"'ಕಟ್ಟ' ಕತೆಯ ರಾಜೇಶ ಕರೋನಾದಿಂದಾಗಿ ಕೆಲಸ ಕಳೆದುಕೊಂಡು, ಊರಿಗೆ ಬರುತ್ತೇನೆ ಎಂದು ಅಣ್ಣನಿಗೆ ಹೇಳಿದರೆ, ಬರಬೇಡ ಬಂದರೆ, ಪಂಪ್ ರೂಮಿನಲ್ಲಿ ಇರಬೇಕು ಎಂದಾಗ, ಬೇರೆ ದಾರಿ ಕಾಣದೆ ಇರಬೇಕಾಗಿ ಬಂದಾಗ, ಅವನ ಪಾಲಿಗೆ ಬಂದ ಜಮೀನಿನಲ್ಲಿ ಉತ್ತು ಬಿತ್ತು ಬೆಳೆದುಕೊಡುವವನು, ಗಣಪ. ಅವರಿಂದ ತಿರಸ್ಕಾರಕ್ಕೆ ಒಳಗಾದ ಕೆಳಜಾತಿಯವನು," ಎನ್ನುತ್ತಾರೆ ರಘುನಾಥ್ ಕೃಷ್ಣಮಾಚಾರ್. ಅವರು ಪಿ.ಬಿ ಪ್ರಸನ್ನ ಅವರ ‘ಅಹುದೇ ಎನ್ನಯ ರಮಣ’ ಕೃತಿ ಕುರಿತು ಬರೆದ ವಿಮರ್ಶೆ.
ಯಕ್ಷಗಾನ ಪ್ರಸಂಗವೊಂದರ ಹಾಡಿನ ಸಾಲನ್ನು, ಶೀರ್ಷಿಕೆಯನ್ನಾಗಿ ಹೊಂದಿರುವ ಈ ಕಥಾ ಸಂಕಲನದಲ್ಲಿ, ವೈವಿಧ್ಯಮಯವಾದ ಕಥೆಗಳು ಇವೆ. ಅವನ್ನು ಮೂರು ಭಾಗಗಳಲ್ಲಿ ನೋಡಬಹುದು. ಅವು;
1:ಕೊರೋನಾ ಕಾಲದ ಕತೆಗಳು
2: ಪುರಾಣ ಮತ್ತು ವರ್ತಮಾನದ ಮುಖಾಮುಖಿಯ ಕತೆ
3: ವಿಷಮ ದಾಂಪತ್ಯದ ಕತೆಗಳು.
1: ಕೊರೊನ ಕಾಲದ ಕತೆಗಳು: ಸಾಮಾನ್ಯವಾಗಿ ಅದು ತಂದಿಟ್ಟ ದುರಂತಗಳೇ ಹೆಚ್ಚು. ಅದರಲ್ಲೂ ಸಂಬಂಧಗಳ ನೈಜ ಸ್ವರೂಪವನ್ನು ಅವು ಬತ್ತಲುಗೊಳಿಸಿದವು. ಅವುಗಳ ಜೊತೆಗೆ ಇಲ್ಲಿ ಹೊಸ ಮಾನವೀಯ ಸಂಬಂಧಗಳ ಸ್ಥಾಪಿಸಿದ ಕತೆಗಳು ಇರುವುದು ವೈಶಿಷ್ಟ್ಯವಾಗಿದೆ. ಅವುಗಳಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದ ಜನರನ್ನು ಭಿಕಾರಿಗಳನ್ನಾಗಿಸಿದ ದುರ್ಬರ ಪ್ರಸಂಗ. ಅಂತಹ ವಿಷಮ ಸ್ಥಿತಿಯಲ್ಲಿ ಸರ್ಕಾರ ಅಂತಹವರ ನೆರವಿಗೆ ಎಂದು ಸ್ಥಾಪಿಸಿದ ಜನತಾ ಕ್ಯಾಂಟೀನ್ಗಳು ಜನರನ್ನು ಬೆಸೆಯುವ ಸಾಧನಗಳಾಗುವುದು ಇಲ್ಲಿ ವಿಶೇಷ. ಗುರುತು ಕತೆಯಲ್ಲಿ ಒಬ್ಬಳಾದ ಹಿಂದೂ ವಿಧವೆ ಅಜ್ಜಿ ರಾಜೀವಿ ಮತ್ತು ಮೂರು ಮಕ್ಕಳ ಮುಸ್ಲಿಂ ಹೆಣ್ಣು ಐಶಾಬಿ ಪರಸ್ಪರರ ನೆರವಿಗೆ ನಿಲ್ಲುವ ಹೃದಯ ಸ್ಪರ್ಶಿ ಕತೆಯೊಂದು ಇಲ್ಲಿದೆ. ಆ ಅಜ್ಜಿ ತನ್ನ ಪಾಲಿನ ತಿಂಡಿಯನ್ನು ಪಡೆಯಲು, ಆ ಹೆಣ್ಣಿಗೆ ತನ್ನ ಜಾಗವನ್ನು ಬಿಟ್ಟು ಕೊಟ್ಟಾಗ, ಅವಳು ತನಗೆ ಸಿಕ್ಕ ಆರು ಇಡ್ಲಿಗಳಲ್ಲಿ ಮೂರು ತನಗೆ ಸಾಕು, ಎಂದು ಉಳಿದ ಮೂರನ್ನು ಅಜ್ಜಿಯ ಕೈಗೆ ಕೊಟ್ಟು, ಇವು ನಿಮ್ಮ ಮೊಮ್ಮಕ್ಕಳಿಗೆ ಎಂದು, ಒಂಬತ್ತು ಮೈಲಿಗಳ ದೂರದಲ್ಲಿರುವ ಅವಳ ಮನೆಗೆ ಹೋಗಲು, ಕಿತ್ತು ಹೊಗಿದ್ದ ಅವಳ ಚಪ್ಪಲಿಯ ಉಂಗುಷ್ಟಕ್ಕೆ ತನ್ನಲ್ಲಿ ಇದ್ದ, ಸೇಫ್ಟಿ ಪಿನ್ನನ್ನು ತೆಗೆದು ಹಾಕಿ ಕೊಡುತ್ತಾಳೆ. ಆಗ ಅವಳು ಹೇಳುವ ಮಾತು "ಅಮ್ಮನ ಮಾತು ನಾನು ಕೇಳಿದೆ, ಮಗಳ ಮಾತನ್ನು ಈಗ ನೀವು ಕೇಳಬೇಕು". ಎತ್ತಣ ಮಾಮರ ಎತ್ತಣ ಕೋಗಿಲೆ - ಅಲ್ಲಮನ ವಚನವನ್ನು ನೆನಪು ತರುವಷ್ಟು ಪರಿಣಾಮಕಾರಿಯಾಗಿದೆ. ಏಕೆಂದರೆ ಹಸಿವೆಂಬ ಹೆಬ್ಬಾವು ಎಲ್ಲರಿಗೂ ಒಂದೇ ಅಲ್ಲವೇ?
ಈ ಭಾಗದ ಇನ್ನೊಂದು ಕತೆ, ಅಡುಗೆ ಭಟ್ಟನಾದ ವಾದಿರಾಜನದು. ತಾನು ಶಾಲೆಯ ಬಡ ಹುಡುಗನೊಬ್ಬನಿಗೆ ತೋರಿಸಿದ ಔದಾರ್ಯದ ಫಲ, ಅವನನ್ನು ಇದೇ ಸಂದರ್ಭದಲ್ಲಿ ನೆರವಿಗೆ ಬರುತ್ತದೆ. ಅದೇ ಕ್ಯಾಂಟೀನಿನಲ್ಲಿ ಆ ಹುಡುಗ ಮ್ಯಾನೇಜರ್ ಆಗಿ, ತನ್ನ ಪಾಲಿನ ಊಟವನ್ನು ಇವನ ಜೊತೆಗೆ ಹಂಚಿಕೊಳ್ಳುತ್ತಾನೆ. ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬುದಕ್ಕೆ ಈ ಕತೆ ನಿದರ್ಶನ.
'ಕಟ್ಟ' ಕತೆಯ ರಾಜೇಶ ಕರೋನಾದಿಂದಾಗಿ ಕೆಲಸ ಕಳೆದುಕೊಂಡು, ಊರಿಗೆ ಬರುತ್ತೇನೆ ಎಂದು ಅಣ್ಣನಿಗೆ ಹೇಳಿದರೆ, ಬರಬೇಡ ಬಂದರೆ, ಪಂಪ್ ರೂಮಿನಲ್ಲಿ ಇರಬೇಕು ಎಂದಾಗ, ಬೇರೆ ದಾರಿ ಕಾಣದೆ ಇರಬೇಕಾಗಿ ಬಂದಾಗ, ಅವನ ಪಾಲಿಗೆ ಬಂದ ಜಮೀನಿನಲ್ಲಿ ಉತ್ತು ಬಿತ್ತು ಬೆಳೆದುಕೊಡುವವನು, ಗಣಪ. ಅವರಿಂದ ತಿರಸ್ಕಾರಕ್ಕೆ ಒಳಗಾದ ಕೆಳಜಾತಿಯವನು.
ಈ ಮೂಲಕ ಕೊರೋನಾ ಹಳೆಯ ರಕ್ತ ಸಂಬಂಧಗಳ ಹುಸಿತನ ಬಯಲಾಗಿ, ಹೊಸ ಮಾನವೀಯ ಸಂಬಂಧಗಳಿಗೆ ಕಾರಣವಾಗುವುದನ್ನು ಚಿತ್ರಿಸುವ ಈ ಕಥೆಗಳು, ಲೇಖಕರ ಮೌಲ್ಯ ಪ್ರಜ್ಞೆಗೆ ನಿದರ್ಶನಗಳು. ಒಡೆವ ಮತ್ತು ಒಂದುಗೂಡಿಸುವ ಸಾಧನವಾಗಿ ಕರೋನಾ ಬೀರಿದ ಪ್ರಭಾವಕ್ಕೆ ಮೇಲೆ ಉಲ್ಲೇಖಿಸಿದ ಕತೆಗಳು ನಿದರ್ಶನಗಳು.
