“ಇವ್ರು ಹೆಣಗಳ ಹಿಂದೋ ಇಲ್ಲಾ ಹೆಣಗಳೇ ಇವರ ಹಿಂದೋ ಓಡಾಡಿದಂಗಿದೆ. ಜಗತ್ತಿನ ಖಿನ್ನತೆಗೊಳಗಾದ ಮಹಾಕವಿಯ, ತುಂಬಾ ಸರಳವಾದ ನಾಟುವ ಅದ್ಬುತ ಕವನ ಓದಿದಂತಾಯ್ತು,” ಎನ್ನುತ್ತಾರೆ ಪುಸ್ತಕಮರೆ ಪ್ರಸಾದ ಅವರು ಕಾರ್ತಿಕ್ ಆರ್ ಆವರ “ಸತ್ತವರ ಸೊಲ್ಲು” ಕೃತಿ ಕುರಿತು ಬರೆದ ವಿಮರ್ಶೆ.
ನೀವು ಮೈನ್ ಸ್ಟ್ರೀಮ್ ಮೀಡಿಯಾ ಬಿಟ್ಟು ಆದಷ್ಟು ಸೆನ್ಸಾರಿಂಗ್ ಮತ್ತು ಸರಕಾರದ ಬಲೆಗಳಿಂದ ದೂರವಿರುವ ವಾರ್ತಾ ವಾಹಿನಿಗಳನ್ನ ಗಮನಿಸುತ್ತಾ ಬಂದಿದ್ದರೆ, ( ಮುಖ್ಯವಾಗಿ ಟ್ವಿಟ್ಟರ್ ಈಗ x ಅಂತಾರೆ ) ಭಾರತೀಯ ಸೈನಿಕರು ಹಿಂದಿನ ಕೆಲವು ದಿನಗಳಿಂದ ಹಲವಾರು ಕಾರ್ಯಾಚರಣೆಗಳನ್ನು ನಡೆಸುತ್ತಾ ಇರೋದು,ಒಂದಷ್ಟು ಹೆಣಗಳು ಉರುಳುತ್ತಾ ಇರೋದು ಗೊತ್ತಾಗುತ್ತೆ. ನಕ್ಸಲ್ ಎನ್ಕೌಂಟರ್, 31 ಜನರ ಸಾವು ಅನ್ನುವ ವಿಚಾರಗಳು ತಿಳಿಯುತ್ತೆ. ಅದರೆ ಇಲ್ಲಿ ಯಾರು ಸರಿ ಯಾರು ತಪ್ಪು ಅಂತ ತಲೆಕೆಡಿಸಿಕೊಳ್ಳೋದು ಹೆಚ್ಚಾಗುತ್ತೆ.
ಛತ್ತೀಸಗಢ, ಬಸ್ತರ್, ಬಿಜಾಪುರ ಅಲ್ಲೆಲ್ಲ ಸುತ್ತಮುತ್ತ ಹುಟ್ಟಿಕೊಂಡು ಉಗ್ರವಾಗಿ ಬೆಳೆದೆ ನಕ್ಸಲರ, ಸ್ಥಳೀಯರ, ರಾಜಕೀಯ, ಪೊಲೀಸರ, ಸೈನಿಕರ, ಮುಖ್ಯವಾಗಿ ಹೆಣಗಳ ಕತೆ ಇಲ್ಲಿ ನಮ್ಮ ಲೇಖಕರು ನೋಡಿದ್ದು, ರಿಪೋರ್ಟ್ ಮಾಡಿದ್ದು ಹೇಳ್ತಾ ಹೋಗ್ತಾರೆ.
