ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...


"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ಮುಗಿಸಿ 9ಕ್ಕೆ ಕಾಲಿಟ್ಟಿದ್ದೆ. ಅ ನನ್ನ ವಯಸ್ಸಿಗೆ ಈ ಪುಸ್ತಕದ ವ್ಯಾಪ್ತಿ ಬಹು ದೊಡ್ಡದು, ಅಂತ ತಿಳಿಯದಲೇ ಓದಲು ಶುರು ಮಾಡಿದ್ದೆ ಆಗ ಅರ್ಥವಾದ ವಿಷಯಗಳು ತೀರಾ ಕಮ್ಮಿ, ಕತೆಯ ನೆನಪಿತ್ತು ಪಾತ್ರಗಳ ನೆನಪು ಇತ್ತು, ಅವುಗಳ ಸಂಬಂಧಗಳ ನೆನಪಿತ್ತು....," ಎನ್ನುತ್ತಾರೆ ಮಂಜುಳಾ ಅಜಯ್ ಭಾರದ್ವಜ್. ಅವರು ಎಸ್.ಎಲ್. ಭೈರಪ್ಪ ಅವರ ‘ಜಲಪಾತ’ ಕೃತಿ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ನಾನು ಯಾವುದೇ ಪುಸ್ತಕವನ್ನು ಒಂದಕ್ಕಿಂತ ಹೆಚ್ಚು ಭಾರೀ ಓದಲು ಇಚ್ಛೆಸೋಲ್ಲ ಕಾರಣವಿಷ್ಟೇ, ಅದೇ ಸಮಯದಲ್ಲಿ ಮತ್ತೊಂದು ಪುಸ್ತಕ ಓದಬಹುದಲ್ಲ ಅಂತ, ಓದಿರುವುದನ್ನೇ ಯಾಕೇ ಪುನಃ ಓದಬೇಕು? ಕಥೆಯ ಸಾರಾಂಶ ತಿಳಿದೇ ಇರುತ್ತೆ, ಪಾತ್ರಗಳ ಹೆಸರು ಮರೆತಿರಬಹುದು ಅನ್ನುವ ಕಾರಣಕ್ಕೆ ಎರಡು ಬಾರೀ ಯಾವುದೇ ಪುಸ್ತಕವನ್ನು ಓದಲು ಇಚ್ಛೆಸೋಲ್ಲ ಅದ್ರೆ ಈ ಪುಸ್ತಕದಲ್ಲಿ ನನ್ನ ನಿಯಮವನ್ನು ನಾನೇ ಮುರಿಯಬೇಕಾಗಿ ಬಂತು...

ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ಮುಗಿಸಿ 9ಕ್ಕೆ ಕಾಲಿಟ್ಟಿದ್ದೆ. ಅ ನನ್ನ ವಯಸ್ಸಿಗೆ ಈ ಪುಸ್ತಕದ ವ್ಯಾಪ್ತಿ ಬಹು ದೊಡ್ಡದು, ಅಂತ ತಿಳಿಯದಲೇ ಓದಲು ಶುರು ಮಾಡಿದ್ದೆ ಆಗ ಅರ್ಥವಾದ ವಿಷಯಗಳು ತೀರಾ ಕಮ್ಮಿ, ಕತೆಯ ನೆನಪಿತ್ತು ಪಾತ್ರಗಳ ನೆನಪು ಇತ್ತು, ಅವುಗಳ ಸಂಬಂಧಗಳ ನೆನಪಿತ್ತು....

ಆದರೇ ಅವುಗಳ ಸಂಘರ್ಷಗಳು ಅರ್ಥವಾಗಿರಲಿಲ್ಲ...

"ಜಲಪಾತ" ಸಾಮಾನ್ಯ ಅರ್ಥದಲ್ಲಿ ಬಹು ಎತ್ತರದಿಂದ ಕೆಳಗಿನ ಪ್ರಪಾತಕ್ಕೆ ಬೀಳುವ ನೀರು ಅಷ್ಟೇ...

ಆದರೇ ಆ ನೀರು ಎಲ್ಲೋ ಹುಟ್ಟು ಪಡೆದು ತನ್ನದೇ ಒಂದು ಮಾರ್ಗ ಮಾಡಿಕೊಂಡು ಒಟ್ಟಾಗಿ ಅಷ್ಟು ಎತ್ತರದಿಂದ ಕೆಳಗೆ ಬಿದ್ದರು ಅಲ್ಲೇ ಇಂಗಿಹೋಗದೆ ಮತ್ತೆ ಹೊಸದೊಂದು ಮಾರ್ಗವಾಗಿ ಮಾಡಿಕೊಂಡು ಮುನ್ನಡೆಯಬೇಕು ಸತತವಾಗಿ, ಎಲ್ಲಿಯೂ ನಿಲ್ಲದೆ, ಮತ್ತೆಲ್ಲೋ ಇಂಗಿಹೋಗದಂತೆ ನಡೆಯುತ್ತಲೇ ಇರಬೇಕು.....

