“ನನ್ನದೆನ್ನುವುದು ಇದರಲ್ಲಿ ಏನೂ ಇಲ್ಲ. ಕನ್ನಡದ ಓದುಗರಿಗೆ ರತನ್ ಟಾಟಾ ಪ್ರೇರಣೆಯಾಗಲಿ ಎಂಬ ಏಕೈಕ ಉದ್ದೇಶದಿಂದ ಈ ಕೃತಿಯನ್ನು ರಚಿಸಲಾಗಿದೆ,” ಎನ್ನುತ್ತಾರೆ ಡಾ.ವಾಸುದೇವ ಶೆಟ್ಟಿ ಅವರು ತಮ್ಮ “ಉದ್ಯಮ ರತ್ನ ರತನ್ ಟಾಟಾ” ಕೃತಿಗೆ ಬರೆದ ಲೇಖಕರ ಮಾತು.
ಉದ್ಯಮಿಯಾಗುವವನು ದೊಡ್ಡದಾಗಿ ಕನಸು ಕಾಣಬೇಕು. ಮಹತ್ವಾಕಾಂಕ್ಷೆಯನ್ನು ಹೊಂದಿರಬೇಕು. ಮುನ್ನಡೆಯುವಾಗ ಎಡವಬಹುದು. ಆದರೆ ತಕ್ಷಣವೇ ಸಾವರಿಸಿಕೊಂಡು ಎದ್ದೇಳಬೇಕು ಎಂದು ಉತ್ಸಾಹ ತುಂಬುವ ಮಾತುಗಳನ್ನು ಹೇಳುತ್ತಿದ್ದ ಟಾಟಾ ಸಮೂಹದ ಮಹಾನ್ ಹಸ್ತಿ ರತನ್ ಟಾಟಾ ಇಂದು ನಮ್ಮ ನಡುವೆ ಇಲ್ಲ. ಅವರ ಅಗಲುವಿಕೆಯ ಎರಡೇ ದಿನಗಳಲ್ಲಿ ಚಿನ್ನಯ ಪ್ರಕಾಶನದ ಪ್ರಕಾಶಕ ಮಿತ್ರ ನವೀನ್ ಅವರು, ರತನ್ ಟಾಟಾರ ಬಗ್ಗೆ ಒಂದು ಪುಸ್ತಕ ಬರೆದು ಕೊಡಲು ಸಾಧ್ಯವೆ ಎಂಬ ಪ್ರಶ್ನೆಯನ್ನು ಇಟ್ಟರು. ಅದೂ ಹದಿನೈದು ದಿನಗಳೊಳಗೆ ಎಂದರು. ನಾನು ಹಿಂದು ಮುಂದು ಆಲೋಚಿಸದೆ, 'ಸರಿ' ಎಂದೆ. ಆದರೆ ಒಂದು ತಿಂಗಳು ಬೇಕು ಎಂದೆ. ಈಗ 'ಸರಿ' ಎನ್ನುವ ಸರದಿ ಅವರದಾಗಿತ್ತು.
ರತನ್ ಟಾಟಾರನ್ನು ಅವರ ನೆಚ್ಚಿನ ಸಹಾಯಕ ಶಂತನು ನಾಯ್ಡು 'ಲೈಟ್‌ಹೌಸ್' ಎಂದು ಕರೆದದ್ದು ಯಥಾಯೋಗ್ಯವಾಗಿದೆ. ಶ್ರೀಮಂತಿಕೆಯ ದರ್ಪ ಲವಲೇಶವೂ ಇಲ್ಲದ ಸರಳ ವ್ಯಕ್ತಿ.
ಯುವಜನತೆಯ ಕನಸುಗಳಿಗೆ ಬಣ್ಣ ತುಂಬಿ ಜೀವಸ್ಪರ್ಶ ನೀಡುವ ಕಲೆಗಾರ ಅವರಾಗಿದ್ದರು. ಏನಾದರೂ ಸಾಧಿಸಬೇಕು ಅಂದುಕೊಳ್ಳುವ ಯುವ ಪೀಳಿಗೆಗೆ ಅವರೊಂದು ಸ್ಫೂರ್ತಿಯಾಗಿದ್ದಾರೆ. ಬದುಕನ್ನು, ಕೆಲಸಗಳನ್ನು ಯುವಜನ ಅರಿಯುವ ಅಗತ್ಯವಿದೆ. ಅವರ ತರಾತುರಿಯಲ್ಲಿ ಹಲವು ಮೂಲಗಳಿಂದ ವಿಷಯಗಳನ್ನು ಕಲೆಹಾಕಿ ಇದನ್ನು ಸಿದ್ಧಪಡಿಸಿದ್ದೇನೆ. ನನ್ನದೆನ್ನುವುದು ಇದರಲ್ಲಿ ಏನೂ ಇಲ್ಲ. ಕನ್ನಡದ ಓದುಗರಿಗೆ ರತನ್ ಟಾಟಾ ಪ್ರೇರಣೆಯಾಗಲಿ ಎಂಬ ಏಕೈಕ ಉದ್ದೇಶದಿಂದ ಈ ಕೃತಿಯನ್ನು ರಚಿಸಲಾಗಿದೆ. ಇದನ್ನು ಪ್ರಕಟಿಸುತ್ತಿರುವ ಚಿನ್ಮಯ ಪ್ರಕಾಶನದ ನವೀನ್ ಟಿ. ಪುರುಷೋತ್ತಮ್ ರವರಿಗೆ ನನ್ನ ಕೃತಜ್ಞತೆಗಳು.
- ಡಾ.ವಾಸುದೇವ ಶೆಟ್ಟಿ
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.