುವಷ್ಟರಲ್ಲಿ ಗಾಢ ಪರಿಮಳ, ಜೇನುಗಳ-ದುಂಬಿಗಳ ಝೇಂಕಾರ ನಮ್ಮನ್ನು ಸ್ವಾಗತಿಸಿತು. 'ಸುರಿವ ಸುರಯಿಯರು ಮಗುಳ್ಳೆ ಮೊಗಸಿದಳಿಕುಳಂಗಳಿ' ಎಂಬ ಕವಿ ಪ೦ಪನ ವರ್ಣನೆ ನೆನವಾಯಿತು.". ಲೇಖಕಿಯು ಸದಾ ಸಾಹಿತ್ಯದ ಸಾನ್ನಿಧ್ಯದಲ್ಲಿರುವವರಾದ್ದರಿಂದ ಕವಿನುಡಿಗಳನ್ನು ನೆನಪಿಸಿಕೊಳ್ಳುತ್ತ ಮರಗಿಡಗಳನ್ನು ಪರಿಚಯಿಸುತ್ತಾರೆ.
©2024 Book Brahma Private Limited.