ಇಲ್ಲಿ ಕತೆಯ ಸಾರವು ಇದೆ ಹುಟ್ಟು, ಜೀವನ, ಮತ್ತು ಮರು ಸೃಷ್ಟಿ...

ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯು ತನ್ನ ಮುಂದಿನ ಪೀಳಿಗೆಯನ್ನು ಮರುಸೃಷ್ಟಿ ಮಾಡಲೆಬೇಕು ಅದೇ ಅದು ಪ್ರಕೃತಿಗೆ ನೀಡುವ ಕೊಡುಗೆ, ಅದೇ ಕೊಡುಗೆಯಿಂದಲೇ ಭೂಮಿಯ ಮೇಲೆ ಇಂದಿಗೂ ಕಾಡು, ಪ್ರಾಣಿ, ಪಕ್ಷಿ, ಮಾವನ, ಕ್ರಿಮಿ ಕೀಟ ಎಲ್ಲವೂ ಇರುವುದು ಸಾಕ್ಷಿ...

ಯಾವುದೇ ಒಂದು ಜೀವಿಯು ತನ್ನ ಮರುಸೃಷ್ಟಿಯನ್ನು ನಿಲ್ಲಿಸಿದರೆ ಅಲ್ಲಿಗೆ ಅ ಜೀವಿಯ ಅಂತ್ಯವಾದಂತೆ ಸರಿ, ಆದರೇ ಇತರ ಜೀವಿಗಳಂತೆ, ಬುದ್ದಿ ಜೀವಿಯಾದ ಮನುಷ್ಯನು ತನ್ನ ಅನ್ನುವಂಶಿಯಾತೆಗೆ ಅನುಗುಣವಾಗಿ ಮಾತ್ರ ಉತ್ಕೃಷ್ಟ ಮಟ್ಟದ ತಳಿಗಳನ್ನೇ ಭೂಮಿಗೆ ತರಲು ಇಚ್ಛೆಸಿದರೆ? ಜಗತ್ತಿನ ಅರ್ಧಕ್ಕರ್ದ ದಂಪತಿಗಳಿಗೆ ಮಕ್ಕಳನ್ನು ಹಡೆಯುವ ಭಾಗ್ಯವೇ ಇರುವುದಿಲ್ಲ, ಆದರೇ ಇದೆ ಸರಿಯಾದ ಕ್ರಮ ಅಂತ ನಂಬಿದ ಡಾ. ನಾಡಗೌಡ, ಹೆಣ್ಣದವಳು ಒಂದಾದ್ರು ಹಡೆಯಲೇಬೇಕು ಎಂದು ನಂಬಿದ ಅವ್ರ ಪತ್ನಿ ಸುಧಾಬಾಯಿಯ ತಾಯ್ತಾನವನ್ನೇ ಕಿತ್ತುಕೊಂಡಿದ್ದು ಎಷ್ಟು ಸರಿ? ಅಂತ ನಮ್ಮಲೇ ಪ್ರಶ್ನೆ ಮೂಡುತ್ತದೆ.

-----

ಮುಂಬಯಿಯೆಂಬ ಮಹಾನಗರ ತನ್ನೆಡೆಗೆ ಎಲ್ಲಾರನ್ನು ಸೆಳೆಯುತ್ತದೆ ಸೆಳೆತಕ್ಕೆ ಒಳಗಾಗಿ ಬಂದವರೇನೆಲ್ಲ ತನ್ನೊಳಗೆ ಸೇರಿಸಿಕೊಳುತ್ತದೆ ಆದರೇ ನಗರವು ಅದರೊಳಗೆ ಇರುವ ಸಮುದ್ರದಷ್ಟು ವಿಶಾಲವಾಗಿರದ ನಗರದ ಸಮುದ್ರದ ಅಂಚಿನ ಕೀಷ್ಕಿಂದೆಯಂತ ಮನೆಗಳಲ್ಲಿ, ದಿನ ದಿನ ಏರುತ್ತಿರುವ ಹಣ ದುಬ್ಬರದ ನಡುವೆ ಮನೆಯೆಂದರೆ ಕನಿಷ್ಠಪಕ್ಷ ನಾಲ್ಕದ್ರೂ ಮಕ್ಕಳು ಇರ್ಬೇಕು, ಆದರೇ ಬರೀ ಹಡೆಯುವುದಲ್ಲ ಹಡೆದ ಮಕ್ಕಳಿಗೆ ಸರಿಯಾದ ಆಹಾರ ವಿದ್ಯಾಭ್ಯಾಸ ಎಲ್ಲವನ್ನು ಸರಿಯಾದ ಕ್ರಮದಲ್ಲಿ ಕೊಡಿಸಬೇಕು ಎನ್ನುವ ವಸುಧ ಮತ್ತು ಶ್ರೀಪತಿ ದಂಪತಿಗಳು...