ಈ ಜನಕ್ಕೆ ಆಶುತೋಷ್ ಅನ್ನೋದಕ್ಕಿಂತ ಅಸಂತೋಷ್ ಅಂತ ಕರೆದಿದ್ರೆ ಚೆನ್ನಾಗಿರೋದು. ನಕ್ಸಲ್ ನಾಡಿನಲ್ಲಿ ಸುತ್ತಾಡಿದ ಒಂಬತ್ತು ತಿಂಗಳಲ್ಲಿ ಬರೀ ಸಾವು, ಕೊಲೆ, ಎನ್ಕೌಂಟರುಗಳನ್ನೇ ನೋಡಿದ್ದು ನೋಡಿದ್ರೆ, ಇವ್ರು ಹೆಣಗಳ ಹಿಂದೋ ಇಲ್ಲಾ ಹೆಣಗಳೇ ಇವರ ಹಿಂದೋ ಓಡಾಡಿದಂಗಿದೆ. ಜಗತ್ತಿನ ಖಿನ್ನತೆಗೊಳಗಾದ ಮಹಾಕವಿಯ, ತುಂಬಾ ಸರಳವಾದ ನಾಟುವ ಅದ್ಬುತ ಕವನ ಓದಿದಂತಾಯ್ತು.
ಈ ಕಡೆ ಪೊಲೀಸರೇ ತಪ್ಲಿಲ್ಲಾ, ಆ ಕಡೆ ನಕ್ಸಲರೆಲ್ಲ ಸರಿ ಅಂತ ಒಂದು ಕಡೆ ವಾಲದೇ ಎರಡೂ ಕಡೆಯ ವಿಷಯಗಳನ್ನ ಹೇಳಿದ್ದು ನನಗೆ ಇಷ್ಟ ಆಯ್ತು. ಇನ್ನ ಸಾವುಗಳನ್ನ, ಅನ್ಯಾಯಗಳನ್ನ, ಪರಿಸ್ಥಿತಿಯನ್ನ, ಹಲ್ಲೆಗಳನ್ನ, ಚಿದ್ರಚಿದ್ರವಾದ ದೇಹಗಳನ್ನ ಬಣ್ಣ ಹಚ್ಚದೆ ನೇರವಾಗಿ ಹೇಳಿದ್ದು ಅಲ್ಲಿನ ವಾತಾವರಣ ಗಂಭೀರತೆಯನ್ನ, ಸರಕಾರದ ಆಲಸಿತನವನ್ನ ಅಲ್ಲಿನ ಹಾಗೆ ಅನುಭವಿಸುವಂತಾಯ್ತು. ಕೆಲವೊಂದು ವಿಷಯಗಳು ತುಂಬಾನೇ ಆಶ್ಚರ್ಯ ಹುಟ್ಟಿಸದವು ( ಉದಾ: ಭಾರತದ ನಕಾಶೆಯಲ್ಲಿ ಗುರತಾಗದ ಹಳ್ಳಿಗಳು )ತುಂಬಾ ಇಷ್ಟ ಆಯ್ತು.
ಅನುವಾದ ಹೃದಯ ಸಮುದ್ರವನ್ನ ಕಲಕುತ್ತೆ. ತುಂಬಾ ಚೆನ್ನಾಗಿ ನೇರ ನೇರ ನಮ್ಮವರೇ ಬರದಂಗಿದೆ.
- ಪುಸ್ತಕಮರೆ ಪ್ರಸಾದ
"ಲೋಕವನ್ನೇ ನಡುಗಿಸಿದ ಕರೋನಾ ಕಾಲದಲ್ಲಿ ನಡೆದಿದೆ ಎಂದು ಈಗ ಬಗೆಯಲಾಗುತ್ತಿರುವ ಬ್ರಷ್ಟಾಚಾರದ ಕಾಳಮುಖದ ಪರಿಚಯ ಮತ್...
“ತಮ್ಮ ವೃತ್ತಿ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯ ಹಿಂದೆ ಬಿದ್ದ ಡಾ. ಸೂರ್ಯಕುಮಾರ್ ಅವರು, ಸಲೀಸಾಗಿ ಓದಿಸಿಕೊಂ...
"ದೇಹವನ್ನು ಕೇವಲ ಒಂದು ಮಾಧ್ಯಮವಾಗಿಸಿಕೊಳ್ಳುವ ಅಥವಾ ಮಾಧ್ಯಮವನ್ನಷ್ಟೇ ಆಗಿಸಿಕೊಳ್ಳಬೇಕಾಗುವ ಹಾಗೂ ಬುದ್ಧಿ ಮನಸ್ಸ...
©2024 Book Brahma Private Limited.