“ಹೊಸದೊಂದೇನಾದರೂ ಹೇಳುವ ತುಡಿತ ಹೊಂದಿರುವ ದೇಸಾಯಿಯವರು ಸೊಳ್ಳೆಯ ಲೋಕದ ದರ್ಶನ ಮಾಡಿಸಿದ್ದಾರೆ. ಸಮ್ಮು ಎಂಬ ಪ್ರಥಮ ಪುರುಷನ ಮೂಲಕ ಹೇಳುತ್ತ ಹೋಗುವ ಕಥೆ ಸೊಳ್ಳೆಯ ಲೋಕದ ಹಲವಾರು ವಿಚಾರಗಳ ನಿಗೂಢಗಳನ್ನು ಪ್ರವೇಶಿಸುತ್ತದೆ. ಎಲ್ಲಿಯೂ ನಿಲ್ಲಿಸದೇ ಓದಲು ಖುಷಿಯೆನಿಸುತ್ತದೆ”, ಎನ್ನುತ್ತಾರೆ ಶ್ರೀಧರ ಗಸ್ತಿ ಧಾರವಾಡ. ಅವರು ಗುಂಡುರಾವ್ ದೇಸಾಯಿ ಅವರ "ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು" ಕೃತಿ ಕುರಿತು ಬರೆದ ವಿಮರ್ಶೆ.
ಗುಂಡುರಾವ್ ದೇಸಾಯಿಯವರ "ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು" ಮಕ್ಕಳ ಕಾದಂಬರಿಯನ್ನು ಓದಿದೆ. ಓದುತ್ತ ಹೋದಂತೆ ಮನಸ್ಸಿಗೆ ಮುದ ನೀಡುವ ಹಲವಾರು ಸಂಗತಿಗಳು ಕುತೂಹಲ ಮೂಡಿಸಿದವು. ಈಗಾಗಲೇ ಮಕ್ಕಳೇನು ಸಣ್ಣವರಲ್ಲ ಕೃತಿಯ ಮೂಲಕ ಹೊಸದನ್ನು ತಿಳಿಸಿರುವ ಇವರು ಇದೀಗ ಫ್ಯಾಂಟಸಿ ಜಗತ್ತನ್ನು ಪ್ರವೇಶೀಸುವ ಮೂಲಕ "ಸೋಳ್ಳೆ ಫ್ರೆಂಡು ಒಳ್ಳೆ ಫ್ರೆಂಡು" ಕೃತಿಯ ಮೂಲಕ ಓದುಗರನ್ನು ಆವರಿಸಿಕೊಂಡಿದ್ದಾರೆ. ಹೊಸದೊಂದೇನಾದರೂ ಹೇಳುವ ತುಡಿತ ಹೊಂದಿರುವ ದೇಸಾಯಿಯವರು ಸೊಳ್ಳೆಯ ಲೋಕದ ದರ್ಶನ ಮಾಡಿಸಿದ್ದಾರೆ. ಸಮ್ಮು ಎಂಬ ಪ್ರಥಮ ಪುರುಷನ ಮೂಲಕ ಹೇಳುತ್ತ ಹೋಗುವ ಕಥೆ ಸೊಳ್ಳೆಯ ಲೋಕದ ಹಲವಾರು ವಿಚಾರಗಳ ನಿಗೂಢಗಳನ್ನು ಪ್ರವೇಶಿಸುತ್ತದೆ. ಎಲ್ಲಿಯೂ ನಿಲ್ಲಿಸದೇ ಓದಲು ಖುಷಿಯೆನಿಸುತ್ತದೆ.
