"ಅಧಿಕಾರಶಾಹಿ ವ್ಯವಸ್ಥೆ, ಧರ್ಮ ಜಿಜ್ಞಾಸೆ, ಕಾಡಿನ ಜನರು ಮತ್ತು ಅವರ ಆಚರಣೆಗಳು, ನಾಡಿನ ಜನರ ಮನಸ್ಥಿತಿಗಳು, ಪ್ರಭುತ್ವ ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವುದು, ಗಂಡು ಹೆಣ್ಣಿನ ನಡುವಿನ ಭಾವನೆಗಳು, ಹೀಗೆ ಹಲವು ವಿಷಯಗಳನ್ನು ಒಂದಕ್ಕೊಂದು ಪೋಣಿಸುವ ರೀತಿ ವಿಶಿಷ್ಟವಾಗಿದೆ," ಎನ್ನುತ್ತಾರೆ ಸಂಜಯ್ ಮಂಜುನಾಥ್. ಅವರು ‘ರೇಷ್ಮೆ ಬಟ್ಟೆ’ ಕಾದಂಬರಿ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ..
ವ್ಯಾಪಾರಕ್ಕಾಗಿ ಉದಯಿಸಿದ ಹೊಸ ದಾರಿಯೊಂದು ಜನರ ಜೀವನವನ್ನೇ ಹೇಗೆ ಅಲ್ಲೋಲಕಲ್ಲೋಲ ಮಾಡುತ್ತದೆ ಎಂಬುದು ಅಚ್ಚರಿ ತರಿಸುತ್ತದೆ ರೇಷ್ಮೆಬಟ್ಟೆ ಕೃತಿಯನ್ನ ಓದುವಾಗ.
ಮೂರನೇ ಶತಮಾನದ ಕಾಲಘಟ್ಟದಲ್ಲಿ ರೇಷ್ಮೆ ಬಟ್ಟೆ ವ್ಯಾಪಾರದಿಂದ ಉಂಟಾದ ಜಾಗತೀಕರಣವನ್ನು ಸಾಮಾನ್ಯ ಜನಗಳ ದೃಷ್ಟಿಯಲ್ಲಿ ಕಟ್ಟಿ ಕೊಡುತ್ತಾ, ಅದು ತಂದೊಡ್ಡಿದ ಸುಖ ಸಮೃದ್ಧಿಯ ಜೊತೆಗೆ ಅದರಿಂದುಂಟಾದ ತಲ್ಲಣಗಳನ್ನೂ ತಿಳಿಸುತ್ತದೆ ಈ ಕೃತಿ.
ಅಧಿಕಾರಶಾಹಿ ವ್ಯವಸ್ಥೆ, ಧರ್ಮ ಜಿಜ್ಞಾಸೆ, ಕಾಡಿನ ಜನರು ಮತ್ತು ಅವರ ಆಚರಣೆಗಳು, ನಾಡಿನ ಜನರ ಮನಸ್ಥಿತಿಗಳು, ಪ್ರಭುತ್ವ ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವುದು, ಗಂಡು ಹೆಣ್ಣಿನ ನಡುವಿನ ಭಾವನೆಗಳು, ಹೀಗೆ ಹಲವು ವಿಷಯಗಳನ್ನು ಒಂದಕ್ಕೊಂದು ಪೋಣಿಸುವ ರೀತಿ ವಿಶಿಷ್ಟವಾಗಿದೆ.
ಕೃತಿಯಲ್ಲಿ ಉಲ್ಲೇಖಿಸಿರುವ ಅನೇಕ ಉಪಮೇಯಗಳು ಆಹ್ಲಾದವನ್ನುಂಟು ಮಾಡುತ್ತವೆ.
ಬೌದ್ಧ ಧರ್ಮದ ವಿವರಣೆ, ರೇಷ್ಮೆಬಟ್ಟೆಯ ಉತ್ಪಾದನೆ, ಚೀನಾ ದೇಶವನ್ನ ಪ್ರಸ್ತುತಪಡಿಸಿರುವ ರೀತಿ ಮತ್ತು ಕೃತಿಯಲ್ಲಿನ ಅನೇಕ ಪಾತ್ರಗಳು ಅದರಲ್ಲೂ ಸಗನೇಮಿ, ಹವಿನೇಮ, ಜ್ಞಾನಸೇನ, ಬುದ್ಧಮಿತ್ರ ಮಿತ್ರವಂದಕ, ಮಧುಮಾಯ ಪಾತ್ರಗಳು ಸೊಗಸಾಗಿ ಮೂಡಿ ಬಂದಿವೆ.
ಕಥೆಯ ಓಘಕ್ಕೆ ತೊಂದರೆ ಕೊಡದಿದ್ದರೂ, ಅನೇಕ ವಿವರಗಳು ಬೇಕಿರಲಿಲ್ಲ ಎಂದೆನಿಸಿತು ಓದುವಾಗ ಮತ್ತು ಅದರಿಂದಾಗಿ ಒಟ್ಟಾರೆ ಕಥೆಯ ರಸಸ್ವಾದ ಕಮ್ಮಿಯಾಯಿತು ಎಂಬುದು ನನ್ನ ಕೊಸರು.
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.