ಆವರ್ತ ಕೋಷ್ಟಕ : ಒಂದು ಪರಿಚಯ

Author : ಸಿ.ಎನ್.ಆರ್. ರಾವ್

Pages 88

₹ 158.00




Year of Publication: 2019
Published by: ನವಕರ್ನಾಟಕ ಪಬ್ಲಿಕೇಶನ್‌
Address: ದೇವನಗರ ,ಕೆಂಪೇಗೌಡ ರೋಡ್‌, ಬೆಂಗಳೂರು 560009
Phone: 7353530805

Synopsys

ಆವರ್ತ ಕೋಷ್ಟಕ : ಒಂದು ಪರಿಚಯ ಎಂಬ ವಿಜ್ಞಾನದ ಪುಸ್ತಕವು ಸಿ ಎನ್‌ ಆರ್‌ ರಾವ್‌ ಅವರ ಕೃತಿಯಾಗಿದೆ. ಆವರ್ತ ಕೋಷ್ಟಕದ ಆವಿಷ್ಕಾರವು ವಿಜ್ಞಾನದಲ್ಲಿ ಒಂದು ಪ್ರಮುಖವಾದ ಘಟನೆಯನ್ನು ಸೂಚಿಸುತ್ತದೆ. ಇದು ಬಹುಶಃ ಅತಿ ಶ್ರೇಷ್ಠವಾದ ಮಾನವ ರಚಿತ ಕೋಷ್ಟಕ. ಇದರ ಬಳಕೆಯು ಅಪಾರ ಮತ್ತು ದೀರ್ಘಕಾಲಿಕವಾಗಿದೆ. ವಿಜ್ಞಾನಿಗಳು ಇದನ್ನು ಅಣುಗಳ ಮತ್ತು ವಸ್ತುಗಳ ವಿವಿಧ ಅಂಶಗಳನ್ನು ಊಹಿಸಲು, ವಿನ್ಯಾಸಗೊಳಿಸಲು ಅಥವಾ ವಿವರಿಸಲು ಸತತವಾಗಿ ಬಳಸುತ್ತಾರೆ. ಧಾತುಗಳನ್ನು ವರ್ಗೀಕರಿಸುವ ಅಗತ್ಯ ಮತ್ತು ವರ್ಗಿಕರಿಸಲು ಬಳಸಿದ ವಿಧಾನಗಳು ಆವರ್ತ ಕೋಷ್ಟಕವನ್ನು ರಚಿಸುವಲ್ಲಿ ಪ್ರೇರಣೆಯಾಗಿವೆ. ಆಧುನಿಕ ಆವರ್ತ ಕೋಷ್ಟಕದ ಪ್ರಮುಖ ವೈಶಿಷ್ಟ್ಯಗಳನ್ನು ಮತ್ತು ವಸ್ತುಗಳ ಲಕ್ಷಣಗಳನ್ನು ವಿವರಿಸಲು ಮತ್ತು ಊಹಿಸಲು ಈ ಕಿರುಹೊತ್ತಿಗೆಯಲ್ಲಿ ಪ್ರಯತ್ನಿಸಲಾಗಿದೆ. 

About the Author

ಸಿ.ಎನ್.ಆರ್. ರಾವ್
(30 June 1934)

ಸಿ. ಎನ್. ಆರ್. ರಾವ್ ಎಂದೇ ಪ್ರಸಿದ್ದರಾದ 'ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ (ಜನನ: 30-06-1934) ವಿಶ್ವವಿಖ‍‍್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರು. ಬೆಂಗಳೂರಿನ ಜವಾಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ ಮುಖ್ಯಸ್ಥರು. 2013 ರಲ್ಲಿ ಭಾರತದ ಅತ್ಯುನ್ನತ ಗೌರವ'ಭಾರತ ರತ್ನ' ಪ್ರಶಸ್ತಿ ಸಂದಿದೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎಸ್‌ಸಿ (1955) ಪದವಿ ಪಡೆದರು. "ಅವರ ಮೇಲೆ ಪ್ರಭಾವ ಬೀರಿದ ವಿಜ್ಞಾನಿ ಸರ್‌ ಸಿ ವಿ ರಾಮನ್‌. ಸ್ನಾತಕೋತ್ತರ ಪದವಿಯನ್ನು ಬನಾರಸ್ ಹಿಂದೂ (1953)ವಿ.ವಿ.ಯಲ್ಲಿ ಪಡೆದರು. 'ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ (1958) ಪಿ.ಎಚ್‌.ಡಿ. ಪಡೆದರು. ಬೆಂಗಳೂರಿನ ಭಾರತೀಯ (1959)ವಿಜ್ಞಾನ ಮಂದಿರದಲ್ಲಿ ಉಪನ್ಯಾಸಕರಾದರು. ನಂತರ 1963ರಲ್ಲಿ ...

READ MORE

Related Books