ಸಂಕೀರ್ಣ ಕಥೆಗಳನ್ನು ಕನ್ನಡಕ್ಕೆ ಇವರೆಲ್ಲಾ ಒಗ್ಗಿಸಿರುವ ಪರಿಗೆ ಶರಣು


“ಅದೆಷ್ಟು ಪದರಗಳನ್ನು ಹೊಂದಿದ್ದ ಪುಸ್ತಕ ಎಂದರೆ ಓದಿದ್ದನ್ನು ಮನನ ಮಾಡಿಕೊಂಡು ನಂತರ ಮುಂದಿನ ಪುಟಗಳಿಗೆ ಹೋಗಬೇಕಾಗಿತ್ತು,” ಎನ್ನುತ್ತಾರೆ ಸಂಧ್ಯಾರಾಣಿ. ಅವರು ವಿವಿಧ ಲೇಖಕರ ಸಂಪಾದಕತ್ವದಲ್ಲಿ ಮೂಡಿಬಂದ “ಗಡಿಪಾರು ಮತ್ತು ಗದ್ದುಗೆ” ಕೃತಿ ಕುರಿತು ಬರೆದ ವಿಮರ್ಶೆ.

ಅಲ್ಬರ್ಟ್ ಕಮೂ – ಗಂಭೀರವಾಗಿ ಓದಲು ಪ್ರಾರಂಭಿಸಿದಾಗಿನಿಂದ ಆಗಾಗ ಮೆಚ್ಚಿಗೆ, ಗೌರವದ ದನಿಯಲ್ಲಿ ಕೇಳುತ್ತಿದ್ದ ಹೆಸರು. ಕೋವಿಡ್ ಸಮಯದಲ್ಲಿ ಹೆಚ್ ಎಸ್ ಆರ್ ದವರು ಅನುವಾದಿಸಿದ್ದ ಇವನ ಪ್ಲೇಗ್ ಕಾದಂಬರಿ ಓದಿ, ಅದರಲ್ಲಿ ಆಳವಾಗಿ ಮುಳುಗಿಹೋಗಿದ್ದೆ. ಕೋವಿಡ್ ಕಾಲಕ್ಕೂ ಅದಕ್ಕೂ ಒಂದು ಬೆಚ್ಚಿಬೀಳಿಸುವ ಸಾಮ್ಯ ಇತ್ತು. ಆ ಕೃತಿಯನ್ನು ಕಮೂ ಹಿಟ್ಲರ್ ನ ಆಕ್ರಮಣವನ್ನು ಕುರಿತು ಬರೆದಿದ್ದ ಎನ್ನುವ ಮಾತಿದೆ. ಒಂದು ಮಹಾಕೃತಿ ಕಾಲಕ್ಕೆ ತಕ್ಕಂತೆ ತನ್ನ ಒಳಗನ್ನು ಹೊಸಬೇಳಕಿನಲ್ಲಿ ತೋರುವುದು ಎಂದರೆ ಇದೇ ಇರಬೇಕು. ಇವನ ‘ದ ಔಟ್‌ಸೈಡರ್’ ಇಂಗ್ಲಿಷಿನಲ್ಲಿ ಓದಿದ್ದೆ.

ಅದೆಷ್ಟು ಪದರಗಳನ್ನು ಹೊಂದಿದ್ದ ಪುಸ್ತಕ ಎಂದರೆ ಓದಿದ್ದನ್ನು ಮನನ ಮಾಡಿಕೊಂಡು ನಂತರ ಮುಂದಿನ ಪುಟಗಳಿಗೆ ಹೋಗಬೇಕಾಗಿತ್ತು. ಕಮೂನ ಒಂದೆರಡು ಕಥೆಗಳನ್ನು ಮಾತ್ರ ಓದಿದ್ದ ನಾನು, ಮಿಕ್ಕ ಕಥೆಗಳನ್ನು ಓದುವುದನ್ನು ಕಾಲದಿಂದಲೂ ಮುಂದಕ್ಕೆ ಹಾಕುತ್ತಿದ್ದೆ. ಈಗ ನುಡಿ ಪ್ರಕಾಶನ ಇವನ ಎಲ್ಲಾ ಕಥೆಗಳ ಕನ್ನಡ ಅನುವಾದವನ್ನು ಪ್ರಕಟಿಸಿದೆ. ಪುಸ್ತಕದ ಹೆಸರು, ‘ಗಡಿಪಾರು ಮತ್ತು ಗದ್ದುಗೆ’. ಓದದೆ ಇರುವುದು ಹೇಗೆ?! ಒಟ್ಟು 6 ಕಥೆಗಳನ್ನು ಹೊಂದಿರುವ ಈ ಪುಸ್ತಕದ ಕಥೆಗಳನ್ನು ಬಸವರಾಜ ನಾಯ್ಕರ, ಎಸ್ ದಿವಾಕರ್, ಪ್ರಕಾಶ್ ನಾಯಕ್, ಜಯಶ್ರೀ ಕಾಸರವಳ್ಳಿ, ಸಹನಾ ಹೆಗಡೆ ಮತ್ತು ಸಂಯುಕ್ತ ಪುಲಿಗಲ್ ಅನುವಾದಿಸಿದ್ದಾರೆ.

ಸಂಕೀರ್ಣ ಕಥೆಗಳನ್ನು ಕನ್ನಡಕ್ಕೆ ಇವರೆಲ್ಲಾ ಒಗ್ಗಿಸಿರುವ ಪರಿಗೆ ಶರಣು. ಕಥೆಯನ್ನು ಪದಗಳಲ್ಲಿ ಅಷ್ಟೇ ಅಲ್ಲದೆ, ವಾತಾವರಣದ ಮೂಲಕವೂ ಕಟ್ಟುವ, ಅದಕ್ಕೆ ಹಲವು ಪದರಗಳನ್ನು ನೇಯುವ ಕಮೂನ ಕಲೆಯನ್ನು ಕಂಡು ಅಚ್ಚರಿ, ಬೆರಗು, ಮೆಚ್ಚುಗೆ, ಗೌರವ ಎಲ್ಲವೂ. ಒಂದೊಂದು ಕಥೆ ಒಂದೊಂದು ಕಾರಣಕ್ಕೆ ಇಷ್ಟವಾಯಿತು. ಅವು ಹುಟ್ಟಿಸುವ ಅಂತರ್ಮಥನ ಮತ್ತು ವಿಷಾದ ಸುಲಭಕ್ಕೆ ಮರೆಯುವಂತಹುದಲ್ಲ. ಥ್ಯಾಂಕ್ಯೂ ನುಡಿಪುಸ್ತಕ ಈ ಅನುವಾದಕ್ಕೆ!.

- ಸಂಧ್ಯಾರಾಣಿ

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...