ಬೆಳಗಾವಿ ಜಿಲ್ಲೆಯ ಜಾನಪದ ಕಲಾವಿದ ಪರಿಚಯ ಈ ಕೃತಿಯಲ್ಲಿದೆ. ಲಾವಣಿ, ಗೀಗಿ, ಸೋಬಾನೆ, ರಿವಾಯತ್, ದೇಸಿ... ಹೀಗೆ ಜನಪದೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರ ಕುರಿತು ಈ ಕೃತಿಯು ಮಾಹಿತಿ ನೀಡುತ್ತದೆ. ಮುಖ್ಯವಾಗಿ ಲಾವಣಿ-ಗೀಗೀ ಕವಿ ಮತ್ತು ಹಾಡುಗಾರ ಭೀಮಕವಿ, ಗೀಗೀ ಗಾಯಕ ಚೆನ್ನಪ್ಪ ಚಿಂಚಲಿ, ಲಾವಣಿ-ಗೀಗೀ ಗಾಯಕ ಮತ್ತು ಕವ ಕಂದಭೀಮಕವಿ, ಗೀಗೀ ಪದ ಹಾಡುಗಾರ - ಕವಿ ಮತ್ತು ಕುಸ್ತಿಪೈಲ್ವಾನ ಮರಿಕಲ್ಲಪ್ಪ ಮಲಶೆಟ್ಟಿ, ಜನಪದ ಕವಿ-ಕಲಾವಿದ ಹೊಸೂರು ಸೋಮಲಿಂಗಪ್ಪ, ಜನಪದ ಕವಿ-ಕಲಾವಿದ ಮಲ್ಲನಗೌಡ ಪಾಟೀಲ, ಜನಪದ ಸಂಪ್ರದಾಯದ ಹಾಡುಗಳ ಕೋಗಿಲೆ ಭೀಮವ್ವ ಹರಿಜನ, ಸೋಬಾನ ಪದದ ಸಾವಿತ್ರೆವ್ವ ಗಡದೆ, ಜನಪದ ಹಾಡಗಾರ ಭೀಮಪ್ಪ ತೋಟಗಿ, ದೇಸೀ ಹಾಡಿನ ಸರದಾರ ಭೀಮಶೆಪ್ಪಶಾಸ್ತ್ರೀ, ಜನಪದ ಹಾಡುಗಾರ ಕಲಾವಿದ ಹೂವಪ್ಪ ಜಕಬಾಳ, ರಿವಾಯತ್ ಹಾಡುಗಾರ ಭೀಮಪ್ಪ ಮಾಯಣ್ಣವರ್ ಕುರಿತ ಮಾಹಿತಿ ಇಲ್ಲಿದೆ.
ಭಜನೆ ಕಲಾವಿದರಾದ ಕಾದ್ರೊಳ್ಳಿ ಭಜನಾ ಪರಂಪರೆಯ ಕಲಾವಿದ ಭೀಮಪ್ಪ ತಳವಾರ, ಭಜನೆ ಕಲಾವಿದ ಲಖಮಗೌಡ ಪಾಟೀಲ, ರಾಮಚಂದ್ರಪ್ಪ ಮುಕ್ಕಣ್ಣವರಃ ಕೈವಲ್ಯ ಭಜನೆಯ ಹರಿಕಾರ, ಭಜನೆ ಕಲಾವಿದ ಈರಪ್ಪ ಸಿಂಗಮ್ಮನವರ ಮಾಹಿತಿ ಹಾಗೆಯೇ ಚೌಡಿಕೆ ಕಲಾವಿದರ ಮಾಹಿತಿ, ಡೊಳ್ಳು ಕಲಾವಿದರು, ಜನಪದ ವಾದ್ಯ ವಾದನ ಕಲಾವಿದರು, ಡಪ್ಪನಾಟ, ಸಣ್ಣಾಟದ ಕಲಾವಿದರು ಹಾಗೂ ಶ್ರೀ ಕೃಷ್ಣ ಪಾರಿಜಾತ ರಂಗ ಕಲಾವಿದರ ಪರಿಚಯ ಕೃತಿಯಲ್ಲಿ ಒಳಗೊಂಡಿದೆ.
©2024 Book Brahma Private Limited.