ಶಾಲೆಯಲ್ಲಿ ಇಂಗ್ಲೀಷ್ ಸರ್ ಒತ್ತಡ, ಅವರ ಬಿಗಿ ನಿಲುವು ವಿಜ್ಞಾನ ಶಿಕ್ಷಕರ ಪ್ರೊಜೆಕ್ಟ್ ಮಾಡಿಸುವ ಕಟ್ಟುನಿಟ್ಟಿನ ಕರಾರುಗಳು, ಅಪ್ಪನ ಅಂಕಗಳಿಕೆಯ ಒತ್ತಡಗಳು ಕಥಾ ನಾಯಕನಾದ ಸಮ್ಮುವಿಗೆ ಕಿರಿ ಕಿರಿ ಮಾಡದೇ ಇರುವುದಿಲ್ಲ. ಈ ಮಧ್ಯೆ ಅಭ್ಯಾಸ ಮಾಡುವಾಗ ಸೊಳ್ಳೆಗಳ ಕಾಟ ಶುರುವಾಗುವುದರೊಂದಿಗೆ ಸೊಳ್ಳೆ ಫ್ರೆಂಡಿನ ಪ್ರವೇಶವಾಗುತ್ತದೆ. ಸೊಳ್ಳೆಗಳ ಕಿರಿ ಕಿರಿ ನಡುವೆ ಒಂದು ಸೊಳ್ಳೆ ಮಾತನಾಡಿಸುವ ಸೋಜಿಗದ ಫ್ಯಾಂಟಸಿ ಲೋಕ ತೆರೆದುಕೊಳ್ಳುತ್ತದೆ. ಸೊಳ್ಳೆಯೊಂದು ಆತ್ಮೀಯವಾಗಿ ಸಮ್ಮುವಿಗೆ ಹತ್ತಿರವಾಗಿ ಮಾತನಾಡುವ ಮೂಲಕ ತನ್ನ ಜಗತ್ತಿನ ನಾನಾ ಮುಖಗಳನ್ನು ತೋರಿಸುತ್ತದೆ. ಆಲಸಿಯಾಗಿದ್ದ ಸಮ್ಮುವಿನ ಮುಖದಲ್ಲಿ ನಗುವನ್ನು ತರುವ ಮೂಲಕ ಪಾಲಕ ಮತ್ತು ಶಿಕ್ಷಕರನ್ನು ಹತ್ತಿರವಾಗಿಸುತ್ತದೆ.
ಸಮ್ಮುವಿನ ವ್ಯಕ್ತಿತ್ವದಲ್ಲಿ ಬಹಳಷ್ಟು ಬದಲಾವಣೆ ಕಾಣುವ ಮೂಲಕ ಸ್ನೇಹಿತ ಸೊಳ್ಳೆ ಫ್ರೆಂಡೊಂದು ಸ್ನೇಹಿತನಿಗೆ ಬೆನ್ನೆಲುಬಾಗಿ ನಿಲ್ಲುವ ತಾರ್ಕಿಕ ನಿಲುವೊಂದು ಕುತೂಹಲ ಮೂಡಿಸುತ್ತದೆ. ಸಮ್ಮುವೇ ಸೊಳ್ಳೆಯಾಗಿ ಅನೇಕ ಸಾಮಾಜಿಕ ನ್ಯೂನ್ಯತೆಗಳನ್ನು ಸರಿಪಡಿಸುವ ಕುತೂಹಲಕಾರಿ ಸಂಧರ್ಭಗಳು ಕಂಡುಬರುತ್ತದೆ. ಅನ್ಯ ಲೋಕದ ಗ್ರಹಗಳ ಪ್ರವೇಶದೊಂದಿಗೆ ಹೊಸ ವಿಚಾರಗಳನ್ನು ತಿಳಿಸುವ ಮೂಲಕ ಹೊಸ ಹೊಸದನ್ನು ತಿಳಿಸುವ ಒಂದು ಅತ್ಯುತ್ತಮ ಕೃತಿ. ನೀವು ಸಹ ಪುಸ್ತಕ ಖರೀದಿಸಿ ಓದಿ...
- ಶ್ರೀಧರ ಗಸ್ತಿ, ಧಾರವಾಡ
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.