ಪುರಾಣ ಮತ್ತು ವರ್ತಮಾನದ ಮುಖಾಮುಖಿ: ಚಿತ್ರಾಂಗದಾ ಬಬ್ರುವಾಹನ ಪ್ರಸಂಗದಲ್ಲಿ , ಅರ್ಜುನನ ಪಾತ್ರ ಮಾಡುವ ನಾರಾಯಣನಿಗೆ ಮರುಳಾದ ವಿಧವೆ ಹೆಣ್ಣೊಬ್ಬಳು, ಅವನಿಗೆ ಬಸಿರಾಗಿ ಮಗನನ್ನು ಹೆತ್ತು, ಅವನನ್ನು ಮನೆಗೆ ಬಂದು ಮಗನನ್ನು ನೋಡಬೇಕು, ಎಂದು ವಿನಂತಿ ಮಾಡಿದಾಗ, ಅವನು ಕುಡಿದು ಬಂದಾಗ, ಮಗ ಬಂದು ಕಾಲಿಗೆ ಬಿದ್ದು ಬೇಡಿಕೊಂಡರು, ತಿರಸ್ಕರಿಸುತ್ತಾನೆ. ಆಗ ಮಗನಿಗೆ ಸಿಟ್ಟು ಬಂದು, ಅವನನ್ನು ಕೊಲ್ಲುವ ಪ್ರಸಂಗವನ್ನು ಒಂದು ರೂಪಕವಾಗಿ ಪರಿಗಣಿಸಬಹುದು.
3: ವಿಷಮ ದಾಂಪತ್ಯದ ಕತೆಗಳು: ರುಂಡ ನಡೆ ಶ್ರೀಮಂತ ಹೆಣ್ಣು ಸುಚಿತ್ರಾ ಅಪ್ಪನ ಒತ್ತಾಯಕ್ಕೆ ಮಣಿದ ಮಗಳು, ಬಡ ಹುಡುಗ ಕೃಷ್ಣಮೂರ್ತಿಯನ್ನು ಮದುವೆಯಾಗಿ, ಅವನನ್ನು ನಿರಂತರವಾಗಿ ಹಂಗಿಸಿ, ಅವನನ್ನ ಬಿಟ್ಟು ಇನ್ನೊಬ್ಬನ ಜೊತೆಗೆ ಹೋಗುವ ಕತೆ, ಇದಕ್ಕೆ ನಿದರ್ಶನ.
ಈ ಸಂಕಲನದ ವೈಶಿಷ್ಟ್ಯಗಳು:
1: ಕೊರೊನಾ ಕಾಲದ ಸಂಕಷ್ಟದ ಸಂದರ್ಭದಲ್ಲಿ ಹುಸಿ ರಕ್ತ ಸಂಬಂಧಗಳ ಅನಾವರಣದ ಜೊತೆಗೆ, ಸೃಷ್ಟಿಸಿದ ಹೊಸ ಸಂಬಂಧಗಳ ಮಾನವೀಯ ಚಿತ್ರಗಳು.
2: ಪುರಾಣ ವರ್ತಮಾನದಲ್ಲಿ ಸಂಭವಿಸುವ ಪ್ರಕ್ರಿಯೆ.
3: ಆಧುನಿಕತೆ ತಂದೊಡ್ಡುವ ದಾಂಪತ್ಯದ ಬಿಕ್ಕಟ್ಟುಗಳ ಅನ್ವೇಷಣೆ.
4: ದಕ್ಷಿಣ ಕನ್ನಡ ಭಾಷೆಯ ಮೇಲಿನ ಪ್ರಭುತ್ವ. ಗರ್ವ, ರೈಸು, ಸಾ, ಎಣಿಸು ಇತ್ಯಾದಿ. ಇದು ಈ ಕತೆಗಳ ಪ್ರಾದೇಶಿಕತೆಗೆ ಅನಿವಾರ್ಯ. ಆದರೆ ಹೊರಗಿನವರಿಗೆ ಸಂವಹನಕ್ಕೆ ತೊಡಕನ್ನು ಉಂಟು ಮಾಡುತ್ತದೆ. ಆದ್ದರಿಂದ ಕೃತಿಯ ಕೊನೆಯಲ್ಲಿ, ಅವುಗಳಿಗೆ ಟಿಪ್ಪಣಿ ಒದಗಿಸಿದರೆ ಒಳ್ಳೆಯದು.
- ರಘುನಾಥ್ ಕೃಷ್ಣಮಾಚಾರ್
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.