ನಮ್ಮೂರ ಹೋಟೆಲ್, ಕೆನ್- ಓ- ಲಾ, ಗುಡ್ ಬ್ರೆಡ್ ಯಾರಿಗೆ ಗೊತ್ತಿಲ್ಲ? ರುಚಿ ರುಚಿ ತಿನಿಸು, ಸವಿ ಸವಿ ಪಾನೀಯಗಳಿಂದಾಗಿ ಬಾಯಿಯಲ್ಲಿ ನೀರೂರಿಸುವ ಇವು ಆ ರುಚಿಯ ಕಾರಣಕ್ಕೇ ಜನರ ನಾಲಗೆ ಮೇಲೆ ಶಾಶ್ವತವಾಗಿ ನೆಲೆಸಿವೆ. ಈ ಹೊಟೆಲುಗಳ ಮಾಲೀಕರು ಗೋಪಾಡಿ ಶ್ರೀನಿವಾಸ ರಾವ್.
ಅನೇಕ ಯುವ ವಿದ್ಯಾವಂತರನ್ನು ಹೋಟೆಲ್ ಉದ್ಯಮಕ್ಕೆ ಪರಿಚಯಿಸಿ ಅವರ ಕೈಕೆಳಗೆ ನೂರಾರು ಉದ್ಯೋಗಿಗಳು ಅನ್ನ ಕಂಡುಕೊಳ್ಳುವಂತೆ ಮಾಡಿದವರು ಶ್ರೀನಿವಾಸ ರಾವ್. ತಾವಷ್ಟೇ ಬೆಳೆಯದೇ ಇತರರನ್ನೂ ಬೆಳೆಸಿದ ಕೀರ್ತಿ ಕರ್ನಾಟಕ ಕರಾವಳಿಯ ಈ ಸಾಹಸಿಗೆ ಸಲ್ಲುತ್ತದೆ. ಅವರು ತಮ್ಮ ಅನುಭವದ ನೆಲೆಯಲ್ಲಿ ’ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ’ ಎಂಬುದನ್ನು ಕೃತಿಯಲ್ಲಿ ತಿಳಿಸಿದ್ದಾರೆ. ಅವರ ಅನುಭವಗಳನ್ನು ಪತ್ರಕರ್ತ ಜೋಗಿ ಅಕ್ಷರಕ್ಕಿಳಿಸಿದ್ದಾರೆ.
©2024 Book Brahma Private Limited.