ನೈಜ ಕಲೆಯೂ ಎಂದಿಗೂ ಆತುರವಾಗಿ ಬೆಳೆಯು ತಿರುವ ಎಲ್ಲರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಎಂದಿಗೂ ನಮ್ಮದಾಗದ ಮುಂಬಯಿಗಿಂತ, ಬಿಟ್ಟು ಬಂದರು ಇಂದಿಗೂ ನಮ್ಮದೇ ಆಗಿರುವ ಹಳ್ಳಿಯ ಜೀವನದಲ್ಲಿ ಮಾತ್ರವೇ ನೈಜವಾದ ಕಲೆ ಹುಟ್ಟುವುದು ನಗರಿಕರಣಕ್ಕೆ ಒಳಗಾಗದೆ ಇನ್ನು ಪರಸ್ಪರ ಸಹಾಯ, ಸಹಕಾರ ಮಾನವೀಯತೆಗೆ ಹೆಸರಾದ ಹಳ್ಳಿಗಳಲ್ಲಿ ಜೀವಿಸುವುದೇ ಸುಖಕರವೆಂದು ತಿಳಿದ ವಸುಧ ಮತ್ತು ಶ್ರೀಪತಿದಂಪತಿಗಳು ಮಹಾನಗರವನ್ನು ಬಿಟ್ಟು ಹಳ್ಳಿಗೆ ಬಂದು ಇಲ್ಲಿ ಇರಲಾರದೆ ಅಲ್ಲಿ ಹೋಗಲಾರದ ಪರಿಸ್ಥಿತಿಯಲ್ಲಿ ಚಡಪಡಿಸುವಂತದ ಪರಿಸ್ಥಿತಿ, ದೂರದ ಊರಿನ ಕಷ್ಟಗಳಿಗಿಂತ ಅಲ್ಲಿನ ಅಂದಚೆಂದ ಮಾಯೆಯನ್ನೇ ಅಸ್ವಾದಿಸಲು ಇಷ್ಟಪಡುವ ಜನ ಸಮೂಹ..

ನಿಜವಾದ ಕಲೆಯ ಮಾನದಂಡ ಬರಿಯ ದುಡ್ಡೆಂದು ತಿಳಿದ ಅರಸಿಕರು, ಉನ್ನತವಾದ ಕಲೆ ಹುಟ್ಟುವುದು ಎಷ್ಟು ಕಷ್ಟವೋ, ಅದರೆ ಅ ಕಲೆಯ ಬಗ್ಗೆ ತಿಳಿದವರು ಕಟ್ಟುವ ಬೆಲೆಯೆ ಅಂತಿಮ ಎನ್ನುವ ಕಟ್ಟುಪಾಡುಗಳು...

ಯಾವುದೇ ಅಂಜಿಕೆಯಿಲ್ಲದೇ ಸಾಯಿಸುವ ಮೂಕ ಪ್ರಾಣಿಗಳ ವೇದನೆಯನ್ನು ಕೇಳದೆ ಸಾಯಿಸುವ ಕಾಲದಲ್ಲಿಯೂ ರಕ್ತವು ಪೋಲಾಗದಂತೆ ಬಸಿದುಕೊಳ್ಳುವ ಕಟುಕರು, ಸಾಯುವ ವೇಳೆಯಲ್ಲಿಯೂ ಸತ್ತ ಮೇಲೇಯೂ ಕೃತಕ ವಿಧಾನದಲ್ಲಿ ಜೀವ ಸೃಷ್ಟಿಸಲು ಯೋಗ್ಯವಾದ ಕಸಾಯಿಖಾನೆಯ ದನಗಳು.

ಸೃಷ್ಟಿಕಾರ್ಯ ಸುಲಭದಲ್ಲಿ ಆಗಬಹುದು, ಆದರೇ ಪ್ರಸವ ಸುಲಭದಲ್ಲಿ ಅಗಲಾರದು, ಹೆಣ್ಣೋಬ್ಬಳು ಹೊಸ ಜೀವವನ್ನು ಭೂಮಿಗೆ ತರಲುಪಡುವ ಅನುಭವಿಸುವ ಸಂಕಟ ಮತ್ತೆಂದೂ ಇನ್ನೊಮ್ಮೆ ಮಗುವನ್ನು ಹೆರಲೆಬಾರದು ಎಂದುಕೊಂಡರು ಮಗುವಿನ ಮುಖನೋಡಿದಗ ಮತ್ತೊಮ್ಮೆ ತಾಯಿಯಾಗುವ ಬಯಕೆಯೂ ಚಿಗುರೋಡೆಯುತ್ತದೆ....

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ....

- ಮಂಜುಳಾ ಅಜಯ್ ಭಾರದ್ವಜ್

MORE FEATURES

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...

ಶಿವಾಜಿ ಟೆಂಟ್ʼನಲ್ಲಿ ನನ್ನನ್ನು ಬಹಳವಾಗಿ ಸೆಳೆದದ್ದು ಪದ ಬಳಕೆ

20-11-2024 ಬೆಂಗಳೂರು

“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ...