"ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ ಎನ್ನುತ್ತಾರೆ. ಅಂಧಶ್ರದ್ಧೆಯಿಂದ ಮನುಷ್ಯ ಹೊರಬರಬೇಕಿದೆ," ಎನ್ನುತ್ತಾರೆ ಡಾ. ಎಂ.ವಿ. ನಾಗರಾಜರಾವ್ ಅವರು ತಮ್ಮ ‘ಮಹಾ ಯೋಗಿನಿ’ ಕಾದಂಬರಿಗೆ ಬರೆದ ಲೇಖಕರ ನುಡಿ.
ಇದೊಂದು ರೋಚಕ ಕತೆ. ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ 'ಕರ್ಣ-ಪಿಶಾಚಿನಿ' ಅವರ ವಶವಾಗುತ್ತದೆ.
ಯಾವುದೇ ಚಮತ್ಕಾರಕ್ಕೆ ಪಂಥಾಹ್ವಾನ ನೀಡುವುದು ಸುಲಭದ ಮಾತಲ್ಲ. ಈ ಕಾಲದಲ್ಲಿ ಅನೇಕ ಚಮತ್ಕಾರಿಗಳು ತಮ್ಮ ಚಮತ್ಕಾರದ ಮೂಲಕ ಮುಗ್ಧ ಜನರನ್ನು ಶೋಷಿಸಿ ಹಣ ಗಳಿಸುವ ಉದ್ದೇಶದಿಂದ ಚಮತ್ಕಾರದ ಅಂಗಡಿಗಳನ್ನು ತೆರೆದಿದ್ದಾರೆ. ಅಮಾಯಕ ಜನರನ್ನು ಮರುಳು ಮಾಡಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಅವರು ವಾಸ್ತವವಾಗಿ ಆಧ್ಯಾತ್ಮಿಕ ಶಕ್ತಿಯಿಂದ ಚಮತ್ಕಾರಗಳನ್ನು ತೋರಿಸಬಲ್ಲರೇನು?
ಸುರೇಶ್ ಸೋಮಪುರ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಚಮತ್ಕಾರಗಳನ್ನು ಮಾನವ ಕಲ್ಯಾಣಕ್ಕಾಗಿ ಪ್ರಯೋಗಿಸಲು ನಿರ್ಧರಿಸುತ್ತಾರೆ. ಮನುಷ್ಯ ಜೀವನವನ್ನು ಹೇಗೆ ಕಳೆಯ ಬೇಕೆಂದು ಪ್ರತಿಪಾದಿಸುತ್ತಾರೆ.
ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ ಎನ್ನುತ್ತಾರೆ. ಅಂಧಶ್ರದ್ಧೆಯಿಂದ ಮನುಷ್ಯ ಹೊರಬರಬೇಕಿದೆ. ಬದುಕಲು ಹೊಸ ಮಾರ್ಗವನ್ನು ಕಂಡುಕೊಳ್ಳಲು ಇಲ್ಲಿಯ ಸತ್ಯಕತೆ ಪ್ರೇರಣೆ ನೀಡುತ್ತದೆ.
"ಕರ್ಣ-ಪಿಶಾಚಿನಿ" ವಶವಾದ ನಂತರ ಲೇಖಕರು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ. ಎದುರಿಗಿರುವವರ ಆಂತರ್ಯವನ್ನು ತಿಳಿದ ನಂತರ ಅವರಿಗೆ ಅಸಹ್ಯಉಂಟಾಗುತ್ತದೆ. ಇದರಿಂದ ಬೇಸತ್ತು "ಕರ್ಣ-ಪಿಶಾಚಿನಿ"ಯನ್ನು 'ಕಲ್ಪನಾಯೋಗ'ದ ಮೂಲಕ ದೂರ ಮಾಡುತ್ತಾರೆ. ಅದರಿಂದ ಬಿಡುಗಡೆ ಹೊಂದುತ್ತಾರೆ.
"ಅಘೋರಿಗಳ ನಡುವೆ", "ಕಂಪನ", "ನಾಲ್ಕನೆಯ ಆಯಾಮ" – ಕೃತಿಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ದಿ॥ ಸುರೇಶ್ ಸೋಮಪುರರ ಮತ್ತೊಂದು ರೋಚಕ ನೈಜ ಕತೆ ನಮ್ಮ ಮುಂದಿದೆ. ಅವರು ಬದುಕಿದ್ದಾಗ. ಈ ಕತೆಯನ್ನು ಜನರಿಗೆ ತಿಳಿಸಬೇಕು. ಅವರನ್ನು ಮೂಢನಂಬಿಕೆಯಿಂದ ಬಳಲುವುದನ್ನು ತಪ್ಪಿಸಬೇಕೆಂದು ಹೇಳಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲು ಒಪ್ಪಿ ಆಶೀರ್ವದಿಸಿದ್ದು ನನ್ನ ಭಾಗ್ಯವೇ ಹೌದು.
ಈ ಅಪರೂಪದ ರೋಚಕ ಕತೆಯನ್ನು ನಾಡಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ 'ಅಂಕಿತ ಪುಸ್ತಕ'ದ ಶ್ರೀ ಪ್ರಕಾಶ್ ಕಂಬತ್ತಳ್ಳಿ, ಶ್ರೀಮತಿ ಪ್ರಭಾ ದಂಪತಿಗಳು ಪ್ರಕಟಿಸು ತಿರುವುದು ನನಗೆ ತುಂಬ ಸಂತೋಷವನ್ನುಂಟುಮಾಡಿದೆ. ಅವರಿಗೆ ನನ್ನ ಅನಂತ ವಂದನೆಗಳು.
ಈ ಪುಸ್ತಕವನ್ನು ಅಂದಗೊಳಿಸಲು ಶ್ರಮಿಸಿರುವ ಎಲ್ಲ ಆತ್ಮೀಯ ಬಂಧುಗಳಿಗೆ ನಮಸ್ಕಾರಗಳು. ನನ್ನ ಬರವಣಿಗೆ ಕೆಲಸದಲ್ಲಿ ಸದಾ ಉತ್ಸಾಹದ ಮಾತು ಹೇಳುವ ನನ್ನ ಹಿರಿಯ ಮಗ ಶ್ರೀ ಎಂ.ಎನ್. ರಾಘವೇಂದ್ರರಾವ್ ಮತ್ತು ಪತ್ನಿ ಶ್ರೀಮತಿ ನಾಗರತ್ನರಾವ್‌ಗೆ ಶುಭ. ನನ್ನ ಕಾದಂಬರಿಗಳನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುವ ಎಲ್ಲ ಕನ್ನಡ ಬಂಧುಗಳಿಗೆ ನಮನಗಳು.
-ಡಾ. ಎಂ.ವಿ. ನಾಗರಾಜರಾವ್
ನಿವೃತ್ತ ಪ್ರಾಚಾರ್ಯರು
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.