ಸಮಾಜೋ ಅನುಭಾವಿಕ ಅಗತ್ಯದ ಪೂರೈಕೆ


"ದೇಹವನ್ನು ಕೇವಲ ಒಂದು ಮಾಧ್ಯಮವಾಗಿಸಿಕೊಳ್ಳುವ ಅಥವಾ ಮಾಧ್ಯಮವನ್ನಷ್ಟೇ ಆಗಿಸಿಕೊಳ್ಳಬೇಕಾಗುವ ಹಾಗೂ ಬುದ್ಧಿ ಮನಸ್ಸುಗಳನ್ನು ಜಾಗೃತವಾಗಿಸಿಕೊಳ್ಳುವ ಅವಧೂತಗುಣವು ಎಲ್ಲಾ ಬಗೆಯ ಅಭಿಮಾನಗಳನ್ನು ತ್ಯಾಗಮಾಡಿ, ಸತ್ಯದ ದಾರಿಯ ಮೂಲಕ ನಡೆದು ಅಂತಿಮ ಸತ್ಯದ ಗುರಿಯ ಕಡೆಗೆ ಮುಖಮಾಡಿ ನಡೆದು ತಲುಪುವಂತೆ ಪ್ರೇರೇಪಿಸುತ್ತದೆ. ಆದರೆ, ಈ ಅವಧೂತ ಪರಂಪರೆಯು ಉಂಟು ಮಾಡುವ ಜೀವನದರ್ಶನವು ಬೆರಗನ್ನುಂಟು ಮಾಡುತ್ತದೆ," ಎನ್ನುತ್ತಾರೆ ಮೃತ್ಯುಂಜಯ ರುಮಾಲೆ. ಅವರು ಡಾ.ಪಿ. ದಿವಾಕರ ನಾರಾಯಣ ಅವರ ‘ಅವಧೂತ ಪರಂಪರೆ ಮತ್ತು ಜೀವನ ದರ್ಶನ’ ಕೃತಿಗೆ ಬರೆದ ಮುನ್ನುಡಿ..

ಪರಮಾರ್ಥವನ್ನು ಗ್ರಹಿಸುವ ಮತ್ತು ಆವಾಹಿಸುವ ಅತ್ಯಂತ ಸ್ಥಿತಿ; ಅವಧೂತ ಪ್ರಜೆ ತುರೀಯಾವಸ್ಥೆಯ ಅನುಭಾವಿಕ ಹಾಗೂ ಯೌಗಿಕ ವಲಯದ ಆಂತರಂಗಿಕವಾದ ಈ ಹಂತವು ಎಲ್ಲಾ ಲೌಕಿಕ- ಭೌತಿಕ ಮಾನದಂಡಗಳನ್ನು ವಾಸ್ತವಗಳನ್ನು ನಿರಾಕರಿಸುತ್ತದೆ. ಜೀವನ ಮತ್ತು ಬದುಕು ಇವುಗಳು ಮನಷ್ಯನಿಗೆ ತಂದುಕೊಡುವ ಅಸ್ತಿತ್ವ ಮತ್ತು ಅರಿವು ಸಾರ್ಥಕತೆಗೆ, ಪರಿಪೂರ್ಣತೆಗೆ ಬಹುಮುಖ್ಯ ಮತ್ತು ಅವಶ್ಯ ಗುಣಗಳನ್ನು ತಂದುಕೊಡುತ್ತವೆ. ನಮ್ಮ ನಂಬಿಕೆಗಳಿಗೆ ದರ್ಶನ ಪರಿಣಾಮವಾದ ಭಕ್ತಿ ಭಾವುಕತೆಯ ಲೇಪನವನ್ನುಂಟು ಮಾಡುತ್ತಿರುವುದೇ ಇದರ ಶಕ್ತಿಯೂ ಆಗಿದೆ. ದೇಹವನ್ನು ಕೇವಲ ಒಂದು ಮಾಧ್ಯಮವಾಗಿಸಿಕೊಳ್ಳುವ ಅಥವಾ ಮಾಧ್ಯಮವನ್ನಷ್ಟೇ ಆಗಿಸಿಕೊಳ್ಳಬೇಕಾಗುವ ಹಾಗೂ ಬುದ್ಧಿ ಮನಸ್ಸುಗಳನ್ನು ಜಾಗೃತವಾಗಿಸಿಕೊಳ್ಳುವ ಅವಧೂತಗುಣವು ಎಲ್ಲಾ ಬಗೆಯ ಅಭಿಮಾನಗಳನ್ನು ತ್ಯಾಗಮಾಡಿ, ಸತ್ಯದ ದಾರಿಯ ಮೂಲಕ ನಡೆದು ಅಂತಿಮ ಸತ್ಯದ ಗುರಿಯ ಕಡೆಗೆ ಮುಖಮಾಡಿ ನಡೆದು ತಲುಪುವಂತೆ ಪ್ರೇರೇಪಿಸುತ್ತದೆ. ಆದರೆ, ಈ ಅವಧೂತ ಪರಂಪರೆಯು ಉಂಟು ಮಾಡುವ ಜೀವನದರ್ಶನವು ಬೆರಗನ್ನುಂಟು ಮಾಡುತ್ತದೆ.

ನಿಜವನ್ನು ಅರಿತ ಅವಧೂತ ಸಂದೇಶವನ್ನು ಸಮಾಜವು ಮುಕ್ತವಾಗಿ ಸ್ವೀಕರಿಸಿ ಪೂರ್ಣ ಪ್ರಮಾಣದ ತಾದಾತ್ಯಂತದಲ್ಲಿ ಸೇರಿಕೊಳ್ಳುವಂತೆ ಮಾಡುವಾಗ ಲೋಕದ ಮಾನದಂಡಗಳನ್ನು, ವಾಸ್ತವಗಳನ್ನು ನಿರಾಕರಿಸಿ ಅವಧೂತ ಪ್ರಜ್ಞೆಯನ್ನು ವಾಸ್ತದಲ್ಲಿರಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಅನುಭಾವದ ಅತ್ಯಂತಿಕ ಹಂತದ ಈ ಅವಧೂತ ಪರಂಪರೆಯು ಜಾತ್ಯತೀತ ವಿಸ್ತಾರದಲ್ಲಿ ತೊಡಗಿಸಿಕೊಂಡಿರುವುದು ಆಧುನಿಕವಾಗಿ ಗಮನಸೆಳೆಯುವಂಥದ್ದು, ವಾಸ್ತವವಾಗಿ ಬದುಕು- ಜೀವನ ಇವುಗಳನ್ನೇ ಮುಖ್ಯವಾಗಿರುವ ಅಥವಾ ಮುಖ್ಯವಾಗಿರಬೇಕಾದ ನಮ್ಮ ಸಂದರ್ಭದಲ್ಲಿ ಸಾಮಾಜಿಕವಾಗಿ ಸಹಬಾಳ್ವೆಯಂಥ ಒಂದು ಅವಶ್ಯಕತೆಯನ್ನು ಇದು ಪೂರೈಸುತ್ತದೆ.

ಅವಧೂತ ಪರಂಪರೆ ಮತ್ತು ಜೀವನದರ್ಶನದ ಮೂಲಕ ಡಾ. ಪಿ. ದಿವಾಕರ ನಾರಾಯಣ ಅವರು ವಿಶೇಷ ಅಧ್ಯಯನ ನಡೆಸಿ ಒಂದು ಶೈಕ್ಷಣೆಕ ಅಗತ್ಯವನ್ನು ನೆರವೇರಿಸಿದ್ದಾರೆ. ಕ್ಷೇತ್ರಕಾರ್ಯ ಅವಧೂತ ನೆಲೆಯ ಪ್ರತ್ಯಕ್ಷಗ್ರಹಿಕೆ, ಆ ಪ್ರಜ್ಞೆಯ ಅರಿವುದಾದರರೊಂದಿಗೆ ಮಾತುಕತೆ--ಸಂವಾದ, ತಜ್ಷರ ಸಂದರ್ಶನ, ವಿಶೇಷ ಸಂದರ್ಭಗಳಲ್ಲಿ ನಡೆಯುವ ಆಚರಣೆಗಳ ಆಳಚಿಂತನೆ, ಭಜನೆ-ಉತ್ಸವಗಳ ಹಿನ್ನಲೆ-ಪರಿಣಾಮ ಮೊದದಲಾದವುಗಳನ್ನು ಕುರಿತು ಡಾ.ಪಿ.ದಿವಾಕರ ನಾರಾಯಣ ಶ್ರಮವಹಿಸಿ ಅಧ್ಯಯನ ಮಾಡಿದ್ದಾರೆ. ಅವರ ಶ್ರಮ, ಆಸಕ್ತಿ, ಕ್ರಿಯಾಶೀಲತೆ, ಸಂಯಮ, ಶ್ರದ್ಧೆ, ಸಂಸ್ಕೃತಿ ಪ್ರೀತಿ, ಜೀವನಶ್ರದ್ಧೆ ಈ ಎಲ್ಲಾ ಗುಣಗಳು ಅಧ್ಯಯನದ ಲಕ್ಷಣಗಳಾಗಿವೆ.

ಅಧ್ಯಯನದ ವೈಶಿಷ್ಟ್ಯವೆಂದರೆ ಅವಧೂತ ಪ್ರಜ್ಞೆ ಮತ್ತು ದೇಸೀ ದರ್ಶನವನ್ನು ಅರಿಯಲು ಮಂಟೇಸ್ವಾಮಿ ಮತ್ತು ಮಲೇಮಾದೇಶ್ವರರನ್ನು ಆಯ್ಕೆ ಮಾಡಿರುವುದು ಬಹುವ್ಯಾಪ್ತಿಯಲ್ಲಿ ಆಧುನಿಕ ಸಂದರ್ಭದಲ್ಲಿಯೂ ಸ್ಪಂದಿಸಲ್ಪಟ್ಟು ಸಹ ಸೋಪಜ್ಷತೆಯನ್ನುಳಿಸಿಕೊಂಡಿರುವ ಈ ಎರಡು ನೆಲೆಗಳು ಖಚಿತ ಜ್ಞಾನವನ್ನು ಗ್ರಹಿಸಲು ಸಹಕಾರಿಯಾಗಿವೆ. ಅದೇ ರೀತಿಯಾಗಿ ಇತಿವೃತ್ತದ ಮೂಲಕ ಅವಧೂತ ಪ್ರಜ್ಞೆಯನ್ನು ಅರಿಯಲು ಚಿದಾನಂದಾವಧೂತ, ಕಡಕೋಳ ಮಡಿವಾಳಪ್ಪ, ಮಹಾಯೋಗಿ ಲಕ್ಷö್ಮವ್ವಾವಧೂತೆ, ಹೇರೂರು ವಿರೂಪಣ್ಣ, ಚೇಳಗುರ್ಕಿ ರ‍್ರಿತಾತ, ಹಂಪಿಯ ಶಿವರಾಮಾವಧೂತ ಕೊತ್ತಲಚಿಂತ ಹನುಮಂತಾವಧೂತ, ದಮ್ಮೂರು ವೆಂಕಾವಧೂತ ಇವರುಗಳ ದಟ್ಟ ಪ್ರಭಾವವಿರುವ ಅಂಬಾಮಠ,ಕಡಕೋಳ,ಆದವಾನಿ,ಕAಪ್ಲಿ,ಹೇರೂರು,ಚೇಳಗುರ್ಕಿ, ಹಂಪಿ,ಕೊತ್ತಲಚಿAತ, ದಮ್ಮೂರು-ಊರುಗಳ ದರ್ಶನ, ಸಂದರ್ಶನ, ಆಚಾರ ವಿಚಾರಗಳ ಪರಿಶೀಲನೆ ಮಾಡಿರುವುದು ನಿಶ್ಚಿತ ವಿವೇಷವನ್ನು ಸಾದರಪಡಿಸಲು ಸಹಕಾರಿಯಾಗಿದೆ,

ಮಠ, ಧರ್ಮಗಳಂಥ ಕರ್ಮ ಮತ್ತು ತತ್ತ್ವನಿಷ್ಠ ಸಂಸ್ಕೃತಿಯ ಧಾತುಗಳು ಮನುಷ್ಯನ ಆಧುನಿಕ ಸಂದರ್ಭದಲ್ಲಿ ಉಂಟಾಗಿರುವ ಉದ್ವೇಗ-ಕ್ಷೆÆÃಭೆಗಳಿಗೆ ಪರಿಹಾರಾತ್ಮಕವಾಗಿ ಯೋಜನೆ ರೂಪಿಸಿಕೊಳ್ಳುತ್ತಿರುವುದರಿಂದ ಪಂಥ-ಪAಥಗಳನ್ನು ವಿಚಾರಧಾರೆಗಳನ್ನು, ಆಚರಣೆಗಳನ್ನು ಸಮ್ಮಿಶ್ರಗೊಳಿಸಿಕೊಳ್ಳುವುದು ಸಹಜವೆನಿಸುತ್ತವೆ. ಆದರೆ, ಬದುಕನ್ನು ಒಂದು ನಿಯಂತ್ರಣ ಶಕ್ತಿಗೆ ಅಧೀನಗೊಳಿಸುವುದು ಇಲ್ಲಿ ಮಖ್ಯವೆನಿಸುತ್ತದೆ. ವ್ಯಾಪಕ ಹಿನ್ನೆಲೆಯಲ್ಲಿ ಸೂಕ್ಷö್ಮಗ್ರಹಿಕೆಯಲ್ಲಿ ಇದು ಅಪೇಕ್ಷಣೇಯವಾಗಿದೆ. ಹೀಗೆ ಗ್ರಹಿಸುತ್ತಿರುವುದು ಮತ್ತು ಗ್ರಹಿಸಬೇಕಾಗಿರುವುದು ಉಚಿತವಾಗಿದೆ.

ಅವಧೂತ ಪರಂಪರೆ ಮತ್ತು ಜೀವನ ದರ್ಶನ ಒಂದು ನಿಬಂಧ ಕೃತಿಯಾಗಿಯೂ ಮುಖ್ಯವಾಗಿದೆ. ಒಂದು ಸಮಾಜೋ ಅನುಭಾವಿಕ ಜ್ಞಾನವನ್ನು ದಾಖಲಿಸಿದ ಕೃತಿಯಾಗಿಯೂ ಮುಖ್ಯವಾಗಿದೆ. ಡಾ.ಪಿ. ದಿವಾಕರ ನಾರಾಯಣ ಅವರು ಅಧ್ಯಯನ ಮಾಡಿ ಈ ಎರಡೂ ಕಾರಣಗಳಿಗಾಗಿ ಅಭಿನಂದಗಳಿಗೆ ಅರ್ಹರು.

- ಡಾ. ಮೃತ್ಯುಂಜಯ ರುಮಾಲೆ

MORE FEATURES

ಕಡೆಗೂ ಸಾಮಾನ್ಯ ಮನುಷ್ಯರಿಗೆ ಉಳಿಯುವುದು ಬರಿಯ ವೇದನೆ ಮಾತ್ರ..

27-12-2024 ಬೆಂಗಳೂರು

"ಲೋಕವನ್ನೇ ನಡುಗಿಸಿದ ಕರೋನಾ ಕಾಲದಲ್ಲಿ ನಡೆದಿದೆ ಎಂದು ಈಗ ಬಗೆಯಲಾಗುತ್ತಿರುವ ಬ್ರಷ್ಟಾಚಾರದ ಕಾಳಮುಖದ ಪರಿಚಯ ಮತ್...

ಸತಿ ಎನ್ನುವ ಪದ್ಧತಿ ಹಿಂದೂ ಧರ್ಮದ ನಿಜವಾದ ಆಚರಣೆಯೇ?

27-12-2024 ಬೆಂಗಳೂರು

“ತಮ್ಮ ವೃತ್ತಿ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯ ಹಿಂದೆ ಬಿದ್ದ ಡಾ. ಸೂರ್ಯಕುಮಾರ್ ಅವರು, ಸಲೀಸಾಗಿ ಓದಿಸಿಕೊಂ...

ಅನುವಾದ ‘ಹೃದಯ ಸಮುದ್ರ’ವನ್ನೇ ಕಲಕುತ್ತೆ

27-12-2024 ಬೆಂಗಳೂರು

“ಇವ್ರು ಹೆಣಗಳ ಹಿಂದೋ ಇಲ್ಲಾ ಹೆಣಗಳೇ ಇವರ ಹಿಂದೋ ಓಡಾಡಿದಂಗಿದೆ. ಜಗತ್ತಿನ ಖಿನ್ನತೆಗೊಳಗಾದ ಮಹಾಕವಿಯ, ತುಂಬಾ ಸರ...