"ನಮ್ಮ ಪುರಾತನ ಪತ್ರಿಕೋದ್ಯಮಿಗಳು ಮತ್ತು ಸಾಹಿತಿಗಳು ಹೇಗೆ ಹೆಗಲಿಗೆ ಹೆಗಲು ಹಚ್ಚಿ ದುಡಿದರು ಎಂಬುದನ್ನು ಅರಿತಾಗ ಶಿರ ಕೃತಜ್ಞತೆಯಿಂದ ಬಾಗುತ್ತದೆ,"ಎನ್ನುತ್ತಾರೆ ಡಾ. ವಾಸುದೇವ ಶೆಟ್ಟಿ ಅವರು ತಮ್ಮ "ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ" ಕೃತಿ ಕುರಿತು ಬರೆದ ಲೇಖಕರ ಮಾತು.
ಇದೆಲ್ಲ ಆಗಿ ಹೋಗಿದ್ದು ನಿಜವೆ ಎಂದು ಒಮ್ಮೆ ಹಿಂದಕ್ಕೆ ಕಣ್ಣು ಹಾಯಿಸಿದರೆ ನನಗೇ ಆಶ್ಚರ್ಯ.1985ರಲ್ಲಿ ಎಂ.ಎ. ಮುಗಿಸಿದಾಗ ಪಿಎಚ್.ಡಿ. ಮಾಡಬೇಕೆಂಬ ಆಸೆ ಕೊನರಿತ್ತು. ಆದರೆ, ಮೊದಲು ಲೈಫಲ್ಲಿ ಸೆಟ್ಸ್ ಆಗಿ. ಪಿಎಚ್.ಡಿ. ಯಾವತ್ತೂ ಮಾಡಬಹುದು ಎಂದು ನನ್ನ ಗುರುಗಳಾದ ಡಾ.ಎಂ.ಎಂ.ಕಲಬುರ್ಗಿಯವರು ಹೇಳಿದ ಮಾತಿನಿಂದ ತಕ್ಷಣ ಪಿಎಚ್.ಡಿ. ನೋಂದಣಿ ಮಾಡಿಸಲಿಲ್ಲ. ಈ ನಡುವೆ ಜೀವನ ನಾಟಕದಲ್ಲಿ ಅನೇಕ ಪಾತ್ರಗಳನ್ನು ಧರಿಸಬೇಕಾಗಿ ಬಂತು. ಅಂತಿಮವಾಗಿ ಕನ್ನಡಪ್ರಭ ಪತ್ರಿಕೆಯನ್ನು 1997ರಲ್ಲಿ ನಾನು ಸೇರಿದಾಗ ಲೈಫಲ್ಲಿ ಸೆಟ್ಸ್ ಆದ ಭಾವನೆ ಬಂತು. ಈ ನಡುವೆ ಗಂಭೀರ ಓದದು ಕೈಬಿಟ್ಟು ಹೋಗಿತ್ತು. ಅದೆಷ್ಟೋ ಹೊಸ ಹೊಸ ವಿಚಾರಧಾರೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದವು. ಅದೆಷ್ಟೋ ಹೊಸ ಪ್ರತಿಭೆಗಳು ಉದಯಿಸಿದ್ದವು. ಇವರನ್ನೆಲ್ಲ ಓದಬೇಕು ಅನ್ನಿಸಿತು. ಬರೀ ಓದಬೇಕು ಅಂದುಕೊಂಡರೆ ಸಾಲುವುದಿಲ್ಲ. ಅದಕ್ಕೊಂದು ಒತ್ತಡವನ್ನು ನಮಗೆ ನಾವೇ ಹೇರಿಕೊಳ್ಳದಿದ್ದರೆ ಅದು ಸಾಧ್ಯವಾಗುವುದೇ ಇಲ್ಲ. ಓದಿಗೆ ಒತ್ತಡ ಹೇರಿಕೊಳ್ಳುವ ಒಂದು ಉಪಾಯವಾಗಿ ಪಿಎಚ್.ಡಿ.ಗೆ ನೋಂದಣಿ ಮಾಡುವ ಆಲೋಚನೆ ಮಾಡಿದೆ. ನನ್ನ ವೃತ್ತಿಗೂ ಮೂಲ ಪ್ರವೃತ್ತಿಗೂ ಬೆಸುಗೆಯಾಗುವಂಥ ವಿಷಯವನ್ನು ಹುಡುಕಿದಾಗ ದೊರೆತದ್ದು 'ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ'. ನಮ್ಮ ಪುರಾತನ ಪತ್ರಿಕೋದ್ಯಮಿಗಳು ಮತ್ತು ಸಾಹಿತಿಗಳು ಹೇಗೆ ಹೆಗಲಿಗೆ ಹೆಗಲು ಹಚ್ಚಿ ದುಡಿದರು ಎಂಬುದನ್ನು ಅರಿತಾಗ ಶಿರ ಕೃತಜ್ಞತೆಯಿಂದ ಬಾಗುತ್ತದೆ.
1999ರಲ್ಲಿ ಇದನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಂದಣಿ ಮಾಡಿಸುವುದಕ್ಕೆ ಹೋದಾಗ ನನಗೆ ಮಾರ್ಗದರ್ಶಕರಾಗಲು ಡಾ. ಮೋಹನ್ ಕುಂಟಾರ್ ಅವರು ಒಪ್ಪಿಕೊಂಡಿದ್ದು ನನ್ನ ಸೌಭಾಗ್ಯ. ಅಡಿಗಡಿಗೆ ಅವರು ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ಅವರಲ್ಲಿದ್ದ ಅನೇಕ ಅಮೂಲ್ಯ ಗ್ರಂಥಗಳನ್ನು ಕೊಟ್ಟಿದ್ದಾರೆ.
ಈ ಅಧ್ಯಯನದ ಅವಧಿಯಲ್ಲಿ ನೆರವಾದವರು ನೂರಾರು ಜನ. ಧಾರವಾಡದ ವಿದ್ಯಾವರ್ಧಕ ಸಂಘದ ಸಿಬ್ಬಂದಿ, ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದ ಸಿಬ್ಬಂದಿ ಅಗತ್ಯ ಪುಸ್ತಕ ಮತ್ತು ನಿತಕಾಲಿಕೆಗಳನ್ನು ಓದುವುದಕ್ಕೆ ಅವಕಾಶಮಾಡಿಕೊಟ್ಟರು. ಡಾ.ಸರಜೂ ಕಾಟ್ಕರ್ ಅವರು ತಮ್ಮಲ್ಲಿಯ ನೂರಾರು ಸಾಹಿತ್ಯ ಪತ್ರಿಕೆಗಳನ್ನು ಓದುವುದಕ್ಕೆ ಕೊಟ್ಟರು. ಬೆಟಗೇರಿ ಕೃಷ್ಣಶರ್ಮರ ಮಗ ಸುರೇಶ ಬೆಟಗೇರಿ ಧಾರವಾಡದ ತಮ್ಮ ನಿವಾಸದಲ್ಲಿ ಜಯಂತಿಯ ಹಳೆಯ ಸಂಪುಟಗಳನ್ನು ನೋಡುವುದಕ್ಕೆ ಕೊಟ್ಟರು.
- ಡಾ. ವಾಸುದೇವ ಶೆಟ್ಟಿ.
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.